ಕುರುಬರ ಸಂಘದ ಚುನಾವಣೆ
ಮೈಸೂರು

ಕುರುಬರ ಸಂಘದ ಚುನಾವಣೆ

December 20, 2019

ಮೈಸೂರು, ಡಿ.19(ಆರ್‍ಕೆಬಿ)- ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಡಿ.22ರಂದು ಚುನಾವಣೆ ನಡೆಯಲಿದೆ. ನಾನು ಸಹ ಸ್ಪರ್ಧಿಸಿದ್ದು, ನನ್ನ ಕ್ರಮ ಸಂಖ್ಯೆ 12, ಗಾಜಿನ ಲೋಟದ ಚಿಹ್ನೆ ಎಂದು ಎಸ್.ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕುರುಬ ಸಮಾಜದ ನೆನೆÀಗುದಿಗೆ ಬಿದ್ದಿರುವ ಹಲವು ವಿಚಾರಗಳಿಗೆ ಸ್ಪಂದಿಸಿ ಕೆಲಸ ಮಾಡಲು ಇಚ್ಛಿಸಿದ್ದೇನೆ. ಕುರುಬರು ಈ ದೇಶದ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗವೆಂದು 1889ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ ಜನಗಣತಿಯಲ್ಲಿ ದಾಖಲಾಗಿದೆ. ಅದರ ಆಧಾರದ ಮೇಲೆ ಕುರುಬ ಸಮಾಜವನ್ನು ಎಸ್‍ಟಿ ಮೀಸಲಾತಿಗೆ ಸೇರಿಸಲು ಸಮಾಜದ ಬಂಧುಗಳನ್ನು ಒಗ್ಗೂಡಿಸಿ ಪ್ರಯತ್ನಿಸುತ್ತೇನೆ. ಮೈಸೂರಿನಲ್ಲಿ ಕರ್ನಾಟಕ ಕುರುಬರ ಸಂಘದ ಜಿಲ್ಲಾ ಕಟ್ಟಡ ನಿರ್ಮಿ ಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಪ್ರತಿ 6 ತಿಂಗಳಿಗೊಮ್ಮೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಿ, ಮುಂದಿನ ಚುನಾವಣೆಯಲ್ಲಿ ಕನಿಷ್ಠ 30,000ಕ್ಕೂ ಹೆಚ್ಚು ಕುಲಬಾಂಧವರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು. ಸರ್ಕಾರದ ಹೈನುಗಾರಿಕೆ ಯೋಜನೆಯನ್ನು ಸಮಾಜಕ್ಕೆ ದೊರಕಿಸಿ ಕೊಡುವುದು. 3 ತಿಂಗಳೊಳಗೆ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಾಧನ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಮೈಸೂರಿನಲ್ಲಿ ಕೇಂದ್ರ ತೆರೆದು ನಮ್ಮ ಸಮಾಜದ ಯುವ ಪೀಳಿಗೆ ಐಪಿಎಸ್, ಐಎಎಸ್ ಅಧಿಕಾರಿಗಳಾಗಲು ನೆರವಾಗುವುದು ಸೇರಿದಂತೆ ಹಲವು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್‍ನ ನಿರ್ದೇಶಕಿ ಡಾ.ಜ್ಯೊತಿ, ಲೋಕೇಶ್ ಕುಮಾರ್, ಮೋಹನ್ ಅಣ್ಣಯ್ಯ, ಎಂ.ದೀಪಕ್ ಉಪಸ್ಥಿತರಿದ್ದರು.

 

Translate »