ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಸಂಯೋಜಿತ ಸಂಶೋಧನೆ
ಮೈಸೂರು

ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಸಂಯೋಜಿತ ಸಂಶೋಧನೆ

December 20, 2019

ಮೈಸೂರು, ಡಿ.19(ಪಿಎಂ)-ಎಲ್ಲಾ ವೈದ್ಯ ಕೀಯ ಪದ್ಧತಿಗಳಲ್ಲಿನ ಉತ್ತಮ ಚಿಕಿತ್ಸಾ ವಿಧಾನಗಳನ್ನು ಸದ್ಬಳಕೆ ಮಾಡಿಕೊಂಡು ರೋಗಿಗೆ ಪರಿಪೂರ್ಣ ಯಶಸ್ವಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಶೋಧನೆಗಳು ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀ ಜಯ ದೇವ ಹೃದ್ರೋಗ ಸಂಸ್ಥೆ, ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಸಂಯೋಜಿತ ಸಂಶೋಧನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮೈಸೂರಿನ ಶ್ರೀಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಸದಾನಂದ ತಿಳಿಸಿದರು.

ಮೈಸೂರಿನ ಕೆಆರ್‍ಎಸ್ ರಸ್ತೆಯ ಬೃಂದಾ ವನ ಬಡಾವಣೆಯಲ್ಲಿರುವ ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ವತಿ ಯಿಂದ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ `ಶಿಷ್ಟಾಚಾರ ಬರವಣಿಗೆ ಮತ್ತು ಸಂಶೋ ಧನಾ ವಿಧಾನ’ ಕುರಿತಂತೆ `ಇಶ್ನಾ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಯುರ್ವೇದ ನಮ್ಮ ಪ್ರಾಚೀನ ವಿಜ್ಞಾನ. ಇದನ್ನು ಸಮರ್ಪಕವಾಗಿ ದಾಖಲು ಮಾಡದ ಹಿನ್ನೆಲೆಯಲ್ಲಿ ನಶಿಸುವ ಆತಂಕ ಎದು ರಾಗಿದೆ. ಆಧುನಿಕ ಔಷಧಕ್ಕೆ ಸಂಬಂಧಿಸಿ ದಂತೆ ಸಾಕ್ಷ್ಯಾಧಾರಿತವಾಗಿ ಅದರ ಗುಣ ಮಟ್ಟ ನಿರ್ಧಾರ ಮಾಡಲಾಗುತ್ತದೆ. ಹೀಗಾಗಿ ಯಾವುದೇ ಆಧುನಿಕ ಔಷಧವಾದರೂ ಅದು ಅನಾರೋಗ್ಯ ಗುಣಪಡಿಸುವಲ್ಲಿ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬು ದನ್ನು ಸಾಬೀತುಪಡಿಸುವುದು ಮುಖ್ಯ. ಈ ನಡುವೆ ಆಧುನಿಕ ಔಷಧ ಹಾಗೂ ಚಿಕಿತ್ಸಾ ವಿಧಾನಗಳು ಕೆಲ ಸನ್ನಿವೇಶದಲ್ಲಿ ಪ್ರಯೋ ಜನಕ್ಕೆ ಬಾರದಾಗಿರುವ ನಿದರ್ಶನಗಳೂ ಇವೆ. ಹೀಗಾಗಿ ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯ ಸಂಯೋ ಜಿತ ಸಂಶೋಧನೆಗಳು ಅಗತ್ಯವಿವೆ ಎಂದು ಅಭಿಪ್ರಾಯಪಟ್ಟರು.

ಕೆಲ ಅನಾರೋಗ್ಯ ಸಮಸ್ಯೆಗಳಿಗೆ ಆಧು ನಿಕ ಚಿಕಿತ್ಸಾ ವಿಧಾನಗಳು ಕೇವಲ ಶೇ.50 ರಷ್ಟು ಮಾತ್ರವೇ ಕೆಲಸ ಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಆಯುರ್ವೇದ ಸೇರಿದಂತೆ ಯಾವ ವೈದ್ಯಕೀಯ ಪದ್ಧತಿ ಪರಿಣಾಮಕಾರಿ ಎಂಬುದನ್ನು ಸಂಶೋಧನೆ ಮೂಲಕ ಕಂಡು ಕೊಂಡು ಅದನ್ನು ಸದ್ಬಳಕೆ ಮಾಡಿಕೊಳ್ಳು ವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಸಂಶೋ ಧನೆಗಳು ಹಾಗೂ ಪ್ರಯತ್ನಗಳು ನಡೆಯ ಬೇಕಿದೆ. ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಬಳಿಕ ಯೋಗಾಭ್ಯಾಸ ಮಾಡುವ ರೋಗಿ ಗಳಲ್ಲಿ ಪರಿಣಾಮಕಾರಿ ಬದಲಾವಣೆ ಕಂಡು ಬಂದಿದೆ. ಇಂತಹವರು ಪದೇಪದೆ ಆಸ್ಪತ್ರೆಗೆ ದಾಖಲಾಗುವುದು ಕಡಿಮೆ ಇದೆ. ಹೀಗಾಗಿ ಯಾವ ಅನಾರೋಗ್ಯಕ್ಕೆ ಯಾವ ಚಿಕಿತ್ಸಾ ವಿಧಾನ ಸೂಕ್ತ ಎಂಬುದನ್ನು ಕಂಡು ಕೊಳ್ಳುವುದು ಉತ್ತಮ ಮಾರ್ಗ ಎಂದರು.

ಉದ್ಘಾಟನೆ ನೆರವೇರಿಸಿದ ಮಹಾರಾಜ ಸಂಸ್ಕøತ ಪಾಠಶಾಲೆ ನಿವೃತ್ತ ಪ್ರಾಂಶು ಪಾಲ ಹಾಗೂ ಯೋಗನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ಮಾತನಾಡಿ, ಉಪನಿಷತ್ ಹಾಗೂ ಋಷಿ ಗಳ ಕಾಲದಲ್ಲೇ 72 ಸಾವಿರ ನಾಡಿಗಳು ಮಾನವ ದೇಹದಲ್ಲಿ ಇವೆ ಎಂದು ಅವರು ಕಂಡುಕೊಂಡಿದ್ದರು. ವೈಜ್ಞಾನಿಕ ಯುಗ ತಲೆ ಎತ್ತಿರದಿದ್ದ ಕಾಲದಲ್ಲೇ ನಮ್ಮ ಋಷಿಮುನಿ ಗಳು ಇಂತಹ ಆವಿಷ್ಕಾರಗಳಲ್ಲಿ ಯಶಸ್ವಿ ಯಾಗಿದ್ದರು. ಇಂದಿನ ವೈಜ್ಞಾನಿಕ ಕ್ಷೇತ್ರದಲ್ಲಿ ರುವ ಎಲ್ಲಾ ವಿಚಾರಧಾರೆಗಳು ನಮ್ಮ ಆಯುರ್ವೇದದಲ್ಲೇ ಅಡಕವಾಗಿವೆ ಎಂದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಕಾಲೇಜಿನ ಸ್ನಾತಕೋ ತ್ತರ ಪದವಿಯ 40ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿ ದ್ದಾರೆ. ಡಿ.21ರಂದು ಬೆಳಿಗ್ಗೆ 11ಕ್ಕೆ ಮೈಸೂ ರಿನ ಶಾರದಾವಿಲಾಸ ಫಾರ್ಮಸಿ ಕಾಲೇ ಜಿನ ಪ್ರೊ.ಚಿನ್ನಸ್ವಾಮಿಶೆಟ್ಟಿ ಸಭಾಂಗಣದಲ್ಲಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು, ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.

ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಡಯಾ ಬಿಟಾಲಜಿ ಮಾಜಿ ನಿರ್ದೇಶಕ ಡಾ.ಎಂ.ಎ. ಶೇಖರ್, ಸರ್ಕಾರಿ ಆಯುರ್ವೇದ ವೈದ್ಯ ಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಜಾ ನನ ಹೆಗ್ಡೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮಿನಾರಾಯಣಶೆಣೈ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು

Translate »