Tag: Mysore

ಕಸಾಅ ಅಧ್ಯಕ್ಷ ವಸಂತಕುಮಾರ್‍ಗೆ ಅಭಿನಂದನೆ
ಮೈಸೂರು

ಕಸಾಅ ಅಧ್ಯಕ್ಷ ವಸಂತಕುಮಾರ್‍ಗೆ ಅಭಿನಂದನೆ

December 20, 2019

ಮೈಸೂರು, ಡಿ.19(ಎಂಕೆ)- ಕನ್ನಡ ಸಾಹಿತ್ಯ ಕಲಾಕೂಟ, ತ.ವೆಂ.ಸ್ಮಾರಕ ಗ್ರಂಥ ಮಾಲೆ ಮತ್ತು ಕಲ್ಪವೃಕ್ಷ ಟ್ರಸ್ಟ್ ವತಿಯಿಂದ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ನೂತನ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ನಗರದ ಕಲಾಮಂದಿರದ ಮನೆ ಯಂಗಳದಲ್ಲಿ ಆಯೋಜಿಸಿದ್ದ ಅಭಿ ನಂದನಾ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‍ಗೌಡ ಸನ್ಮಾನಿಸಿ, ಅಭಿನಂದಿಸಿದರು. ಬಳಿಕ ಮಾತ ನಾಡಿದ ಅವರು, ರಾಜ್ಯದ ಮಧ್ಯಭಾಗ ದಿಂದ ಬಂದಿರುವ ವಸಂತಕುಮಾರ್, ಇಂದು ನಾಡಿನ ಮನೆ ಮಾತಾಗಿದ್ದಾರೆ. ಇವರದ್ದು ಮೌನವಾಗಿರುವ ಗಟ್ಟಿ ವ್ಯಕ್ತಿತ್ವ ಎಂದು ತಿಳಿದಿದ್ದೇನೆ…

ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಸಂಯೋಜಿತ ಸಂಶೋಧನೆ
ಮೈಸೂರು

ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಸಂಯೋಜಿತ ಸಂಶೋಧನೆ

December 20, 2019

ಮೈಸೂರು, ಡಿ.19(ಪಿಎಂ)-ಎಲ್ಲಾ ವೈದ್ಯ ಕೀಯ ಪದ್ಧತಿಗಳಲ್ಲಿನ ಉತ್ತಮ ಚಿಕಿತ್ಸಾ ವಿಧಾನಗಳನ್ನು ಸದ್ಬಳಕೆ ಮಾಡಿಕೊಂಡು ರೋಗಿಗೆ ಪರಿಪೂರ್ಣ ಯಶಸ್ವಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಶೋಧನೆಗಳು ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀ ಜಯ ದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಸಂಯೋಜಿತ ಸಂಶೋಧನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೈಸೂರಿನ ಶ್ರೀಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಸದಾನಂದ ತಿಳಿಸಿದರು. ಮೈಸೂರಿನ ಕೆಆರ್‍ಎಸ್ ರಸ್ತೆಯ ಬೃಂದಾ ವನ ಬಡಾವಣೆಯಲ್ಲಿರುವ ಸರ್ಕಾರಿ ಆಯು ರ್ವೇದ ಸಂಶೋಧನಾ…

ಜನನಿಬಿಡ ಪ್ರದೇಶದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ರಸ್ತೆಬದಿ ವ್ಯಾಪಾರಿಗಳ ಆಗ್ರಹ
ಮೈಸೂರು

ಜನನಿಬಿಡ ಪ್ರದೇಶದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ರಸ್ತೆಬದಿ ವ್ಯಾಪಾರಿಗಳ ಆಗ್ರಹ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆಯು ರಸ್ತೆ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಮೈಸೂರಿನ ಕೆಲವೊಂದು ಆಯ್ದ ಭಾಗ ಗಳಲ್ಲಿ ಗುರುತಿಸಿರುವ `ನಾನ್ ಹಾಕಿಂಗ್ ಜೋನ್’ಗಳಲ್ಲಿ ಯಾರೂ ರಸ್ತೆ ಬದಿ ವ್ಯಾಪಾರ ಮಾಡಬಾರದೆಂದು ಆದೇಶಿಸಿ ರುವುದರ ಬಗ್ಗೆ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳ ಅಸಮಾಧಾನ ವ್ಯಕ್ತಪಡಿಸಿದೆ. ಸಂಘದ ಮೈಸೂರು ಜಿಲ್ಲಾಧ್ಯಕ್ಷ ಪೈ.ಎನ್. ಚಂದ್ರಶೇಖರ್, ಉಪಾಧ್ಯಕ್ಷ ರಾಮಣ್ಣ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನ್ ಹಾಕಿಂಗ್ ಜೋನ್ ಎಂದು ಗುರು ತಿಸಲಾಗಿರುವ…

ನಾಳೆ `ವಿದ್ಯುತ್ ಗ್ರಾಹಕರ ಸಂವಾದ’ ಸಭೆ
ಮೈಸೂರು

ನಾಳೆ `ವಿದ್ಯುತ್ ಗ್ರಾಹಕರ ಸಂವಾದ’ ಸಭೆ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಮೈಸೂರು ತಾಲೂಕು ವ್ಯಾಪ್ತಿಯ ಉಪ ವಿಭಾಗಗಳಾದ ವಿ.ವಿ.ಮೊಹಲ್ಲಾ, ಹೂಟಗಳ್ಳಿ, ಕುವೆಂಪುನಗರ ಮತ್ತು ರಾಮಕೃಷ್ಣನಗರ ಕಚೇರಿಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‍ಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳ 3ನೇ ಶನಿವಾರದಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಅದರಂತೆ ಡಿ.21ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂ, ಎಂ.ಜಿ.ಕೊಪ್ಪಲು, ಒಂಟಿಕೊಪ್ಪಲು ಮತ್ತು ಮೇಟಗಳ್ಳಿ ಶಾಖೆ ವ್ಯಾಪ್ತಿಯ ಪ್ರದೇಶಗಳ ಗ್ರಾಹಕರು ವಿ.ವಿ.ಮೊಹಲ್ಲಾದ ಉಪವಿಭಾಗ ಕಚೇರಿಯಲ್ಲಿ ದೂರು ದಾಖಲಿಸಿ,…

ಮುತ್ತಮ್ಮ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದ ಅಭಿಯೋಜಕಿ
ಮೈಸೂರು

ಮುತ್ತಮ್ಮ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದ ಅಭಿಯೋಜಕಿ

December 20, 2019

xಮೈಸೂರು, ಡಿ.19(ಆರ್‍ಕೆ)- ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಮೈಸೂ ರಿನ ಮುತ್ತಮ್ಮ ಪೂಣಚ್ಚ ಅವರನ್ನು ನೇಮಿಸಲಾಗಿದೆ. ಡಿಸೆಂಬರ್ 7ರಂದು ಮುತ್ತಮ್ಮ ಅವರು ಚಾಮರಾಜನಗರ ನ್ಯಾಯಾಲಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು ಮೈಸೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ಸಮರ್ಥವಾಗಿ ಸರ್ಕಾರದ ಪರ ವಾದ ಮಂಡಿಸುವ ಮೂಲಕ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕುರುಬರ ಸಂಘದ ಚುನಾವಣೆ
ಮೈಸೂರು

ಕುರುಬರ ಸಂಘದ ಚುನಾವಣೆ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಡಿ.22ರಂದು ಚುನಾವಣೆ ನಡೆಯಲಿದೆ. ನಾನು ಸಹ ಸ್ಪರ್ಧಿಸಿದ್ದು, ನನ್ನ ಕ್ರಮ ಸಂಖ್ಯೆ 12, ಗಾಜಿನ ಲೋಟದ ಚಿಹ್ನೆ ಎಂದು ಎಸ್.ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕುರುಬ ಸಮಾಜದ ನೆನೆÀಗುದಿಗೆ ಬಿದ್ದಿರುವ ಹಲವು ವಿಚಾರಗಳಿಗೆ ಸ್ಪಂದಿಸಿ ಕೆಲಸ ಮಾಡಲು ಇಚ್ಛಿಸಿದ್ದೇನೆ. ಕುರುಬರು ಈ ದೇಶದ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗವೆಂದು 1889ರಲ್ಲಿ…

ನಿರ್ಭಯಾ ಕೇಸ್; ಅಪರಾಧಿ ವಕೀಲರಿಗೆ 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
ಮೈಸೂರು

ನಿರ್ಭಯಾ ಕೇಸ್; ಅಪರಾಧಿ ವಕೀಲರಿಗೆ 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

December 20, 2019

ನವದೆಹಲಿ,ಡಿ.19-ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಪವನ್‍ಕುಮಾರ್, `ಘಟನೆ ನಡೆದಾಗ ನಾನು ಬಾಲಕನಾಗಿದ್ದೆ. ಹಾಗಾಗಿ ನನ್ನನ್ನೂ ಬಾಲಾಪರಾಧಿ ಎಂದೇ ಪರಿಗಣಿಸಿ, ಗಲ್ಲುಶಿಕ್ಷೆಯಿಂದ ಪಾರು ಮಾಡಿ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಅನಗತ್ಯವಾಗಿ ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ ಅಪರಾಧಿ ಪರ ವಕೀಲರಿಗೆ 25 ಸಾವಿರ ರೂ. ದಂಡವನ್ನೂ ವಿಧಿಸಿದೆ. ಅಪರಾಧಿಯ ಅರ್ಜಿಯನ್ನು ಗುರುವಾರ ಬೆಳಿÀಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮೊದಲಿಗೆ ಅಪರಾಧಿ ಪವನ್ ಗುಪ್ತಾ ಪರ ವಕೀಲರಿಗೆ ಸೂಕ್ತ ದಾಖಲೆ ನೀಡಲು…

ಸೈಬರ್ ಭದ್ರತೆ, ಐಓಟಿ ಕುರಿತಂತೆ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನ: ಮೈಸೂರು ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಸೂಕ್ತ
ಮೈಸೂರು

ಸೈಬರ್ ಭದ್ರತೆ, ಐಓಟಿ ಕುರಿತಂತೆ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನ: ಮೈಸೂರು ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಸೂಕ್ತ

December 19, 2019

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ ಮೈಸೂರು,ಡಿ.18(ಪಿಎಂ)-ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಮೈಸೂರು ಸೂಕ್ತವಾಗಿದ್ದು, ಈಗಾಗಲೇ ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಮೈಸೂರು ಹೊಂದಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅಭಿಪ್ರಾಯಪಟ್ಟರು. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಹೋಟೆಲ್ ಕಂಟ್ರಿ ಇನ್‍ನಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಮೈಸೂರು ಘಟಕದ ವತಿಯಿಂದ ಸೈಬರ್ ಭದ್ರತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ/ಅಂತರ್ಜಾಲ ಸಂಪರ್ಕಿತ ಸಾಧನ-ಸಲಕರಣೆ)-ಡೆಸ್ಟಿನೇಷನ್ ಮೈಸೂರು’ ಕುರಿತಂತೆ ಬುಧವಾರ…

ವಿದ್ಯಾರ್ಥಿಗಳು ಹಿಂಜರಿಕೆ ಇಲ್ಲದೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು
ಮೈಸೂರು

ವಿದ್ಯಾರ್ಥಿಗಳು ಹಿಂಜರಿಕೆ ಇಲ್ಲದೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು

December 19, 2019

ಸಾಹಿತಿ ಬನ್ನೂರು ಕೆ.ರಾಜು ಅಭಿಮತ ಮೈಸೂರು,ಡಿ.18(ಪಿಎಂ)- ಪಾಠ-ಪ್ರವಚನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಗಳು ಹಿಂಜರಿಕೆ ಇಲ್ಲದೆ ಶಿಕ್ಷಕರಲ್ಲಿ ಹಾಗೂ ಸಹಪಾಠಿಗಳಲ್ಲಿ ಮುಕ್ತ ಚರ್ಚೆ ನಡೆಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಜೊತೆಗೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು. ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಲ್ಲಿರುವ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅಖಿಲ ಕರ್ನಾಟಕ ಪ.ಪೂ. ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ವತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಕುರಿತು ಬುಧವಾರ ಹಮ್ಮಿ ಕೊಂಡಿದ್ದ…

ಬಾಲ್ಯವಿವಾಹ ತಡೆ ಕುರಿತು ನಿತ್ಯ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ
ಮೈಸೂರು

ಬಾಲ್ಯವಿವಾಹ ತಡೆ ಕುರಿತು ನಿತ್ಯ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ

December 19, 2019

ಮೈಸೂರು,ಡಿ.18(ಆರ್‍ಕೆ)-ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ‘ಬಾಲ್ಯ ವಿವಾಹ’ ತಡೆಗಟ್ಟುವ ಬಗ್ಗೆ ಮಕ್ಕಳಿಗೆ ನಿತ್ಯ ಪ್ರತಿಜ್ಞಾವಿಧಿ ಬೋಧಿಸಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಇಂದಿಲ್ಲಿ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ (Child Helpline-1098) 2018ರ ಡಿಸೆಂಬರ್‍ನಿಂದ 2019ರ ನವೆಂಬರ್ ಮಾಹೆವರೆಗೆ ಒಂದು ವರ್ಷದ ಅವಧಿ ಯಲ್ಲಿ ಸಾಧಿಸಿದ ಪ್ರಗತಿ ಕುರಿತಂತೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ…

1 103 104 105 106 107 330
Translate »