ಹೆದ್ದಾರಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಕೋಣದ ಕಳೇಬರ ಪತ್ತೆ; ದುರ್ನಾತದಿಂದ ವಾಹನ ಸವಾರರಿಗೆ ನರಕಯಾತನೆ
ಹಾಸನ

ಹೆದ್ದಾರಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಕೋಣದ ಕಳೇಬರ ಪತ್ತೆ; ದುರ್ನಾತದಿಂದ ವಾಹನ ಸವಾರರಿಗೆ ನರಕಯಾತನೆ

July 31, 2018

ಬೇಲೂರು:  ತಾಲೂಕಿನ ಹಳೇಬೀಡು ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೋಣದ ಕಳೇಬರ ದುರ್ವಾ ಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಯಾತನೆ ಅನುಭವಿ ಸುವಂತಾಗಿದೆ.

ಕಳೇಬರ ಊದಿ ಕೊಂಡಿದ್ದು, ಯಾವುದೇ ಸಮಯದಲ್ಲ ದರೂ ಒಡೆ ಯುವ ಸಾಧ್ಯತೆಯಿದೆ. ಈಗಾ ಗಲೇ ಸಾಕಷ್ಟು ದೂರದ ವರೆಗೂ ಕೆಟ್ಟ ವಾಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಊದಿಕೊಂಡಿರುವ ಕಳೇಬರ ಒಡೆದರೆ ದುರ್ನಾತ ಮತ್ತಷ್ಟು ಹೆಚ್ಚಾಗಲಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಕಷ್ಟದ ಕೆಲಸವಾಗಲಿದೆ.

ರಕ್ತ ಚಂದ್ರ ಗ್ರಹಣದ ಮಾರನೇ ದಿನ ಶಿರ ಕಡಿದ ಸ್ಥಿತಿಯಲ್ಲಿ ಕೋಣನ ಕಳೇಬರ ಪತ್ತೆಯಾಗಿದ್ದು, ವಾಮಚಾರಕ್ಕಾಗಿ ಕಡಿಯಲಾಗಿದೆ ಎಂದು ಸ್ಥಳೀಯರಿಂದ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಗ್ರಾಪಂ ಆಡಳಿತ, ಅರಣ್ಯ ಇಲಾಖೆ ಅಥವಾ ಹೆದ್ದಾರಿ ಅಧಿಕಾರಿಗಳು ಗಮನ ಹರಿಸಿ ಕಳಬರ ತೆರವಿಗೆ ಮುಂದಾಗಬೇಕಾಗಿದೆ.

Translate »