ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಚಿಂತನೆ !
ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಚಿಂತನೆ !

July 30, 2018
  • ಬೃಂದಾವನದ ವಿನ್ಯಾಸಗಾರ ಜರ್ಮನಿಯ ತೋಟಗಾರಿಕಾ ಪಿತಾಮಹ ಜಿ.ಹೆಚ್.ಕ್ರುಂಬೀಗೆಲ್‍ರವರ ಮರಿಮೊಮ್ಮಗಳಿಂದ ವಿರೋಧ
  • ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‍ನ ರೂವಾರಿ

ಮೈಸೂರು: ಜರ್ಮನಿಯ ತೋಟಗಾರಿಕಾ ಪಿತಾಮಹರಾಗಿದ್ದ ದಿ. ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರ ಮೊಮ್ಮಗಳಾದ ಅಲಿಯಾ ಫೆಲ್ಲ್ ಗಾರ್ಡಿನರ್ ಕ್ರುಂಬಿಗೆಲ್‍ರವರು ಬೃಂದಾವನ ಉದ್ಯಾನವನವನ್ನು ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರವರು ಬೆಂಗಳೂರಿನ laalbagh botanical gardens ನಲ್ಲಿ ವೈವಿದ್ಯಮಯ ಗಿಡಗಳನ್ನು ನೆಟ್ಟು ಅದರ ಶ್ರೀಮಂತ ಹೆಸರಿನ ಹೊದಿಕೆಯ ರೂವಾರಿಯಾಗಿದ್ದಾರೆ.

ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಜರ್ಮನಿಯ ಕ್ರುಂಬಿಗೆಲ್‍ರನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಉದ್ಯಾನವನಗಳನ್ನು ವಿಶಿಷ್ಟ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಇಲ್ಲಿಗೆ ಕರೆತಂದರು. ಬೆಂಗಳೂರಿನ ಅನೇಕ ಉದ್ಯಾನವನಗಳನ್ನು ಅಭಿವೃದ್ದಿ ಪಡಿಸಿದ ಕ್ರುಂಬಿಗೆಲ್‍ರವರು, eco-zone ಎಂದು ಕರೆಯಲಾಗುವ ಹೆಸರಿನ ವಲಯವನ್ನು ಬೆಂಗಳೂರಿನ ಸುತ್ತಲೂ ಸೃಷ್ಟಿಸಲು ಶ್ರಮಪಟ್ಟಿದ್ದರು. ಲಂಡನ್‍ನ ತಮ್ಮ ನಿವಾಸದಿಂದ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಆಲಿಯಾ ಫೆಲ್ಪ್ಸ್ ಗಾರ್ಡಿನರ್ ಕ್ರುಂಬಿಗೆಲ್‍ರವರು ಬಾರೀ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಕೆಆರ್‌ಎಸ್‌ನ ಬೃಂದಾವನ ಉದ್ಯಾನವನವನ್ನು ಅಮೆರಿಕ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸರ್ಕಾರದ ಚಿಂತನೆಯು ತಮಗೆ ತೀವ್ರ ಬೇಸರ ಉಂಟುಮಾಡಿದೆ ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜುಲೈ 5ರಂದು ಮಂಡಿಸಿದ ಆಯವ್ಯಯ Budget)ದಲ್ಲಿ ಡಿಸ್ನಿಲ್ಯಾಂಡ್ ಪರಿವರ್ತನೆಗಾಗಿ ರೂ. 5 ಕೋಟಿಯನ್ನು ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಬಜೆಟ್ ಘೋಷಣೆಯ ನಂತರ, ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್‍ರವರು ಕೆಆರ್‌ಎಸ್‌ ಡ್ಯಾಮ್‍ಗೆ ಕಳೆದವಾರ ಭೇಟಿ ನೀಡಿ, ಡಿಸ್ನಿಲ್ಯಾಂಡ್ ವಿನ್ಯಾಸದ ಬಗ್ಗೆ ಒಂದು ನೀಲಿನಕ್ಷೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಒಂದು ಮುಕ್ತಪತ್ರ (open letter) ಬರೆದು ಅಲಿಯಾ ಕ್ರುಂಬಿಗೆಲ್‍ರವರು, ಬೃಂದಾವನಕ್ಕೆ ಅಂತರಾಷ್ಟ್ರೀಯ ಮೌಲ್ಯವಿದ್ದು, ಈ ಉದ್ಯಾನವನ್ನು international council on moment and sides (ICOMOS)ನ ಮಾರ್ಗದರ್ಶನಗಳ ಅನುಸಾರವಾಗಿಯೇ ನಿರ್ವಹಿಸಬೇಕಾಗಿರುವುದರಿಂದ, ಡಿಸ್ನಿಲ್ಯಾಂಡ್ ಪ್ರಸ್ತಾವನೆಯನ್ನು ಸಾರಾಸಗಟಾಗಿ ಕೈಬಿಡುವಂತೆ ಕೋರಿದ್ದಾರೆ. ICOMOS ಮಾರ್ಗದರ್ಶನಗಳ ಪ್ರಕಾರ, ಯಾವುದೇ ಐತಿಹಾಸಿಕ ಉದ್ಯಾನವನವನ್ನು ತನ್ನದೇ ಆದ ನೈಸರ್ಗಿಕ ವಾತಾವರಣದಿಂದ ಬೇರ್ಪಡಿಸಲಾಗದು, ಆ ಉದ್ಯಾನವನ ನಗರ ಪ್ರದೇಶದಲ್ಲಿರಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿರಲಿ, ಸ್ವಾಭಾವಿಕವಾದದ್ದಾಗಲೀ ಅಥವಾ ಕೃತಕ ಸೃಷ್ಠಿಯಾಗಿರಲಿ. ಉದ್ಯಾನವನವನ್ನು ಅದರದೇ ಆದ ವಾತಾವರಣದಲ್ಲಿ ಹಾಗೂ ಭೌಗೋಳಿಕ ವಾತಾವರಣಕ್ಕೆ ಯಾವುದೇ ಮಾರ್ಪಾಡುಗಳಿಲ್ಲದೇ ಸಂರಕ್ಷಿಸಬೇಕು ಎಂದೂ ಸಹ ICOMOS ನ ಮಾರ್ಗದರ್ಶಿ ಸೂತ್ರಗಳು ಹೇಳುತ್ತವೆ.

ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍

“ಚಾರಿತ್ರಿಕ ಉದ್ಯಾನವನವೊಂದರ ಪುನರುಜ್ಜೀವನ/ ಪುನಶ್ಚೇತನದ ಯಾವುದೇ ಕೆಲಸಗಳನ್ನು, ಪೂರ್ವ ಸಂಶೋಧನೆಯಿಲ್ಲದೇ ಕೈಗೊಳ್ಳಬಾರದು. ಈ ಸಂಶೋಧನೆಯ ಆಧಾರದ ಮೇಲೆ ಒಂದು ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಿ, ಅದನ್ನು ಪರಿಣಿತರ ತಂಡಕ್ಕೆ ಅವಗಾಹನೆಗೆ ಕಳಿಸಿ, ಅವರಿಂದ ಪೂರ್ವಾನುಮತಿ ಪಡೆದ ನಂತರವಷ್ಟೇ ಯಾವುದೇ ಕೆಲಸಗಳನ್ನು ಕೈಗೊಳ್ಳಬೇಕು ಎಂದೂ ಸಹ ಮಾರ್ಗದರ್ಶಿ ಸೂತ್ರಗಳು ತಿಳಿಸುತ್ತವೆ.

“ಉತ್ತರ ಪ್ರದೇಶದ ತಾಜ್‍ಮಹಲ್‍ನಷ್ಟೇ ಐತಿಹಾಸಿಕ ಮೌಲ್ಯವನ್ನು ಬೃಂದಾವನ ಉದ್ಯಾನವನ ಹೊಂದಿಲ್ಲವೆಂದು ನನಗೆ ತಿಳಿದಿದೆ. ಆದರೆ ಆ ಮೌಲ್ಯ ತಾಜ್‍ಮಹಲ್‍ನಷ್ಟೇ ಸಮನಾಗಿರಬೇಕು. ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯು, ತನ್ನ ಅತ್ಯಮೂಲ್ಯವಾದ ಆಸ್ತಿಗಳನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಉತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು”, ಎಂದು ಅಲಿಯಾ ಫೆಲ್ಪ್ಸ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಟಿಪ್ಪಣಿ: ಬೃಂದಾವನ ಗಾರ್ಡನ್ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಯೋಜನೆ ರೂಪಿಸುತ್ತಿರುವ ಬಗ್ಗೆ `ಮೈಸೂರು ಮಿತ್ರ’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ಜುಲೈ 11ರ `ಮೈಸೂರು ಮಿತ್ರ’ ಸಂಚಿಕೆಯಲ್ಲಿ `ಆಕಸ್ಮಿಕ ಮುಖ್ಯಮಂತ್ರಿ ಇಂತಹ ಆಯವ್ಯಯ ಮಂಡಿಸಬಾರದಿತ್ತು’ ಎಂಬ ಶೀರ್ಷಿಕೆಯಡಿ ತಮ್ಮ ಛೂಮಂತ್ರ ಲೇಖನದಲ್ಲಿ ಈ ಕೆಳಕಂಡಂತೆ ಪ್ರಸ್ತಾಪಿಸಿದ್ದಾರೆ.

ನಾನು ಬೇರೆ ಬೇರೆ ದೇಶಗಳಲ್ಲಿರುವ ಮೂರು ಡಿಸ್ನಿ ಲ್ಯಾಂಡ್ (3 Disney land)ಗಳನ್ನು ನೋಡಿದ್ದೇನೆ. ಅದರಲ್ಲಿ ಒಂದು ಜಪಾನ್ ದೇಶದಲ್ಲಿರುವ ಡಿಸ್ನಿ ವಲ್ರ್ಡ್ (Disney World). ಅಂದ ಹಾಗೆ ಇದಕ್ಕೆ ಬೇಕಾದ ವಿಶಾಲವಾದ ಭೂಮಿಯು ಕೆಆರ್‌ಎಸ್‌ನಲ್ಲಿದೆಯೇ? ದೊಡ್ಡ ದೊಡ್ಡ ಅಣೆಕಟ್ಟೆಯಿಂದ ಮುಂಗಾರು ಹಂಗಾಮಿನಲ್ಲಿ ರಭಸದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುವ ನೀರಿನ ತಟದಲ್ಲಿ ಈ ಉದ್ದೇಶಿತ Disney land ಸ್ಥಾಪಿಸುವುದು ಸೂಕ್ತವೇ? ರಾಜ್ಯ ಸರ್ಕಾರದ ಈ ನಿರ್ಧಾರವು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಸೂರು ನಗರವನ್ನು ಪ್ಯಾರಿಸ್ ನಗರದಂತೆ ಮಾಡುತ್ತೇನೆಂದು ಹೇಳಿದ ರೀತಿಯಂತೆಯೇ ಅಪಹಾಸ್ಯಕ್ಕೀಡಾಗುತ್ತದೆ. ವಿಪರ್ಯಾಸವೆಂದರೆ ಈ ರೀತಿಯ ಎಲ್ಲಾ ಬೇಜವಾಬ್ದಾರಿ ಹೇಳಿಕೆಗಳನ್ನು ನಾವು ನಂಬುತ್ತಾ ಬಂದಿರುವುದು! ಕುಮಾರಸ್ವಾಮಿಯವರು ತಮ್ಮ ಬಜೆಟ್‍ನಲ್ಲಿ ಈ Disney landಗಾಗಿ ಕೇವಲ ರೂ. 5 ಕೋಟಿಯನ್ನು ಮೀಸಲಿರಿಸಿದ್ದಾರೆ. ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ! ಆದರೆ, ಕುಮಾರಸ್ವಾಮಿಯವರ ಅಭಿಮಾನಿಯೊಬ್ಬರ ಪ್ರಕಾರ, ರೂ.5 ಕೋಟಿ ಬರೀ ಯೋಜನಾ ವರದಿ ಸಿದ್ಧಪಡಿಸಲು ಮಾತ್ರ ಕಾಯ್ದಿರಿಸಲಾಗಿದೆಯಂತೆ.

Translate »