Tag: Mysore

ಪ್ರವಾಸೋದ್ಯಮದಲ್ಲಿ ರಾಜ್ಯವನ್ನು ರಾಷ್ಟ್ರದಲ್ಲೇ ಐದನೇ ಸ್ಥಾನಕ್ಕೆ ಕೊಂಡೊಯ್ಯಲು ಬದ್ಧ ಸಿಎಂ ಯಡಿಯೂರಪ್ಪ ಘೋಷಣೆ
ಮೈಸೂರು

ಪ್ರವಾಸೋದ್ಯಮದಲ್ಲಿ ರಾಜ್ಯವನ್ನು ರಾಷ್ಟ್ರದಲ್ಲೇ ಐದನೇ ಸ್ಥಾನಕ್ಕೆ ಕೊಂಡೊಯ್ಯಲು ಬದ್ಧ ಸಿಎಂ ಯಡಿಯೂರಪ್ಪ ಘೋಷಣೆ

December 19, 2019

ಬೆಂಗಳೂರು, ಡಿ. 18(ಕೆಎಂಶಿ)- ಅತ್ಯು ತ್ತಮ ಪ್ರವಾಸಿ ತಾಣ ಗಳನ್ನು ಹೊಂದಿರುವ ಕರ್ನಾಟಕವನ್ನು ರಾಷ್ಟ್ರ ದಲ್ಲೇ ಐದನೇ ಸ್ಥಾನಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಪ್ರವಾಸೋ ದ್ಯಮ ಇಲಾಖೆ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ 2020-25ರ ಪ್ರವಾಸೋದ್ಯಮ ನೀತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ದೇಶವಿದೇಶಗಳಲ್ಲಿ ವಿಶ್ವ ಪ್ರಸಿದ್ಧವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರವಾಸಿಗರನ್ನು ಆಕರ್ಷಿಸಲು ಬಜೆಟ್‍ನಲ್ಲಿ ಹೆಚ್ಚಿನ ಹಣ ಕಾಸಿನ ನೆರವು, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ…

ವಿಶೇಷಚೇತನರಿಂದಲೂ ಸಮಾಜಕ್ಕೆ ಕೊಡುಗೆ
ಮೈಸೂರು

ವಿಶೇಷಚೇತನರಿಂದಲೂ ಸಮಾಜಕ್ಕೆ ಕೊಡುಗೆ

December 19, 2019

ಮೈಸೂರು, ಡಿ.18(ಎಂಕೆ)-  ಅಂಗ ವೈಕಲ್ಯ ಇದ್ದವರಿಗೆ ಸ್ವಲ್ಪ ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ, ಅವರೂ ಎಲ್ಲ ರಂತೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ  ಎಂದು ಹಿರಿಯ ನಾಗರಿಕರು ಮತ್ತು ವಿಶೇಷಚೇತನ ಮಕ್ಕಳ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ಹೇಳಿದರು. ನಗರದ ಬೋಗಾದಿ ಮುಖ್ಯರಸ್ತೆಯಲ್ಲಿ ರುವ ‘ಆಯಿಷ್’ನ ಪಂಚವಟಿ ಸಭಾಂ ಗಣದಲ್ಲಿ ವಿಶೇಷ ಶಿಕ್ಷಣ ಮತ್ತು ಕ್ಲಿನಿಕಲ್ ಸೇವಾ ವಿಭಾಗದ ವತಿಯಿಂದ ಆಯೋ ಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿಶೇಷ ಚೇತನರು ತಮ್ಮಲ್ಲಿನ ನ್ಯೂನತೆಯನ್ನು…

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮೈಸೂರು ಜಿಲ್ಲೆಗೆ ನಯಾಪೈಸೆ ಬಿಡುಗಡೆ ಆಗಿಲ್ಲ
ಮೈಸೂರು

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಮೈಸೂರು ಜಿಲ್ಲೆಗೆ ನಯಾಪೈಸೆ ಬಿಡುಗಡೆ ಆಗಿಲ್ಲ

December 19, 2019

ಡಿಸಿಎಂ ಗೋವಿಂದ ಕಾರಜೋಳ ಮುಂದೆ ಮೈಸೂರು ನಿಯೋಗದ ಅಳಲು ಮೈಸೂರು, ಡಿ.18(ವೈಡಿಎಸ್)- ರಾಜ್ಯ ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮ ಆರಂಭಗೊಂಡು 3 ವರ್ಷಗಳೇ ಕಳೆದರೂ ಮೈಸೂರು ಜಿಲ್ಲೆಯಲ್ಲಿ ಜನಾಂಗದ ಅಭಿವೃದ್ಧಿಗೆ ನಯಾಪೈಸೆಯೂ ಬಿಡುಗಡೆ ಆಗಿಲ್ಲ. 2014ರಿಂದ 17ನೇ ಸಾಲಿನವರೆಗೆ 400 ಮಂದಿ ಹಾಗೂ 2017-18ನೇ ಸಾಲಿನಲ್ಲಿ 840 ಮಂದಿ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಯೋಜನೆಯಡಿ ಹೊಸದಾಗಿ 2600 ಮಂದಿ ವಿವಿಧ ರೀತಿಯ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಿಗಮದಿಂದ ಇದು ವರೆಗೂ…

ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ
ಮೈಸೂರು

ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ

December 18, 2019

ಹಿರಿಯ ಸಹಕಾರಿ ಹೆಚ್.ವಿ.ರಾಜೀವ್ ಅಭಿಮತ ಈ ಕ್ಷೇತ್ರದಲ್ಲಿ ಯುವಕರಿಗೆ ಅಂದುಕೊಂಡಿದ್ದನ್ನು ಸಾಧಿಸಲು ಸಾಕಷ್ಟು ಅವಕಾಶ ಮೈಸೂರು, ಡಿ.17(ಎಸ್‍ಪಿಎನ್)- ಸಹಕಾರ ಕ್ಷೇತ್ರ ಗ್ರಾಮೀಣ ಯುವಜನತೆಯ ಜೀವನಾಡಿ ಹಾಗೂ ಆಪ್ತಮಿತ್ರ. ಈ ಕ್ಷೇತ್ರದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಲು ಯುವ ಜನತೆಗೆ ಸಾಕಷ್ಟು ಅವಕಾಶವಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಪ್ರಾಯಪಟ್ಟರು. ಮೈಸೂರು ಚಾಮರಾಜ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಪ್ರಮತಿ ಹಿಲ್‍ವ್ಯೂ ವಿದ್ಯಾ ಸಂಸ್ಥೆ…

ಮೈದನಹಳ್ಳಿ ಪವರ್ ಗ್ರಿಡ್ ವಿದ್ಯುತ್ ಮಾರ್ಗದ ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಸಂಸದ ಪ್ರತಾಪ್ ಸಿಂಹ ಭರವಸೆ
ಮೈಸೂರು

ಮೈದನಹಳ್ಳಿ ಪವರ್ ಗ್ರಿಡ್ ವಿದ್ಯುತ್ ಮಾರ್ಗದ ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಸಂಸದ ಪ್ರತಾಪ್ ಸಿಂಹ ಭರವಸೆ

December 18, 2019

ಮೈಸೂರು, ಡಿ.17(ಎಸ್‍ಪಿಎನ್)- ತುಮಕೂರು ಜಿಲ್ಲೆ ಪಾವಗಡ ತಾಲೂಕಿನಿಂದ, ಶಿರಾ ಮಾರ್ಗವಾಗಿ ಮೈಸೂರಿನ ಮೈದನಹಳ್ಳಿ ಪವರ್ ಗ್ರಿಡ್‍ಗೆ ಅಳವಡಿಸುತ್ತಿರುವ ಹೈಟೆನ್ಷನ್ ಲೈನ್ ಕಾಮಗಾರಿಯನ್ನು ಪರಿ ಶೀಲಿಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಅಭಿರಾಂ ಜಿ.ಶಂಕರ್ ಅವರ ನೇತೃತ್ವದಲ್ಲಿ ರೈತ ಮುಖಂಡರು ಮತ್ತು ಪವರ್ ಗ್ರೀಡ್ ಸ್ಟೇಷನ್ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ…

ಸಿದ್ದು ಭೇಟಿ ಮಾಡಿದ ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು

ಸಿದ್ದು ಭೇಟಿ ಮಾಡಿದ ವಿ.ಶ್ರೀನಿವಾಸ್ ಪ್ರಸಾದ್

December 18, 2019

ಬೆಂಗಳೂರು,ಡಿ.17- ರಾಜಕೀಯ ಬದ್ಧ ವೈರಿ ಗಳಂತೆ ಬಿಂಬಿತವಾಗಿದ್ದ ಮಾಜಿ ಸಿಎಂ ಸಿದ್ದ ರಾಮಯ್ಯ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ವರ್ಷ ಗಳ ಬಳಿಕ ಮಂಗಳವಾರ ಭೇಟಿಯಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಸಿದ್ದರಾಮಯ್ಯ ಕೇಳಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಜೊತೆಯಲ್ಲಿದ್ದರು. ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ…

‘ಕಾರಂಜಿಕೆರೆ ಅಭಿವೃದ್ಧಿಗೆ ಸುತ್ತಲ ಹೋಟೆಲ್‍ಗಳೂ ಕೈಜೋಡಿಸಲಿ’
ಮೈಸೂರು

‘ಕಾರಂಜಿಕೆರೆ ಅಭಿವೃದ್ಧಿಗೆ ಸುತ್ತಲ ಹೋಟೆಲ್‍ಗಳೂ ಕೈಜೋಡಿಸಲಿ’

December 18, 2019

ಕಾರಂಜಿಕೆರೆ ಉತ್ಸವದಲ್ಲಿ ಕೆರೆ ಸಂರಕ್ಷಣೆಗೆ ಸಲಹೆ ನೀಡಿದ ಬಿ.ಪಿ.ರವಿ ಮೈಸೂರು,ಡಿ.17(ಎಂಟಿವೈ)- ಸಮು ದಾಯದ ಸ್ವತ್ತಾಗಿರುವ ಕೆರೆಗಳ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಮನವಿ ಮಾಡಿದರು. ಕಾರಂಜಿಕೆರೆ ಉತ್ಸವದಲ್ಲಿ ಕೆರೆಗಳ ಸಂರ ಕ್ಷಣೆಯ ಮಹತ್ವ ಕುರಿತಂತೆ ಮಾತನಾಡಿದ ಅವರು, ಕಾರಂಜಿಕೆರೆ  ಸುತ್ತಮುತ್ತಲ ಪ್ರದೇಶಗಳಿಗೆ ನೀರಿನ ಸೆಲೆಯಾಗಿದೆ. ಪ್ರತ್ಯಕ್ಷ – ಪರೋಕ್ಷವಾಗಿ ಉಪಯೋಗ ಪಡೆದುಕೊಳ್ಳುತ್ತಿರುವ ಮೈಸೂರಿನ ಜನತೆ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮೃಗಾಲಯದ ಸುತ್ತಮುತ್ತ…

ಇಂದಿರಾ ಕ್ಯಾಂಟೀನ್ ಬದಲು ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡಲು ಚಿಂತನೆ: ಆರ್.ಅಶೋಕ್
ಮೈಸೂರು

ಇಂದಿರಾ ಕ್ಯಾಂಟೀನ್ ಬದಲು ವಾಲ್ಮೀಕಿ ಅನ್ನ ಕುಟೀರ ಎಂದು ಮರುನಾಮಕರಣ ಮಾಡಲು ಚಿಂತನೆ: ಆರ್.ಅಶೋಕ್

December 18, 2019

ಬೆಂಗಳೂರು, ಡಿ.17- ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದ ಇಂದಿರಾ ಕ್ಯಾಂಟೀನ್‍ಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಮರು ನಾಮಕರಣ ಮಾಡುವ ಬಗ್ಗೆ ಗಂಭೀರ ಚಿಂತನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಮಂಗಳವಾರ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಉದ್ದೇಶಿಸಲಾಗಿದೆ. ಇಂದಿರಾ ಕ್ಯಾಂಟೀನ್‍ನ ಆಹಾರ, ಪೂರೈಕೆ ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪಗಳಿವೆ. ಇಂದಿರಾ ಕ್ಯಾಂಟೀನ್ ಗಳನ್ನು ಮತ್ತಷ್ಟು ಸುಧಾರಣೆ ಮಾಡಿ…

ಮೂಲೆ ಸೇರಿದ ‘ಶ್ರದ್ಧಾಂಜಲಿ’ ವಾಹನ
ಮೈಸೂರು

ಮೂಲೆ ಸೇರಿದ ‘ಶ್ರದ್ಧಾಂಜಲಿ’ ವಾಹನ

December 18, 2019

ಮೈಸೂರು,ಡಿ.17(ಆರ್‍ಕೆ)-ಮೃತದೇಹ ಗಳನ್ನು ಸಾಗಿಸಲೆಂದು ಒದಗಿಸಿದ್ದ ‘ಶ್ರದ್ಧಾಂಜಲಿ’ ವಾಹನ ಕೆಟ್ಟು ನಿಂತು ಒಂದು ವರ್ಷ ವಾದರೂ ರಿಪೇರಿಯಾಗಿಲ್ಲ. ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಡವರಿಗೆ ಅನುಕೂಲವಾಗ ಲೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 108 ಆಂಬುಲೆನ್ಸ್ ವಾಹನ ವೊಂದನ್ನು ಮೃತದೇಹ ಸಾಗಿಸಲು ‘ಶ್ರದ್ಧಾಂಜಲಿ’ ಹೆಸರಿನೊಂದಿಗೆ ಒದಗಿಸಿತ್ತು. ಸಂಪೂರ್ಣ ಕಪ್ಪು ಬಣ್ಣ ಬಳಿದು ಮೃತದೇಹವನ್ನು ಆಸ್ಪತ್ರೆಗಳಿಂದ ಅವರ ಊರುಗಳಿಗೆ ಕೊಂಡೊಯ್ಯಲು ಅನು ಕೂಲವಾಗುವಂತೆ ಪರಿವರ್ತಿಸಿ ಓರ್ವ ಚಾಲಕರೊಂದಿಗೆ ಒದಗಿಸಿದ್ದ ವಾಹನವನ್ನು ಕೆ.ಆರ್.ಆಸ್ಪತ್ರೆ ಸುಪರ್ದಿಗೆ ನೀಡಲಾಗಿತ್ತು. ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ…

ಮೈಸೂರು ಪೊಲೀಸರಿಗೆ ಆಯುಕ್ತರಿಂದ `ಜನಸ್ನೇಹಿ’ ಪಾಠ
ಮೈಸೂರು

ಮೈಸೂರು ಪೊಲೀಸರಿಗೆ ಆಯುಕ್ತರಿಂದ `ಜನಸ್ನೇಹಿ’ ಪಾಠ

December 18, 2019

ಮೈಸೂರು,ಡಿ.17(ಆರ್‍ಕೆ)- ಜನ ರೊಂದಿಗೆ ಉತ್ತಮ ಬಾಂಧವ್ಯವಿರಿಸಿ ಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ `ಜನಸ್ನೇಹಿ ಪೊಲೀಸ್’ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ಎಂದು ನಗರ ಪೊಲೀಸ್ ಕಮೀಷ ನರ್ ಕೆ.ಟಿ.ಬಾಲಕೃಷ್ಣ ಅವರು ಮೈಸೂ ರಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂದಿಲ್ಲಿ ಸಲಹೆ ನೀಡಿದರು. ಮೈಸೂರಿನ ಲಲಿತ ಮಹಲ್ ರಸ್ತೆಯ ಲ್ಲಿರುವ ಪೊಲೀಸ್ ಭವನದ ಸಭಾಂ ಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನ ಸ್ನೇಹಿ ಪೊಲೀಸ್ ಕುರಿತ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪೊಲೀಸ್ ಠಾಣೆಗೆ ಬರುವ ನಾಗರಿಕರನ್ನು…

1 105 106 107 108 109 330
Translate »