ಮೂಲೆ ಸೇರಿದ ‘ಶ್ರದ್ಧಾಂಜಲಿ’ ವಾಹನ
ಮೈಸೂರು

ಮೂಲೆ ಸೇರಿದ ‘ಶ್ರದ್ಧಾಂಜಲಿ’ ವಾಹನ

December 18, 2019

ಮೈಸೂರು,ಡಿ.17(ಆರ್‍ಕೆ)-ಮೃತದೇಹ ಗಳನ್ನು ಸಾಗಿಸಲೆಂದು ಒದಗಿಸಿದ್ದ ‘ಶ್ರದ್ಧಾಂಜಲಿ’ ವಾಹನ ಕೆಟ್ಟು ನಿಂತು ಒಂದು ವರ್ಷ ವಾದರೂ ರಿಪೇರಿಯಾಗಿಲ್ಲ.

ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಡವರಿಗೆ ಅನುಕೂಲವಾಗ ಲೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 108 ಆಂಬುಲೆನ್ಸ್ ವಾಹನ ವೊಂದನ್ನು ಮೃತದೇಹ ಸಾಗಿಸಲು ‘ಶ್ರದ್ಧಾಂಜಲಿ’ ಹೆಸರಿನೊಂದಿಗೆ ಒದಗಿಸಿತ್ತು.

ಸಂಪೂರ್ಣ ಕಪ್ಪು ಬಣ್ಣ ಬಳಿದು ಮೃತದೇಹವನ್ನು ಆಸ್ಪತ್ರೆಗಳಿಂದ ಅವರ ಊರುಗಳಿಗೆ ಕೊಂಡೊಯ್ಯಲು ಅನು ಕೂಲವಾಗುವಂತೆ ಪರಿವರ್ತಿಸಿ ಓರ್ವ ಚಾಲಕರೊಂದಿಗೆ ಒದಗಿಸಿದ್ದ ವಾಹನವನ್ನು ಕೆ.ಆರ್.ಆಸ್ಪತ್ರೆ ಸುಪರ್ದಿಗೆ ನೀಡಲಾಗಿತ್ತು.

ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲ ಕಾರಿಯಾಗದೆ ರೋಗಿಗಳು ಸಾವನ್ನಪ್ಪಿ ದರೆ, 25 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ವಾಗಿ ಪಾರ್ಥಿವ ಶರೀರ ಸಾಗಿಸಲು ಬಳಸ ಲಾಗುತ್ತಿತ್ತು. ಅದಕ್ಕಿಂತ ದೂರ ಕೊಂಡೊಯ್ಯ ಬೇಕೆಂದರೆ ಕಿ.ಮೀ.ಗೆ 9 ರೂ.ನಂತೆ ಶುಲ್ಕ ಪಡೆಯುವ ವ್ಯವಸ್ಥೆ ಜಾರಿಯಲ್ಲಿತ್ತು.

2018ರಲ್ಲಿ ಆರಂಭವಾದ ಶ್ರದ್ಧಾಂಜಲಿ ಸೇವೆ ಕೇವಲ 10 ತಿಂಗಳು ನಡೆಯಿತು. ನಂತರ ಕೆಟ್ಟು ನಿಂತ ವಾಹನವನ್ನು ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯಾ ಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಲಾ ಗಿದ್ದು, ಅದರ ಸುತ್ತ ಗಿಡಗಂಟಿ ಬೆಳೆದು ಈಗ ಶ್ರದ್ಧಾಂಜಲಿ ಅನಾಥವಾಗಿದೆ.

ಅದನ್ನು ರಿಪೇರಿ ಮಾಡಿಸುವ ಅಥವಾ ಬೇರೊಂದು ವಾಹನ ಒದಗಿಸುವ ಗೋಜಿಗೆ ಆರೋಗ್ಯಾಧಿಕಾರಿಗಳು ಹೋಗದ ಕಾರಣ ಬಡವರು ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಖಾಸಗಿ ಟ್ಯಾಕ್ಸಿ, ಆಂಬುಲೆನ್ಸ್ ಅವಲಂಬಿಸುವ ಅನಿವಾರ್ಯತೆ ಬಂದೊದಗಿದೆ.

Translate »