Tag: Mandya

ಸಕ್ಕರೆ ನಾಡಲ್ಲಿ ಅರಳಿದ ‘ಕಮಲ’
ಮಂಡ್ಯ

ಸಕ್ಕರೆ ನಾಡಲ್ಲಿ ಅರಳಿದ ‘ಕಮಲ’

December 10, 2019

ಮಂಡ್ಯ, ಡಿ.9- ಸಕ್ಕರೆ ನಾಡು ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದ್ದು, ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ಗೆಲುವು ಸಾಧಿಸುತ್ತಿದ್ದಂತೆ ಮಂಡ್ಯ, ಮಳವಳ್ಳಿ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ಸೇರಿದಂತೆ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಸಾಧಿಸುತ್ತಿದ್ದಂತೆಯೇ ಮಂಡ್ಯ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರ ಮಾಚರಣೆ…

ಬಿಜೆಪಿ ಹಣದ ಹೊಳೆಯನ್ನೇ ಹರಿಸಿತು
ಮಂಡ್ಯ

ಬಿಜೆಪಿ ಹಣದ ಹೊಳೆಯನ್ನೇ ಹರಿಸಿತು

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ಉಪ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ ಕಾರಣ ನಾನು ಸೋಲಬೇಕಾಯಿತು ಎಂದು ಜೆಡಿಎಸ್‍ನ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರ ದಿಂದ ಹೊರಬಂದು ಮಾತನಾಡಿದ ಅವರು, ಶುದ್ಧಹಸ್ತರು ಎಂದು ಹೇಳಿಕೊಳ್ಳುವ ಆರ್‍ಎಸ್‍ಎಸ್‍ನವÀರೇ ಮತದಾರರಿಗೆ ಹಣ ಹಂಚಿದ್ದಾರೆ. ಮತದಾರರ ತೀರ್ಪಿಗೆ ತಲೆ ಬಾಗುತ್ತೇನೆ. ಗೆದ್ದಿರುವ ನಾರಾಯಣಗೌಡರು ಅಭಿವೃದ್ಧಿ ಕೆಲಸ ಮಾಡಲಿ. ಅವರು ನಮ್ಮ ಪಕ್ಷದಲ್ಲಿ ಶಾಸಕರಾಗಿದ್ದಾಗ ಪಕ್ಷ ಸಂಘಟನೆ ಮಾಡಿರಲಿಲ್ಲ. ನಾನು ಹೊಸದಾಗಿ ಸಂಘಟನೆ ಮಾಡಿಕೊಂಡು ಚುನಾವಣೆ…

ಚಪ್ಪಲಿಯಲ್ಲಿ ಹೊಡೆದವರಿಗೆ ಫಲಿತಾಂಶ ಸೂಕ್ತ ಉತ್ತರ
ಮಂಡ್ಯ

ಚಪ್ಪಲಿಯಲ್ಲಿ ಹೊಡೆದವರಿಗೆ ಫಲಿತಾಂಶ ಸೂಕ್ತ ಉತ್ತರ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ತಮ್ಮ ಜನ್ಮ ಭೂಮಿಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಬಹಳ ವರ್ಷಗಳ ಕನಸು, ಅದು ಈಗ ನನಸಾಗಿದೆ. ಅವರು ಮುಖ್ಯಮಂತ್ರಿಗಳಾಗಿದ್ದರಿಂದ ನನ್ನ ಗೆಲುವು ಸುಲಭವಾಯಿತು ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದರು. ಪಟ್ಟಣದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ನನ್ನ ಹಂಬಲವಾಗಿತ್ತು. ಕೆ.ಆರ್.ಪೇಟೆಯನ್ನು ಎರಡನೇ ಶಿಕಾರಿ ಪುರ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ…

ಹಣ, ಅಧಿಕಾರದ ದುರ್ಬಳಕೆ: ಆರೋಪ
ಮಂಡ್ಯ

ಹಣ, ಅಧಿಕಾರದ ದುರ್ಬಳಕೆ: ಆರೋಪ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)-ಹಣ ಹಾಗೂ ಅಧಿಕಾರ ದುರ್ಬಳಕೆಯಿಂದ ಬಿಜೆಪಿ ನಡೆಸಿದ ಇಂತಹ ಕೆಟ್ಟ ಚುನಾ ವಣೆಯನ್ನು ನಾನು ಎಂದೂ ನೋಡಿರಲಿಲ್ಲ. ಹಣ ಹಾಗೂ ಅಧಿ ಕಾರ ಬಲದಿಂದ ಚುನಾವಣೆ ಗೆಲ್ಲಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಶಾಂತಿಯುತವಾಗಿ ಚುನಾವಣೆ ನಡೆದಿದೆ. ನನ್ನ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧೃತಿಗೆಡಬಾರದು. ಪಕ್ಷ ನಿಮ್ಮ ಜತೆಗೆ…

ಕೆ.ಆರ್.ಪೇಟೆ ಗೆಲುವು ರಾಜ್ಯದಲ್ಲೇ ಅತ್ಯಂತ ತೃಪ್ತಿ, ಸಂತೋಷ ತಂದಿದೆ
ಮಂಡ್ಯ

ಕೆ.ಆರ್.ಪೇಟೆ ಗೆಲುವು ರಾಜ್ಯದಲ್ಲೇ ಅತ್ಯಂತ ತೃಪ್ತಿ, ಸಂತೋಷ ತಂದಿದೆ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ನಮ್ಮ ತಂದೆ ಯಡಿಯೂರಪ್ಪ ಅವರಿಗೆ ಜನ್ಮ ನೀಡಿದ ಊರು ಕೆ.ಆರ್.ಪೇಟೆ. ಕ್ಷೇತ್ರದ ಜನತೆ, ನಾನು ಬಿಎಸ್‍ವೈ ಪುತ್ರ ಎಂದು ಪ್ರಚಾರಕ್ಕೆ ಹೋದಾಗ ತಮ್ಮೂರಿನ ಮಗನಂತೆ ನನ್ನನ್ನು ಸ್ವೀಕಾರ ಮಾಡಿದರು. ಕೆ.ಆರ್.ಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ವಿಶ್ವಾಸ ಉಳಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಗೆಲುವಿಗಿಂತ ಅತ್ಯಂತ ಹೆಚ್ಚು ತೃಪ್ತಿ ಹಾಗೂ ಸಂತೋಷ ವನ್ನು ಕೆ.ಆರ್.ಪೇಟೆ ತಂದಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪೇಟೆಯಲ್ಲಿ ಬಿಜೆಪಿ…

ನಾವು… ನಾವು… ಎಂದು ಮೆರೆದವರು ಮಣ್ಣಾಗಿದ್ದಾರೆ…!
ಮಂಡ್ಯ

ನಾವು… ನಾವು… ಎಂದು ಮೆರೆದವರು ಮಣ್ಣಾಗಿದ್ದಾರೆ…!

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)-ನಾವು, ನಾವು ಎಂದು ಮೆರೆದವರು ಮಣ್ಣಾಗಿದ್ದಾರೆ ಎಂಬುದನ್ನು ಕೆ.ಆರ್.ಪೇಟೆ ಮತದಾರರು ಈ ಚುನಾವಣೆ ಮೂಲಕ ತೋರಿಸಿದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ದೇವೇಗೌಡರ ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರಿನ ಕೆಲವು ಕ್ಷೇತ್ರಗಳು ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂಬುದನ್ನು ಮತ್ತೊಮ್ಮೆ ಕೆ.ಆರ್.ಪೇಟೆ ಕ್ಷೇತ್ರದ ಪ್ರಬುದ್ದ ಮತದಾರರು ಸಾಬೀತು ಮಾಡಿದ್ದಾರೆ. ನಾನು ಹಾಸನದಲ್ಲಿ ಗೆದ್ದಾಗ ಆಕಸ್ಮಿಕ ಎಂದಿದ್ದರು. ಇಲ್ಲಿನ ಗೆಲುವು ಆ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಿದೆ. ಹಣ ಬಲದಿಂದ…

ಕೆ.ಆರ್.ಪೇಟೆ ಮೂಲಕ ಮಂಡ್ಯದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ
ಮಂಡ್ಯ

ಕೆ.ಆರ್.ಪೇಟೆ ಮೂಲಕ ಮಂಡ್ಯದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜನತೆ ಬಿಜೆಪಿಯನ್ನು ಮಂಡ್ಯ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಸುವರ್ಣಾವಕಾಶ ಮಾಡಿಕೊಟ್ಟಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಪ್ರತಿನಿಧಿ ಇರಲಿಲ್ಲ ಎಂಬ ಕೊರಗಿತ್ತು. ಇದೀಗ ಎಲ್ಲಾ ಜಿಲ್ಲೆಯಿಂದಲೂ ನಮಗೆ ಪ್ರತಿನಿಧಿ ಸಿಕ್ಕಂತಾಗಿದೆ. ಈಗ ನಮ್ಮ ಪಕ್ಷದ್ದು ಸ್ಥಿರ ಸರ್ಕಾರವಾಗಿದೆ. ಕ್ಷೇತ್ರದ ಜನ ದೊಡ್ಡ ಬಹುಮಾನ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಯಲ್ಲಿ ಬಿಜೆಪಿ ಖಾತೆ ತೆರೆಯಲು ನಾರಾಯಣಗೌಡರ…

ಕೆಟ್ಟು ನಿಂತ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ: ಸವಾರರಿಬ್ಬರ ಸಾವು
ಮಂಡ್ಯ

ಕೆಟ್ಟು ನಿಂತ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ: ಸವಾರರಿಬ್ಬರ ಸಾವು

December 10, 2019

ಪಾಂಡವಪುರ, ಡಿ.9- ರಸ್ತೆ ಬದಿ ಕೆಟ್ಟು ನಿಂತಿದ್ದ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ನಿವಾಸಿ ಶಿವರುದ್ರಪ್ಪ(24), ಮಹೇಶ್(24) ಸಾವನ್ನಪ್ಪಿದವರು. ಕಾರ್ಯ ನಿಮಿತ್ತ ನಂಜನಗೂಡಿನಿಂದ ಪಾಂಡವಪುರಕ್ಕೆ ಆಗಮಿಸಿದ್ದ ಶಿವರುದ್ರಪ್ಪ ಹಾಗೂ ಮಹೇಶ್ ಕೆಲಸ ಮುಗಿಸಿ ಕೊಂಡು ಭಾನುವಾರ ರಾತ್ರಿ ನಂಜನಗೂಡಿಗೆ ವಾಪಸ್ಸಾಗುವ ವೇಳೆ ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪ ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್‍ನಲ್ಲಿ ಡಿಕ್ಕಿ…

ಗೃಹಿಣಿ ಆತ್ಮಹತ್ಯೆ
ಮಂಡ್ಯ

ಗೃಹಿಣಿ ಆತ್ಮಹತ್ಯೆ

December 10, 2019

ಪಾಂಡವಪುರ, ಡಿ.9- ಹೊಟ್ಟೆನೋವು ತಾಳಲಾರದೇ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟ ಣದ ಶಾಂತಿನಗರದ ನಿವಾಸಿ ಶಿವಕುಮಾರ್ ಪತ್ನಿ ಭವ್ಯಾ(30) ಆತ್ಮಹತ್ಯೆ ಮಾಡಿಕೊಂಡವರು. ಆಗಾಗ್ಗೆ ಕಾಣಿಸಿ ಕೊಳ್ಳುತ್ತಿದ್ದ ಹೊಟ್ಟೆ ನೋವಿಗೆ ಭವ್ಯಾ ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ ಹೊಟ್ಟೆ ನೋವು ಗುಣವಾಗಿರಲಿಲ್ಲ. ಮತ್ತೆ ಭಾನುವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭವ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಇದನ್ನು ಕಂಡ ಪತಿ ಶಿವಕುಮಾರ್ ಪಟ್ಟಣ ಪೊಲೀಸರಿಗೆ ವಿಷಯ…

ಕೆಸಿಎನ್ ಗೆಲುವು: ಹೊಳೆ ಆಂಜನೇಯನಿಗೆ 101 ಈಡುಗಾಯಿ
ಮಂಡ್ಯ

ಕೆಸಿಎನ್ ಗೆಲುವು: ಹೊಳೆ ಆಂಜನೇಯನಿಗೆ 101 ಈಡುಗಾಯಿ

December 10, 2019

ಮದ್ದೂರು, ಡಿ.9- ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆದ್ದರೆ 101 ತೆಂಗಿನ ಕಾಯಿ ಹೊಡೆಯಲಾಗುವುದು ಎಂದು ಹರಕೆ ಕಟ್ಟಿಕೊಂಡು, ಹರಕೆ ಈಡೇರಿದ ಹಿನ್ನೆಲೆಯಲ್ಲಿ ಮನ್‍ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹಾಗೂ ಅವರ ಬೆಂಬಲಿಗರು ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುದಲ್ಲಿ ಈಡುಗಾಯಿ ಹೊಡೆದರು. ಈ ವೇಳೆ ಮಾತನಾಡಿದ ಅವರು, ನಾರಾಯಣಗೌಡರು ಉಪ ಚುನಾವಣೆಯಲ್ಲಿ ಜಯಶೀಲರಾದರೆ ಪಟ್ಟಣದ ಹೊಳೆ ಆಂಜ ನೇಯಸ್ವಾಮಿಗೆ 101 ತೆಂಗಿನ ಕಾಯಿ ಈಡುಗಾಯಿ ಹೊಡೆಯುತ್ತೇನೆಂದು ಹರಕೆ ಕಟ್ಟಿಕೊಳ್ಳಲಾಗಿತ್ತು, ಹರಕೆ ಈಡೇರಿದ ಹಿನ್ನೆಲೆಯಲ್ಲಿ…

1 13 14 15 16 17 56
Translate »