ನಾಳೆ `ವಿದ್ಯುತ್ ಗ್ರಾಹಕರ ಸಂವಾದ’ ಸಭೆ
ಮೈಸೂರು

ನಾಳೆ `ವಿದ್ಯುತ್ ಗ್ರಾಹಕರ ಸಂವಾದ’ ಸಭೆ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಮೈಸೂರು ತಾಲೂಕು ವ್ಯಾಪ್ತಿಯ ಉಪ ವಿಭಾಗಗಳಾದ ವಿ.ವಿ.ಮೊಹಲ್ಲಾ, ಹೂಟಗಳ್ಳಿ, ಕುವೆಂಪುನಗರ ಮತ್ತು ರಾಮಕೃಷ್ಣನಗರ ಕಚೇರಿಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‍ಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳ 3ನೇ ಶನಿವಾರದಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಅದರಂತೆ ಡಿ.21ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂ, ಎಂ.ಜಿ.ಕೊಪ್ಪಲು, ಒಂಟಿಕೊಪ್ಪಲು ಮತ್ತು ಮೇಟಗಳ್ಳಿ ಶಾಖೆ ವ್ಯಾಪ್ತಿಯ ಪ್ರದೇಶಗಳ ಗ್ರಾಹಕರು ವಿ.ವಿ.ಮೊಹಲ್ಲಾದ ಉಪವಿಭಾಗ ಕಚೇರಿಯಲ್ಲಿ ದೂರು ದಾಖಲಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ. ಬೀರಿಹುಂಡಿ, ಹೂಟಗಳ್ಳಿ, ಇಲವಾಲ, ರೂಪಾನಗರ ಮತ್ತು ಬೋಗಾದಿ ಶಾಖೆ ಪ್ರದೇಶಗಳ ಗ್ರಾಹಕರು ಹೂಟಗಳ್ಳಿ ಉಪವಿಭಾಗ ಕಚೇರಿಯಲ್ಲಿ ದೂರು ದಾಖಲಿಸಬಹುದು. ಸರಸ್ವತಿಪುರಂ, ನಿವೇದಿತನಗರ ಮತ್ತು ಅರವಿಂದನಗರ ಶಾಖೆ ಪ್ರದೇಶಗಳ ಗ್ರಾಹಕರು ಕುವೆಂಪುನಗರ ಉಪವಿಭಾಗ ಕಚೇರಿ ಹಾಗೂ ವಿವೇಕಾನಂದನಗರ, ಜಯಪುರ, ಹಾರೋಹಳ್ಳಿ ಶಾಖೆ ಪ್ರದೇಶಗಳ ಗ್ರಾಹಕರು ರಾಮಕೃಷ್ಣನಗರ ಉಪವಿಭಾಗ ಕಚೇರಿಯಲ್ಲಿ ದೂರು ದಾಖಲಿಸಿ, ಪರಿಹಾರ ಕಂಡು ಕೊಳ್ಳಬಹುದು ಎಂದು ಚೆಸ್ಕಾಂ ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »