ಬಿಜೆಪಿ ಹಣದ ಹೊಳೆಯನ್ನೇ ಹರಿಸಿತು
ಮಂಡ್ಯ

ಬಿಜೆಪಿ ಹಣದ ಹೊಳೆಯನ್ನೇ ಹರಿಸಿತು

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ಉಪ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ ಕಾರಣ ನಾನು ಸೋಲಬೇಕಾಯಿತು ಎಂದು ಜೆಡಿಎಸ್‍ನ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರ ದಿಂದ ಹೊರಬಂದು ಮಾತನಾಡಿದ ಅವರು, ಶುದ್ಧಹಸ್ತರು ಎಂದು ಹೇಳಿಕೊಳ್ಳುವ ಆರ್‍ಎಸ್‍ಎಸ್‍ನವÀರೇ ಮತದಾರರಿಗೆ ಹಣ ಹಂಚಿದ್ದಾರೆ. ಮತದಾರರ ತೀರ್ಪಿಗೆ ತಲೆ ಬಾಗುತ್ತೇನೆ. ಗೆದ್ದಿರುವ ನಾರಾಯಣಗೌಡರು ಅಭಿವೃದ್ಧಿ ಕೆಲಸ ಮಾಡಲಿ. ಅವರು ನಮ್ಮ ಪಕ್ಷದಲ್ಲಿ ಶಾಸಕರಾಗಿದ್ದಾಗ ಪಕ್ಷ ಸಂಘಟನೆ ಮಾಡಿರಲಿಲ್ಲ. ನಾನು ಹೊಸದಾಗಿ ಸಂಘಟನೆ ಮಾಡಿಕೊಂಡು ಚುನಾವಣೆ ಎದುರಿಸಬೇಕಾಯಿತು. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರಲು ಹಲವು ಮುಖಂಡರು ಸಿದ್ಧರಿದ್ದರು. ಆದರೆ ನಮ್ಮ ಪಕ್ಷದ ಕೆಲವು ಮುಖಂಡರು ಅವರ ನಾಯಕತ್ವಕ್ಕೆ ತೊಂದರೆ ಆಗಲಿದೆ ಎಂಬ ಭಾವನೆ ಯಿಂದ ಅವರು ಸೇರುವುದನ್ನು ತಡೆದಿದ್ದರು. ಆ ಮುಖಂಡರು ಪಕ್ಷಕ್ಕೆ ಬಂದಿದ್ದರೆ, ನಾಲ್ಕು ಸಾವಿರ ಮತಗಳು ನನಗೆ ಹೆಚ್ಚಾಗುತ್ತಿದ್ದವು. ನಾನು ಗೆಲ್ಲುತ್ತಿದ್ದೆನು. ಅದು ಕೂಡಾ ನನ್ನ ಸೋಲಿಗೆ ಕಾರಣವಾಗಿದೆ. ಸೋಲು ತುಂಬಾ ನೋವು ತಂದಿದೆ ಎಂದು ದೇವರಾಜು ಹೇಳಿದರು.

Translate »