ಮೈಸೂರು,ಡಿ.17(ಪಿಎಂ)- ಅಪಘಾತಕ್ಕೆ ಒಳಗಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳು ಇದೀಗ ನಾಲ್ಕು ಜನರಿಗೆ ಮರುಜೀವ ನೀಡಿವೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿ ನಾಲ್ವರ ಬಾಳಿಗೆ ಬೆಳಕಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ನಿವೇದಿತನಗರದ ನಿವಾಸಿ ಚಂದ್ರಶೇಖರ್ (27) ಎಂಬ ಯುವಕನ ಹೃದಯ, ಯಕೃತ್ತು ಹಾಗೂ ಎರಡು ಮೂತ್ರ ಪಿಂಡಗಳನ್ನು ದಾನ ಮಾಡಲಾಗಿದೆ. ಡಿ.14ರ ರಾತ್ರಿ 10.30ರ ವೇಳೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗನಂ ಗೂರು ಗ್ರಾಮದ ಬಳಿ…
ಬಿಜೆಪಿ ನಾಯಕರು ಮೊದಲು ಹೆಣ್ಣಿನ ಶೋಷಣೆ ಮುಕ್ತ ಭಾರತ ಮಾಡಲಿ
December 18, 2019ಮೈಸೂರು,ಡಿ.17(ಎಂಟಿವೈ)-ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿರುವ ಬಿಜೆಪಿ ನಾಯಕರು `ಹೆಣ್ಣಿನ ಶೋಷಣೆ ಮುಕ್ತ ಭಾರತ’ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ಸಿಕ್ಕುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಒಂದಲ್ಲಾ ಒಂದು ಸ್ಥಳದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಇದರಿಂದ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತ…
ಸರ್ಕಾರಿ ಅತಿಥಿಗೃಹದ ಪಾರಂಪರಿಕ ಕಮಾನು ಸಂರಕ್ಷಣೆ ಕೆಲಸ ಆರಂಭ
December 18, 2019ಮೈಸೂರು,ಡಿ.17(ಆರ್‍ಕೆ)- ಮೈಸೂ ರಿನ ಸರ್ಕಾರಿ ಅತಿಥಿ ಗೃಹದ ಉತ್ತರ ಭಾಗದಲ್ಲಿರುವ ಪಾರಂಪರಿಕ ಕಮಾನನ್ನು ಸಂರಕ್ಷಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗಿದೆ. ನಜರ್‍ಬಾದ್‍ನ ಬಿ.ಎನ್. ರಸ್ತೆಯಲ್ಲಿ ರುವ ಕಮಾನಿಗೆ ಧಕ್ಕೆಯಾಗದಂತೆ ಸುತ್ತ ಕಬ್ಬಿಣದ ಸಲಾಕೆಗಳನ್ನು ಅಳವಡಿಸುವ ಕಾಮಗಾರಿಯನ್ನು ಪಾಲಿಕೆಯು ಮಂಗಳ ವಾರ ಆರಂಭಿಸಿದೆ. ಅವೈಜ್ಞಾನಿಕವಾಗಿ ರಿಪೇರಿ ಮಾಡಲಾಗುತ್ತಿದೆ ಎಂಬ ವರದಿ ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟ ಗೊಂಡ ಬೆನ್ನಲ್ಲೇ ಪಾಲಿಕೆ ಕಾಮಗಾರಿ ಆರಂಭಿಸಿದೆ. ಜೆಸಿಬಿಯಿಂದ ಕಮಾನಿನ ಸುತ್ತ ಗುಂಡಿ ತೆಗೆಯುವ ಕೆಲಸ ಆರಂಭವಾಗಿದ್ದು, ನಂತರ ಅಡಿಪಾಯ ಹಾಕಿ ಅದರ…
ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ ಆರೋಪ: ಕಾರ್ಮಿಕ ಸಂಘಟನೆಗಳಿಂದ 2020ರ ಜ.8ರಂದು ರಾಷ್ಟ್ರವ್ಯಾಪಿ ಮುಷ್ಕರ
December 18, 2019ಮೈಸೂರು,ಡಿ.17(ಪಿಎಂ)-ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ಸುಧಾ ರಣೆ ಹೆಸರಿನಲ್ಲಿ ಕಾರ್ಮಿಕರ ಹಕ್ಕು ಕಸಿ ಯಲು ಹೊರಟಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ 2020ರ ಜ.8ರಂದು ರಾಷ್ಟ್ರೀಯ ಕಾರ್ಮಿಕ ಸಂಘ ಟನೆಗಳು ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿವೆ ಎಂದು ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ತಿಳಿಸಿದರು. ಮೈಸೂರಿನ ಬನ್ನಿಮಂಟಪದ ಬಾಲ ಭವನ ಸಭಾಂಗಣದಲ್ಲಿ ಎರಡು ದಿನಗಳು ಹಮ್ಮಿಕೊಂಡಿರುವ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‍ನ (ಎಐಟಿಯುಸಿ) ಮೈಸೂರು ನಗರ ವಿಭಾಗ, ಗ್ರಾಮಾಂತರ ವಿಭಾಗ…
ಮನೆ ಬಾಗಿಲಲ್ಲೇ ಉದ್ಯೋಗಬೇಕೆಂಬ ಮನೋಭಾವ ಬಿಡಿ
December 18, 2019ಮೈಸೂರು,ಡಿ.17(ಆರ್‍ಕೆಬಿ)-ಮನೆ ಬಾಗಿಲಲ್ಲೇ ಉದ್ಯೋಗ ಬೇಕು ಎಂಬ ಮನೋಭಾವ ಬಿಟ್ಟು ಉದ್ಯೋಗ ಎಲ್ಲಿ ಸಿಕ್ಕಿದರೂ ಹೋಗಲು ಸಿದ್ಧರಾದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಕೌಶಲ್ಯ ಕರ್ನಾಟಕ ಮೈಸೂರು ಜಿಲ್ಲಾ ಅಧಿಕಾರಿ ಎನ್.ಎಸ್.ಶಿವಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿ ನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಎಜುಕೇರ್ ಸಂಸ್ಥೆ ಮಂಗಳವಾರ ಆಯೋ ಜಿಸಿದ್ದ ಕೌಶಲ ಕರ್ನಾಟಕ ತರಬೇತಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿಮ್ಮ ಮನೆ ಬಾಗಿಲಿಗೇ ಕೈಗಾರಿಕೆ…
ಶೌಚಾಲಯದಲ್ಲೇ ಸೂರು ಕಂಡುಕೊಂಡ 13 ಮಂದಿ ಸದಸ್ಯರ ಕುಟುಂಬ ದೇಶದಲ್ಲಿ ಯಾವ ವಸತಿ ಯೋಜನೆ ಇದ್ದರೇನು? ಇವರ ಪಾಲಿಗಿಲ್ಲ!
December 18, 2019ಮೈಸೂರು,ಡಿ.17(ವೈಡಿಎಸ್)- ವಾಸಿಸಲು ಸೂರಿಲ್ಲದೆ ಕುಟುಂಬವೊಂದು ಸಾರ್ವಜನಿಕರ ಶೌಚಾಲಯದಲ್ಲೇ ಆಶ್ರಯ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ರಾಜೇಂದ್ರ ನಗರದ ಕುರಿ ಮಂಡಿ ಎ ಬ್ಲಾಕಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ದಲ್ಲೇ ಕಳೆದ 7 ವರ್ಷಗಳಿಂದ ಜೀವನ ಸಾಗಿ ಸುತ್ತಿದೆ. ಈ ಶೌಚಾಲಯದಲ್ಲಿ ಒಂದೂವರೆ ತಿಂಗಳ ಹೆಣ್ಣು ಮಗು, 95 ವರ್ಷದ ವೃದ್ಧೆ ಸೇರಿದಂತೆ 13 ಮಂದಿ ವಾಸಿಸುತ್ತಿದ್ದಾರೆ. ಇವ ರಿಗೆ ಸ್ನಾನದ ಮನೆಯೇ ಬೆಡ್‍ರೂಂ, ಮಲ-ಮೂತ್ರ ವಿಸರ್ಜನೆಯ ಕೊಠಡಿಯೇ ಅಡುಗೆ ಮನೆಯಾಗಿದ್ದು, ಎಲ್ಲರೂ ಅಲ್ಲೇ…
ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ
December 18, 2019ಮೈಸೂರು, ಡಿ.17(ಎಂಕೆ)- ದೆಹಲಿಯ ಜಾಮಿಯ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿ ರುವ ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಯನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆ ಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಮಾನಸಗಂಗೋತ್ರಿ ಆವರಣ ದಲ್ಲಿ ಜಮಾಯಿಸಿದ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ನೂರಾರು ವಿದ್ಯಾರ್ಥಿಗಳು ಪಂಜುಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ…
ಪ್ರಸ್ತುತ ಕಾಲಘಟ್ಟದಲ್ಲೂ ಜಾತಿ ವ್ಯವಸ್ಥೆ ಅತ್ಯಂತ ಅಪಮಾನಕಾರಿ
December 18, 2019ಮೈಸೂರು,ಡಿ.17-ಪ್ರಸ್ತುತ ಜಾಗತಿಕ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಅಪಮಾನಕಾರಿ ಎಂದು ಸಾಹಿತಿ ಪ್ರೊ.ಗೋವಿಂದಯ್ಯ ಅಭಿಪ್ರಾಯಪಟ್ಟರು. ನಗರದ ಇಂಜಿನಿಯರ್‍ಗಳ ಸಂಸ್ಥೆ ಯಲ್ಲಿ ನಡೆದ ಶೋಷಿತ ಸಮುದಾಯದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಬಲ ಜಾತಿಯವರು ಕೆಳಜಾತಿ ಯವರ ಶೋಷಿಸುವುದು, ಅಸ್ಪøಶ್ಯತೆ ಆಚರಿ ಸುವುದು ಬೇಸರದ ಸಂಗತಿ ಎಂದರು. ದಲಿತರು, ಶೋಷಿತರು, ಹಿಂದುಳಿದ ವರು, ಸಾಮಾಜಿಕ ನ್ಯಾಯ ಹಾಗೂ ತಮ್ಮ ಹಕ್ಕುಗಳನ್ನು ಪಡೆಯಲು ಒಗ್ಗೂಡ ಬೇಕಿದೆ ಎಂದು ಸಲಹೆ ನೀಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಬಿಜೆಪಿಗೆ ಧರ್ಮ…
ದ್ವಿತೀಯ ಪಿಯುಸಿ ಪರೀಕ್ಷೆ ಈ ಸಾಲಿನಿಂದ 42 ಪುಟಗಳ ಉತ್ತರ ಪತ್ರಿಕೆ ವಿತರಣೆ
December 18, 2019ಮೈಸೂರು,ಡಿ.17(ಎಂಕೆ)-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ವರ್ಷದಿಂದ 42 ಪುಟಗಳ ಉತ್ತರ ಪತ್ರಿಕೆಯನ್ನು ನೀಡ ಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಿರಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಡಾ.ಬಿ.ಎನ್.ನಾಗರತ್ನ ತಿಳಿಸಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯವಿಠಲ ಪದವಿಪೂರ್ವ ಕಾಲೇ ಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್‍ಸೈಟ್ ಉದ್ಘಾಟಿಸಿ ಮಾತ ನಾಡಿದ ಅವರು, 42 ಪುಟಗಳ ಉತ್ತರ ಪತ್ರಿಕೆಯ ಜತೆಗೆ ಹೆಚ್ಚುವರಿ ಪುಟಗಳನ್ನು ನೀಡು ವುದಿಲ್ಲ. ಯಾವುದೇ ಹಾಳೆಗಳನ್ನು ಹರಿದು ಹಾಕುವಂತಿಲ್ಲ. 42 ಪುಟಗಳಲ್ಲಿಯೇ ಉತ್ತರ…
ಕಾರಂಜಿಕೆರೆ ಉತ್ಸವದಲ್ಲಿ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳ ಸಂಭ್ರಮ
December 17, 2019ಮೈಸೂರು,ಡಿ.16(ಎಂಟಿವೈ)- ಮೊಟ್ಟ ಮೊದಲ ಬಾರಿಗೆ ಸೋಮವಾರ ಆರಂಭ ವಾದ ಎರಡು ದಿನಗಳ `ಕಾರಂಜಿಕೆರೆ ಉತ್ಸವ’ದಲ್ಲಿ ಮೈಸೂರಿನ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪರಿಸರ ಪ್ರೇಮಿ ಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕೆರೆ ವೈವಿಧ್ಯತೆ ಕುರಿ ತಂತೆ ಮಾಹಿತಿ ಪಡೆದು ಸಂಭ್ರಮಿಸಿದರು. ಪ್ರವಾಸಿಗರು ಹಾಗೂ ಪ್ರೇಮಿಗಳೇ ಇರು ತ್ತಿದ್ದ ಕಾರಂಜಿಕೆರೆ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಹಬ್ಬದ ಮನೆಯಂತೆ ಶೃಂಗಾರಗೊಂಡಿದ್ದ ಪ್ರವೇಶ ದ್ವಾರ ಸಾರ್ವಜನಿಕರನ್ನು ಕಾರಂಜಿಕೆರೆ ಹಬ್ಬಕ್ಕೆ…










