ಜನನಿಬಿಡ ಪ್ರದೇಶದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ರಸ್ತೆಬದಿ ವ್ಯಾಪಾರಿಗಳ ಆಗ್ರಹ
ಮೈಸೂರು

ಜನನಿಬಿಡ ಪ್ರದೇಶದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ರಸ್ತೆಬದಿ ವ್ಯಾಪಾರಿಗಳ ಆಗ್ರಹ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆಯು ರಸ್ತೆ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಮೈಸೂರಿನ ಕೆಲವೊಂದು ಆಯ್ದ ಭಾಗ ಗಳಲ್ಲಿ ಗುರುತಿಸಿರುವ `ನಾನ್ ಹಾಕಿಂಗ್ ಜೋನ್’ಗಳಲ್ಲಿ ಯಾರೂ ರಸ್ತೆ ಬದಿ ವ್ಯಾಪಾರ ಮಾಡಬಾರದೆಂದು ಆದೇಶಿಸಿ ರುವುದರ ಬಗ್ಗೆ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳ ಅಸಮಾಧಾನ ವ್ಯಕ್ತಪಡಿಸಿದೆ.

ಸಂಘದ ಮೈಸೂರು ಜಿಲ್ಲಾಧ್ಯಕ್ಷ ಪೈ.ಎನ್. ಚಂದ್ರಶೇಖರ್, ಉಪಾಧ್ಯಕ್ಷ ರಾಮಣ್ಣ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನ್ ಹಾಕಿಂಗ್ ಜೋನ್ ಎಂದು ಗುರು ತಿಸಲಾಗಿರುವ ಪುರಭವನ ಸುತ್ತಮುತ್ತ, ರಮಾವಿಲಾಸ ರಸ್ತೆ, ಗಾಂಧಿ ವೃತ್ತ ಸುತ್ತ ಮುತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸ್ ರಸ್ತೆ, ಅರಮನೆಯ ನಾಲ್ಕು ದಿಕ್ಕಿನ ಸುತ್ತಮುತ್ತ ಕೃಷ್ಣವಿಲಾಸ ರಸ್ತೆ, ಜೆ.ಕೆ.ಗ್ರೌಂಡ್ ಸುತ್ತಮುತ್ತ, ನೂರಡಿ ರಸ್ತೆ, ಇರ್ವಿನ್ ರಸ್ತೆ, ಕೆ.ಆರ್.ವೃತ್ತ, ಹೈವೇ ಸರ್ಕಲ್, ಧನ್ವಂತರಿ ರಸ್ತೆ ಸುತ್ತಮುತ್ತ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ತೆರವುಗೊಳಿಸಲು ಸೂಚಿಸಿ ದ್ದಾರೆ. ಇದರಿಂದ ದಿನನಿತ್ಯ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ದೂಡುತ್ತಿ ರುವ ವ್ಯಾಪಾರಸ್ಥರಿಗೆ ತೊಂದರೆಯುಂ ಟಾಗಿದೆ ಎಂದು ದೂರಿದ್ದಾರೆ.

ಡಿ.5ರಂದು ಪಟ್ಟಣ ವ್ಯಾಪಾರ ಸಮಿತಿ (ಟಿವಿಸಿ) ಸಭೆಯಲ್ಲಿ ರಸ್ತೆ ಬದಿ ವ್ಯಾಪಾರಿ ಗಳ ಸಂಘದ ಪ್ರತಿನಿಧಿಗಳು ಇನ್ನಿತರರು ಇದ್ದರೂ ಅವರ ಮಾತಿಗೆ ಬೆಲೆ ನೀಡದೇ ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿ ದ್ದಾರೆ. ಈಗಾಗಲೇ ಮೈಸೂರಿನ ನಾಲ್ಕನೇ ಹೆಚ್ಚುವರಿ ಒಂದನೇ ಅಧಿಕ ಸಿವಿಲ್ ನ್ಯಾಯಾ ಲಯ ತಡೆಯಾಜ್ಞೆ ನೀಡಿದ್ದರೂ ನಗರ ಪಾಲಿಕೆ ಆಯುಕ್ತರು ಏಕಪಕ್ಷೀಯ ಅದೇಶ ಮಾಡಿದ್ದಾರೆ ಎಂದು ಆರೋಪಿಸಿದರು.

ಬೀದಿ ಬದಿ ವ್ಯಾಪಾರಸ್ಥರಿಗೆ ಜನನಿಬಿಡ ಪ್ರದೇಶಗಳನ್ನು ಬಿಟ್ಟು ಮೈಸೂರಿನ ಹೊರ ವಲಯದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸು ವುದಾಗಿ ತಿಳಿಸಲಾಗಿದೆ. ಆದರೆ ಅಲ್ಲಿಗೆ ಪ್ರವಾಸಿಗರಾಗಲೀ, ಜನರಾಗಲೀ ಬರುವು ದಿಲ್ಲ. ಹೀಗಾಗಿ ಜನನಿಬಿಡ ಸ್ಥಳದಲ್ಲಿ ರಸ್ತೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವ ಕಾಶ ನೀಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘದ ಕಾನೂನು ಸಲಹೆ ಗಾರ ಜಿ.ಕೆ.ಜೋಷಿ, ಗುರುಸ್ವಾಮಿ, ಭಾರತಿ, ಶ್ರೀನಿವಾಸರಾಜ ಅರಸ್ ಉಪಸ್ಥಿತರಿದ್ದರು.

Translate »