ವಿ.ಗಿರೀಶ್‍ರ `ಆಪರೇಷನ್ ಮಾಯ’ ಕೃತಿ ಬಿಡುಗಡೆ
ಮೈಸೂರು

ವಿ.ಗಿರೀಶ್‍ರ `ಆಪರೇಷನ್ ಮಾಯ’ ಕೃತಿ ಬಿಡುಗಡೆ

December 20, 2019

ಮೈಸೂರು,ಡಿ.19(ವೈಡಿಎಸ್)- ನಜರ್‍ಬಾದ್‍ನ ಶ್ರೀ ಕಂಠೀರವ ನರಸಿಂಹ ಸ್ಪೋಟ್ರ್ಸ್ ಕ್ಲಬ್‍ನ ಕೆಬಿಆರ್ ಹಾಲ್ ನಲ್ಲಿ ವಿ.ಗಿರೀಶ್ ಅವರ `ಆಪರೇಷನ್ ಮಾಯ’ ಪುಸ್ತಕ ವನ್ನು ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ಮೈಸೂರು ಬುಕ್ ಕ್ಲಬ್-2015 ಹೊರತಂದಿರುವ ಪುಸ್ತಕವನ್ನು ಮೈಸೂರು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಸಂಜಯ್ ಶೆಟ್ಟಿ ಬಿಡುಗಡೆಗೊಳಿಸಿದರು. ನಂತರ ಕೃತಿ ಕರ್ತೃ ವಿ.ಗಿರೀಶ್ ಮಾತನಾಡಿ, ಈ ಪುಸ್ತಕದಲ್ಲಿರುವ ಕಥೆ ಕಾಲ್ಪನಿಕ ವಾದರೂ ಅದರಲ್ಲಿರುವ ವೈಜ್ಞಾನಿಕ ಪದಗಳಲ್ಲಿ ಸತ್ಯವಿದೆ. ಪ್ರಸ್ತುತ ಪ್ರತಿಯೊಬ್ಬರಿಗೂ ಮೊಬೈಲ್ ಫೋನ್ ತುಂಬಾ ಮುಖ್ಯವಾಗಿದ್ದು, ಅವಿಭಾಜ್ಯ ಅಂಗವೇ ಆಗಿದೆ. ಆದರೆ, ನಮ್ಮ ಮುಂದಿನ ಎಲ್ಲಾ ಸಮಸ್ಯೆಗಳಿಗೂ ಮೊಬೈಲೇ ಕಾರಣವಾಗಬಹುದು ಎಂದು ಹೇಳಿದರು.

ಐದಾರು ವರ್ಷಗಳ ಹಿಂದೆ ನಮಗೆ ಏನೇ ಬೇಕಾ ದರೂ ಅಮ್ಮನ ಬಳಿ ಕೇಳುತ್ತಿದ್ದೆವು. ಆದರೆ, ಇಂದು ತಂತ್ರ ಜ್ಞಾನ ನಮಗೆ ಅಮ್ಮನ ರೀತಿಯಾಗಿದ್ದು, ಮೆಷಿನ್‍ನೊಂದಿಗೆ ಮಾತನಾಡುತ್ತಿದ್ದೇವೆ. ಗೂಗಲ್ ಸಂಸ್ಥೆಯು ಒಂದು ಯೋಜನೆ ಮೇಲೆ ಕೆಲಸ ಮಾಡುತ್ತಿದ್ದು, 2029ಕ್ಕೆ ಪೂರ್ಣ ಗೊಳಿಸುವ ಗುರಿ ಹೊಂದಿದೆ. ಇದು ಒಬ್ಬ ಡಿಜಿಟಲ್ ತದ್ರೂಪಿ ಯನ್ನು ಸೃಷ್ಟಿಸುವ ಕಡೆಗೆ ಸಂಶೋಧನೆಯಲ್ಲಿ ನಿರತ ರಾಗಿದ್ದಾರೆ. ಅದೇನಾದರೂ ಸಾಧ್ಯವಾದರೆ ಅಸಾಧ್ಯವಾದದ್ದು ಏನೂ ಇರಲ್ಲ. ಕ್ಷಣ ಮಾತ್ರದಲ್ಲಿ ಜಪಾನಿ, ಕೊರಿಯಾ ಭಾಷೆಯನ್ನು ಕಲಿಯಬಹುದು ಎಂದು ಹೇಳಿದರು.

ಪಬ್ಜಿ ಗೇಮ್, ಇದು ಒಂದು ರೀತಿಯ ವಾರ್ ಮಿಷನ್ ಇದ್ದಂತೆ. ಇದು ನಿಮ್ಮನ್ನು ಕಂಟ್ರೋಲ್ ಮಾಡುತ್ತಿದೆ. ಇದು ಶೂಟಿಂಗ್ ಗೇಮ್ ಆಗಿರುವುದರಿಂದ ನಿಮ್ಮನ್ನು ಅಸಮಾಧಾನದ ಕಡೆಗೆ ಕೊಂಡೊಯ್ಯುತ್ತದೆ. ಹಾಗೆಯೇ ವಾಟ್ಸಪ್, ಫೇಸ್‍ಬುಕ್ ಕೂಡ ಇಂತಹದ್ದೇ ಒಂದು ಜಾಲ. ಇವು ನಿಮ್ಮನ್ನು ಪ್ರಚೋದಿಸುವುದಷ್ಟೇ ಅಲ್ಲದೆ, ನಿಮ್ಮ ಸುತ್ತಮುತ್ತಲಿನವರನ್ನು ಪ್ರಚೋದಿಸುವಂತೆ ಮಾಡುತ್ತದೆ. ಒಟ್ಟಾರೆ, ಮನುಷ್ಯನನ್ನು ಡಿಜಿಟಲ್ ಮನುಷ್ಯನಾಗಿ ಮಾಡುವ ಕಡೆಗೆ ಸಂಶೋಧನೆಗಳು ನಡೆಯುತ್ತಿವೆ ಎಂದರು.

ಸಂವಾದ: ಡಿಜಿಟಲ್ ಬ್ಯಾಂಕನ್ನು ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನಮ್ಮ ಹಣ ಸುರಕ್ಷಿತವಾಗಿ ರುತ್ತದೆಯೇ? ಎಂಬ ಪ್ರಶ್ನೆಗೆ, ಯುಎಸ್‍ನಲ್ಲಿರುವ ಹಣವೂ ಸೇಫಲ್ಲ ಎಂದು ಗಿರೀಶ್ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಐಟಿಡಿಸಿ ನಿವೃತ್ತ ಹಿರಿಯ ಉಪಾಧ್ಯಕ್ಷ ಅನಂತ ಬಲ್ಲಾಳ್ ಅವರಿಗೆ ಮೊದಲ ಪುಸ್ತಕ ಪ್ರತಿಯನ್ನು ಹಸ್ತಾಂತರಿಸಲಾಯಿತು. ಮೈಸೂರು ಲಿಟರರಿ ಫೋರಂನ ಅಧ್ಯಕ್ಷೆ ಶುಭ ಸಂಜಯ್ ಅರಸ್ ಉಪಸ್ಥಿತರಿದ್ದರು.

Translate »