ಕಸಾಅ ಅಧ್ಯಕ್ಷ ವಸಂತಕುಮಾರ್‍ಗೆ ಅಭಿನಂದನೆ
ಮೈಸೂರು

ಕಸಾಅ ಅಧ್ಯಕ್ಷ ವಸಂತಕುಮಾರ್‍ಗೆ ಅಭಿನಂದನೆ

December 20, 2019

ಮೈಸೂರು, ಡಿ.19(ಎಂಕೆ)- ಕನ್ನಡ ಸಾಹಿತ್ಯ ಕಲಾಕೂಟ, ತ.ವೆಂ.ಸ್ಮಾರಕ ಗ್ರಂಥ ಮಾಲೆ ಮತ್ತು ಕಲ್ಪವೃಕ್ಷ ಟ್ರಸ್ಟ್ ವತಿಯಿಂದ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ನೂತನ ಅಧ್ಯಕ್ಷರಾದ ಡಾ.ಬಿ.ವಿ.ವಸಂತ ಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ನಗರದ ಕಲಾಮಂದಿರದ ಮನೆ ಯಂಗಳದಲ್ಲಿ ಆಯೋಜಿಸಿದ್ದ ಅಭಿ ನಂದನಾ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‍ಗೌಡ ಸನ್ಮಾನಿಸಿ, ಅಭಿನಂದಿಸಿದರು. ಬಳಿಕ ಮಾತ ನಾಡಿದ ಅವರು, ರಾಜ್ಯದ ಮಧ್ಯಭಾಗ ದಿಂದ ಬಂದಿರುವ ವಸಂತಕುಮಾರ್, ಇಂದು ನಾಡಿನ ಮನೆ ಮಾತಾಗಿದ್ದಾರೆ. ಇವರದ್ದು ಮೌನವಾಗಿರುವ ಗಟ್ಟಿ ವ್ಯಕ್ತಿತ್ವ ಎಂದು ತಿಳಿದಿದ್ದೇನೆ ಎಂದರು.

ವಸಂತಕುಮಾರ್ ಪ್ರಾಧ್ಯಾಪಕರು, ಬರಹ ಗಾರರು ಮತ್ತು ವ್ಯಾಖ್ಯಾನಕಾರರೂ ಆಗಿ ದ್ದಾರೆ. ಗಮಕ ವ್ಯಾಖ್ಯಾನಕ್ಕೆ ಕೇಳುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿಯಿದೆ. ಇಂತಹ ಗಮಕ ವ್ಯಾಖ್ಯಾನಗಳನ್ನು ವಸಂತ ಕುಮಾರ್ ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಬಣ್ಣಿಸಿದರು. ಪ್ರಾಯ ಚಿಕ್ಕದಾದರೂ ಹಲವಾರು ಆಯ್ಕೆ ಸಮಿತಿಯ ಸದಸ್ಯ ರಾಗಿ, ದಸರಾ ಕವಿಗೋಷ್ಠಿಯ ಮುಂದಾ ಳತ್ವ ವಹಿಸಿ, ನಿರ್ವಹಣೆ ಕುರಿತಂತೆ ಅಪಾರ ಅನುಭವವನ್ನು ವಸಂತಕುಮಾರ್ ಪಡೆದುಕೊಂಡಿದ್ದಾರೆ. ಯಾರು ತಮ್ಮ ಅಧಿಕಾರದ ಅವಧಿಯಲ್ಲಿ ಕಪ್ಪುಚುಕ್ಕೆಗಳಾ ಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿ ಸುತ್ತಾರೋ ಅವರಿಗೆ ಮತ್ತೆ ಮತ್ತೆ ಅಧಿಕಾರ ಗಳು ಮತ್ತು ಪುರಸ್ಕಾರಗಳು ತಾವಾಗಿಯೇ ಬರುತ್ತವೆ ಎಂದು ಹೇಳಿದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ನೀಲಗಿರಿ ಎಂ.ತಳವಾರ ಮಾತನಾಡಿ, ಕರ್ನಾ ಟಕ ಸಾಹಿತ್ಯ ಅಕಾಡೆಮಿ ಶ್ರೀಮಂತವಾಗಿದೆ. ಜನರಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕಾಗಿದೆ. ಇದು ಸವಾಲಿನ ಕೆಲಸವಾಗಿದ್ದು, ವಸಂತಕುಮಾರ್ ಪೂರ್ವ ಯೋಜನೆಗಳ ಮೂಲಕ ಎಲ್ಲಾ ಜವಾಬ್ದಾರಿ ಗಳನ್ನು ನಿರ್ವಹಿಸುತ್ತಾರೆ ಎಂಬ ವಿಶ್ವಾಸ ವಿದೆ. ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯೂ ಆದ ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕವಯತ್ರಿ ಡಾ.ಲತಾ ರಾಜಶೇಖರ್, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ತ.ವೆಂ. ಗ್ರಂಥಮಾಲೆ ಪ್ರಕಾಶಕ ಟಿ.ಎಸ್.ಛಾಯಾ ಪತಿ, ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ಡಾ.ಹೆಚ್.ಬಿ. ರಾಜಶೇಖರ್, ಡಾ.ಜಗ ದೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »