ಸೋಮವಾರಪೇಟೆ: ಯುವಕ ಆತ್ಮಹತ್ಯೆ
ಕೊಡಗು

ಸೋಮವಾರಪೇಟೆ: ಯುವಕ ಆತ್ಮಹತ್ಯೆ

July 31, 2018

ಸೋಮವಾರಪೇಟೆ: ಇಲ್ಲಿನ ಲೋಡರ್ಸ್ ಕಾಲೋನಿ ನಿವಾಸಿ ಸಚಿನ್ (15) ಇಂದು ಸಂಜೆ 6 ಘಂಟೆಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲೋಡರ್ಸ್ ಕಾಲೋನಿಯ ಮಹದೇವ ಮತ್ತು ಮಾಧವಿ ಎಂಬುವವರ ಪುತ್ರ ಸಚಿನ್ ಮಸಗೋಡು ಚೆನ್ನಮ್ಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆಗಿದ್ದು ಇಂದು ಸಂಜೆ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Translate »