Tag: Mysore

ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಹೊಣೆ
ಮೈಸೂರು

ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಹೊಣೆ

December 21, 2019

ಮೈಸೂರು,ಡಿ.20(ಆರ್‍ಕೆ)- ಮಂಗ ಳೂರಿನಲ್ಲಿ ಗುರುವಾರ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ಸಂಸದ ಪ್ರತಾಪ್‍ಸಿಂಹ ಅವರು ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಾದ್ಯಂತ ಸೆಕ್ಷನ್ 144 ರೀತ್ಯಾ ನಿಷೇ ಧಾಜ್ಞೆ ಜಾರಿಯಲ್ಲಿದ್ದರೂ ಪೌರತ್ವ ತಿದ್ದು ಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ನೇರ ಹೊಣೆ ಎಂದರು. ಮಾಜಿ ಸಚಿವ ಯು.ಟಿ.ಖಾದರ್ ಅವರು ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿ ಸಿದರೆ ರಾಜ್ಯ…

ಕಾರು ಕಂದಕಕ್ಕೆ ಉರುಳಿ ವ್ಯಕ್ತಿ ಸಾವು: ಕೆಂಪಯ್ಯನಹುಂಡಿ ಬಳಿ ತಿ.ನರಸೀಪುರ ರಸ್ತೆಯಲ್ಲಿ ದುರಂತ
ಮೈಸೂರು

ಕಾರು ಕಂದಕಕ್ಕೆ ಉರುಳಿ ವ್ಯಕ್ತಿ ಸಾವು: ಕೆಂಪಯ್ಯನಹುಂಡಿ ಬಳಿ ತಿ.ನರಸೀಪುರ ರಸ್ತೆಯಲ್ಲಿ ದುರಂತ

December 21, 2019

ಮೈಸೂರು, ಡಿ.20(ಆರ್‍ಕೆ)-ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಚಾಲಕ ಗಾಯಗೊಂಡಿರುವ ಘಟನೆ ತಿ.ನರಸೀ ಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ರಾಮಕೃಷ್ಣ ನಗರದ ವಾಸು ಲೇಔಟ್ ನಿವಾಸಿ ನಾಗರಾಜ ಭಟ್(55) ಸಾವನ್ನಪ್ಪಿದವರಾಗಿದ್ದು, ಗಾಯ ಗೊಂಡಿರುವ ಕಾರು ಚಾಲಕ ಪ್ರಫುಲ್ಲಾರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ. ಮೈಸೂರಿನಿಂದ ತಿ.ನರಸೀಪುರ ಕಡೆಗೆ ಹುಂಡೈನ ಐ-20 (ಕೆ.ಎ.03, ಎಎಫ್ 3349) ಕಾರಿನಲ್ಲಿ ಹೋಗುತ್ತಿದ್ದಾಗ ಕೆಂಪಯ್ಯನಹುಂಡಿ ಸಮೀಪ ದರ್ಶನ್ ಫಾರಂ ಬಳಿ…

ಮಂಗಳೂರು ಗೋಲಿಬಾರ್: ಪೊಲೀಸರ ವಿರುದ್ಧ ಕ್ರಮಕ್ಕೆ ಎಸ್‍ಡಿಪಿಐ ಆಗ್ರಹ
ಮೈಸೂರು

ಮಂಗಳೂರು ಗೋಲಿಬಾರ್: ಪೊಲೀಸರ ವಿರುದ್ಧ ಕ್ರಮಕ್ಕೆ ಎಸ್‍ಡಿಪಿಐ ಆಗ್ರಹ

December 21, 2019

ಮೈಸೂರು, ಡಿ.20(ಆರ್‍ಕೆಬಿ)- ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದವರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರ ಸಾವಿಗೆ ಕಾರಣರಾದ ಫ್ಯಾಸಿಸ್ಟ್ ಮನೋಸ್ಥಿತಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‍ಡಿಪಿಐ ಮುಖಂಡ ಅಮ್ಜದ್ ಖಾನ್ ಆಗ್ರಹಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ಗೋಲಿಬಾರ್‍ಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಕೋಟಿ ರೂ. ಪರಿಹಾರ ನೀಡಬೇಕು. ಗಾಯಾಳುಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಇಡೀ…

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ಪ್ರತಿಭಟನೆ ಸರಿ, ಶಾಂತಿ ಭಂಗ ಸರಿಯಲ್ಲ
ಮೈಸೂರು

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ಪ್ರತಿಭಟನೆ ಸರಿ, ಶಾಂತಿ ಭಂಗ ಸರಿಯಲ್ಲ

December 21, 2019

ಮೈಸೂರು, ಡಿ.20(ಆರ್‍ಕೆಬಿ)- ಪೌರತ್ವ ಕಾಯ್ದೆ ಜಾರಿಯನ್ನು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಮರ್ಥಿಸಿಕೊಂಡಿ ದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸುದೀರ್ಘ ವಾಗಿ ಚರ್ಚೆ ನಡೆದಿದೆ. ಯಾವುದೋ ಒಂದು ಧರ್ಮದ ವಿರುದ್ಧವಾಗಿ ತಿದ್ದುಪಡಿ ಮಾಡಿಲ್ಲ. ಮುಸ್ಲಿಂ ಸಮು ದಾಯದವರು ಅತೀ ಹೆಚ್ಚು ಸಂಖ್ಯೆಯಲ್ಲಿರುವ ದೇಶ ಗಳಲ್ಲಿ ಭಾರತವು ಒಂದು. ನಮ್ಮಲ್ಲಿರುವ ಎಲ್ಲ ಮುಸ ಲ್ಮಾನರೂ ಭಾರತೀಯರು ಎಂಬುದು ಸ್ಪಷ್ಟವಾಗಿದೆ ಎಂದರು. ಮೈಸೂರಿನಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ಕುರಿತು ಅನಗತ್ಯವಾಗಿ ಗೊಂದಲ ಮೂಡಿಸಲಾಗುತ್ತಿದೆ. ಕಾಂಗ್ರೆಸ್ ಸತತ…

ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗೆ ವಂಚನೆ ಮಹಿಳೆ ವಿರುದ್ಧ ಪ್ರಕರಣ ದಾಖಲು
ಮೈಸೂರು

ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗೆ ವಂಚನೆ ಮಹಿಳೆ ವಿರುದ್ಧ ಪ್ರಕರಣ ದಾಖಲು

December 21, 2019

ಮೈಸೂರು,ಡಿ.20(ಎಸ್‍ಬಿಡಿ)-ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೊಂದು ವಸ್ತು ಡೆಲವರಿ ಆಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಮಹಿಳೆಯೊಬ್ಬರು ಡೆಲವರಿ ಆದ ವಸ್ತುವನ್ನು ತಾವಿಟ್ಟುಕೊಂಡು ಬೇರೊಂದು ವಸ್ತುವನ್ನು ಕಂಪನಿಗೆ ವಾಪಸ್ಸು ಕಳುಹಿಸಿ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಯಲಕ್ಷ್ಮೀಪುರಂ ನಿವಾಸಿ ಅಶ್ವಿನಿ, ಅಮೆಜಾನ್ ಕಂಪನಿಗೆ ವಂಚಿಸಿ, ಸಿಕ್ಕಿಬಿದ್ದಿದ್ದಾರೆ. ಇವರು ಡಿ.9ರಂದು ಮನೋರಮಾ ಹೆಸರಿನಲ್ಲಿ ಆರ್ಡರ್ ಮಾಡಿದ್ದ ಜೀನ್ಸ್ ಪ್ಯಾಂಟ್ ಡಿ.18ರಂದು ಡೆಲವರಿ ಆಗಿತ್ತು. ಬಳಿಕ ಪ್ಯಾಂಟ್ ಸರಿಯಾಗಿಲ್ಲ ಎಂದು ಕೆಲವೇ ಗಂಟೆಗಳಲ್ಲಿ ಕಂಪನಿಗೆ ವಾಪಸ್ಸು ಕಳುಹಿಸಿದ್ದರು. ಈ ಬಗ್ಗೆ…

ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.10ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆಗೆ ನಿರ್ಧಾರ
ಮೈಸೂರು

ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.10ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆಗೆ ನಿರ್ಧಾರ

December 21, 2019

ಮಾಡು ಇಲ್ಲವೆ ಮಡಿ ಹೋರಾಟ: ಇಂದು ಜಿಲ್ಲಾಧಿಕಾರಿಗೆ ಮನವಿ ಮೈಸೂರು, ಡಿ.20(ಆರ್‍ಕೆಬಿ)- ಪಿಂಚಣಿ ಬೇಡಿಕೆ ಈಡೇರಿಸದಿದ್ದರೆ ಜ.10ರಿಂದ ಬೆಂಗಳೂ ರಿನಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿಂಡೇನಹಳ್ಳಿ ಡಾ.ಶರತ್‍ಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರ ನಿವೃತ್ತಿ ಜೀವನದ ಆಸರೆಯಾದ ಪಿಂಚಣಿ ಸೌಲಭ್ಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ…

ಕೊಂಬೆಗೆ ಅನುಮತಿ ಪಡೆದು ಮರವನ್ನೇ ಕತ್ತರಿಸಿದರು!
ಮೈಸೂರು

ಕೊಂಬೆಗೆ ಅನುಮತಿ ಪಡೆದು ಮರವನ್ನೇ ಕತ್ತರಿಸಿದರು!

December 21, 2019

ಮೈಸೂರು,ಡಿ.20(ವೈಡಿಎಸ್)-ಅರಣ್ಯ ಇಲಾಖೆಯು ಸರಸ್ವತಿಪುರಂನ ಈಜು ಕೊಳ ರಸ್ತೆಯಲ್ಲಿನ ಮರವೊಂದರ ಕೆಲವು ಕೊಂಬೆಗಳನ್ನು ತೆಗೆಯಲು ಅನುಮತಿ ನೀಡಿ ದರೆ ಮರವನ್ನೇ ಕತ್ತರಿಸಲಾಗಿದೆ ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ಆರೋಪಿಸಿದ್ದಾರೆ. ಇಲ್ಲಿನ 7ನೇ ಮುಖ್ಯ ರಸ್ತೆ ಸಮೀಪದ ರಸ್ತೆ ಬದಿಯಲ್ಲಿ ಫೆಲ್ಟೊಫಾರಂ ಮರವಿದ್ದು, ಮನೆ ಮೇಲೆ ಹರಡಿಕೊಂಡಿರುವ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಅನುಮತಿ ನೀಡಿತ್ತು. ಆದರೆ, ಒಂದು ಕೊಂಬೆಯೂ ಇಲ್ಲದಂತೆ ಕತ್ತರಿಸಿದ್ದಾರೆ ಎಂದು ದೂರಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಕ್ರಮಕೈಗೊಳ್ಳುವಂತೆ…

ಮೈಸೂರು ಆಕಾಶವಾಣಿಯಲ್ಲಿ `ಸಂಗೀತ ಸನ್ನಿದಿ ನಾದಾಲಯ’
ಮೈಸೂರು

ಮೈಸೂರು ಆಕಾಶವಾಣಿಯಲ್ಲಿ `ಸಂಗೀತ ಸನ್ನಿದಿ ನಾದಾಲಯ’

December 20, 2019

ಮೈಸೂರು, ಡಿ.19(ಪಿಎಂ)- ಒಂದು ಕಾಲದಲ್ಲಿ ಸಂಗೀತ ದಿಗ್ಗಜರು ನುಡಿ ಸುತ್ತಿದ್ದ ಬಗೆಬಗೆಯ ವಾದ್ಯಗಳು ಅಲ್ಲಿ ಅನಾವರಣಗೊಂಡಿವೆ. ಹೌದು, ಮೈಸೂರು ಆಕಾಶವಾಣಿಯ ಆರಂಭದ ದಿನಗಳಲ್ಲಿ ಬಳಸಲ್ಪಡುತ್ತಿದ್ದ ಸಂಗೀತ ವಾದ್ಯಗಳ ವೈವಿಧ್ಯಮಯ ನೋಟವನ್ನು ಇದೀಗ ಕಣ್ತುಂಬಿಕೊಳ್ಳಬಹುದು. ಆಕಾಶವಾಣಿಯ ಆವರಣದಲ್ಲಿ ಇಂತಹ ವಿಶಿಷ್ಟ ಗ್ಯಾಲರಿ ಗುರುವಾರ ಉದ್ಘಾಟನೆಗೊಂಡಿತು. ಬಗೆ ಬಗೆಯ ವೀಣೆ, ತರಾವರಿ ತಬಲ, ಗಿಟಾರ್, ಪಿಟೀಲು ಸೇರಿದಂತೆ ಸಂಗೀತ ವಾದ್ಯಗಳ ಲೋಕವೇ ಅಲ್ಲಿ ಸೃಷ್ಟಿಯಾ ಗಿದ್ದು, ಆಕಾಶವಾಣಿ ಆರಂಭದ ದಿನ ಗಳಲ್ಲಿ ಬಳಕೆ ಮಾಡುತ್ತಿದ್ದ ಈ ಸಂಗೀತ ವಾದ್ಯಗಳ ಸಂರಕ್ಷಣೆ…

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ
ಮೈಸೂರು

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ

December 20, 2019

ಬೆಂಗಳೂರು, ಡಿ.19- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆ ನಡೆದಿರುವ ಮಧ್ಯೆಯೇ ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಸಿಎಎ ಜಾರಿಗೆ ತಂದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಬುಧವಾರ ಮಂಗಳೂರಿನಲ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಗುರುವಾರ ಮಂಗಳೂರಿನಲ್ಲಿ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಪರಿಸ್ಥಿತಿ ಕೈಮೀರಿ ಹೋದಾಗ ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ. ಮಂಗಳೂರಿನ ಗಲಭೆ ಮತ್ತು ಹಿಂಸಾತ್ಮಕ…

ವಿ.ಗಿರೀಶ್‍ರ `ಆಪರೇಷನ್ ಮಾಯ’ ಕೃತಿ ಬಿಡುಗಡೆ
ಮೈಸೂರು

ವಿ.ಗಿರೀಶ್‍ರ `ಆಪರೇಷನ್ ಮಾಯ’ ಕೃತಿ ಬಿಡುಗಡೆ

December 20, 2019

ಮೈಸೂರು,ಡಿ.19(ವೈಡಿಎಸ್)- ನಜರ್‍ಬಾದ್‍ನ ಶ್ರೀ ಕಂಠೀರವ ನರಸಿಂಹ ಸ್ಪೋಟ್ರ್ಸ್ ಕ್ಲಬ್‍ನ ಕೆಬಿಆರ್ ಹಾಲ್ ನಲ್ಲಿ ವಿ.ಗಿರೀಶ್ ಅವರ `ಆಪರೇಷನ್ ಮಾಯ’ ಪುಸ್ತಕ ವನ್ನು ಗುರುವಾರ ಲೋಕಾರ್ಪಣೆಗೊಳಿಸಲಾಯಿತು. ಮೈಸೂರು ಬುಕ್ ಕ್ಲಬ್-2015 ಹೊರತಂದಿರುವ ಪುಸ್ತಕವನ್ನು ಮೈಸೂರು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಸಂಜಯ್ ಶೆಟ್ಟಿ ಬಿಡುಗಡೆಗೊಳಿಸಿದರು. ನಂತರ ಕೃತಿ ಕರ್ತೃ ವಿ.ಗಿರೀಶ್ ಮಾತನಾಡಿ, ಈ ಪುಸ್ತಕದಲ್ಲಿರುವ ಕಥೆ ಕಾಲ್ಪನಿಕ ವಾದರೂ ಅದರಲ್ಲಿರುವ ವೈಜ್ಞಾನಿಕ ಪದಗಳಲ್ಲಿ ಸತ್ಯವಿದೆ. ಪ್ರಸ್ತುತ ಪ್ರತಿಯೊಬ್ಬರಿಗೂ ಮೊಬೈಲ್ ಫೋನ್ ತುಂಬಾ ಮುಖ್ಯವಾಗಿದ್ದು, ಅವಿಭಾಜ್ಯ ಅಂಗವೇ ಆಗಿದೆ. ಆದರೆ, ನಮ್ಮ…

1 102 103 104 105 106 330
Translate »