ವಿದ್ಯಾರ್ಥಿಗಳು ಹಿಂಜರಿಕೆ ಇಲ್ಲದೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು
ಮೈಸೂರು

ವಿದ್ಯಾರ್ಥಿಗಳು ಹಿಂಜರಿಕೆ ಇಲ್ಲದೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು

December 19, 2019

ಸಾಹಿತಿ ಬನ್ನೂರು ಕೆ.ರಾಜು ಅಭಿಮತ
ಮೈಸೂರು,ಡಿ.18(ಪಿಎಂ)- ಪಾಠ-ಪ್ರವಚನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಗಳು ಹಿಂಜರಿಕೆ ಇಲ್ಲದೆ ಶಿಕ್ಷಕರಲ್ಲಿ ಹಾಗೂ ಸಹಪಾಠಿಗಳಲ್ಲಿ ಮುಕ್ತ ಚರ್ಚೆ ನಡೆಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಜೊತೆಗೆ ಶ್ರಮ ವಹಿಸಿದರೆ ಯಾವುದೇ ಪರೀಕ್ಷೆಯಾದರೂ ಯಶಸ್ಸು ಗಳಿಸಬಹುದು ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಲ್ಲಿರುವ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅಖಿಲ ಕರ್ನಾಟಕ ಪ.ಪೂ. ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ವತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಕುರಿತು ಬುಧವಾರ ಹಮ್ಮಿ ಕೊಂಡಿದ್ದ ಸಂವಾದ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿದ್ದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಕಾರಾತ್ಮಕ ಆಲೋಚನೆ ಬೆಳೆಸಿಕೊಂಡು ನಕಾರಾತ್ಮಕ ಚಿಂತನೆ ಹಾಗೂ ಹಿಂಜರಿಕೆ ತೊರೆಯಬೇಕು. ಪರೀಕ್ಷೆ ಎಂಬ ಭಯವನ್ನು ಮನಸ್ಸಿನಿಂದ ಕಿತ್ತುಹಾಕಿ, ಪರೀಕ್ಷೆಯನ್ನು ಒಂದು ವಾರ್ಷಿಕ ಹಬ್ಬದಂತೆ ಸಂಭ್ರಮಿ ಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾವು ಹಳ್ಳಿಯಿಂದ ಬಂದವರೆಂದು ಸಂಕೋಚ ಬೆಳೆಸಿಕೊಳ್ಳದೇ ಓದಿನಲ್ಲಿ ತಲ್ಲೀನವಾಗಬೇಕು. ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ ಗ್ರಾಮೀಣ ಮಕ್ಕಳ ಬುದ್ಧಿಮತ್ತೆ ಹೆಚ್ಚು ಎಂಬುದು ವೈಜ್ಞಾನಿಕ ವಾಗಿ ಸಾಬೀತಾಗಿದೆ. ಸಮಯಕ್ಕೆ ಬಹಳ ಮಹತ್ವವಿದ್ದು, ಕಳೆದು ಹೋದ ಕಾಲ ಮತ್ತೆ ಬಾರದು. ಹಾಗಾಗಿ ವ್ಯರ್ಥವಾಗಿ ಕಾಲ ಕಳೆಯ ಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಾಸು ಯಾವುದಕ್ಕೂ ಉಪಯೋಗಕ್ಕೆ ಬಾರದು ಎಂದು ತಿಳಿ ಹೇಳಿದರು.

ಇದಕ್ಕೂ ಮೊದಲು ದಿಕ್ಸೂಚಿ ಭಾಷಣ ಮಾಡಿದ ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ, ಸಂಘದಿಂದ ಹಾಗೂ ಕಾಲೇಜಿ ನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗ ಲೆಂದು ಸಂವಾದ ಕಾರ್ಯಕ್ರಮ ನಡೆಸುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕಾಲೇಜಿನ ಪ್ರಾಂಶುಪಾಲ ರಾದ ಎನ್.ಎನ್.ಪುಟ್ಟಗೌರಮ್ಮ ಮತ್ತು ಸಾಹಿತಿ ಬನ್ನೂರು ಕೆ.ರಾಜು ಅವರನ್ನು ಸನ್ಮಾನಿಸ ಲಾಯಿತು. ನಂತರ ವಿಷಯ ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಯಿತು. ಅಲ್ಲದೆ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಉಪನ್ಯಾಸಕರಾದ ಪಿ.ಎಲ್.ಶಿವಕುಮಾರ್, ಬಿ.ಪ್ರಭುಸ್ವಾಮಿ, ನಾಗಮಲ್ಲೇಶ್, ಸಿ.ಎನ್.ಫಣಿರಾಜ್, ಗಿರೀಶ್, ಕೆ.ಟಿ.ಕುಮಾರ್, ಕೋಟೆ ವೆಂಕಟೇಶ್, ಶುಭಾ, ಹೆಚ್.ಆರ್. ಸುಮಾ, ಎ.ಅಶ್ವಿನಿ, ಡಿ.ಎ.ದಿನೇಶ್, ಕಾಳಿ ಪ್ರಸಾದ್, ಧರಣೀಕುಮಾರ್, ಜಮೀರ್ ಅಹಮದ್, ಎನ್.ಕೃಷ್ಣ, ಪ್ರಮೀಳಾದೇವಿ, ವಿ.ನಾಗ ವೇಣಿ, ಸೌಧಾಮಿನಿ ಹೆಗ್ಡೆ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Translate »