ಮನೆ ಬಾಗಿಲಲ್ಲೇ ಉದ್ಯೋಗಬೇಕೆಂಬ ಮನೋಭಾವ ಬಿಡಿ
ಮೈಸೂರು

ಮನೆ ಬಾಗಿಲಲ್ಲೇ ಉದ್ಯೋಗಬೇಕೆಂಬ ಮನೋಭಾವ ಬಿಡಿ

December 18, 2019

ಮೈಸೂರು,ಡಿ.17(ಆರ್‍ಕೆಬಿ)-ಮನೆ ಬಾಗಿಲಲ್ಲೇ ಉದ್ಯೋಗ ಬೇಕು ಎಂಬ ಮನೋಭಾವ ಬಿಟ್ಟು ಉದ್ಯೋಗ ಎಲ್ಲಿ ಸಿಕ್ಕಿದರೂ ಹೋಗಲು ಸಿದ್ಧರಾದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಕೌಶಲ್ಯ ಕರ್ನಾಟಕ ಮೈಸೂರು ಜಿಲ್ಲಾ ಅಧಿಕಾರಿ ಎನ್.ಎಸ್.ಶಿವಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿ ನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಎಜುಕೇರ್ ಸಂಸ್ಥೆ ಮಂಗಳವಾರ ಆಯೋ ಜಿಸಿದ್ದ ಕೌಶಲ ಕರ್ನಾಟಕ ತರಬೇತಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿಮ್ಮ ಮನೆ ಬಾಗಿಲಿಗೇ ಕೈಗಾರಿಕೆ ತರಲು ಸಾಧ್ಯವಿಲ್ಲ. ಉದ್ಯೋಗ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಹೋಗಲು ಸಿದ್ಧರಾಗಬೇಕು. ಉದ್ಯೋಗ ಯಾವುದೇ ಊರಿನಲ್ಲಿ ಸಿಕ್ಕಿದರೂ ಹೋಗಿ ಕೆಲಸ ಮಾಡಬಲ್ಲೇ ಎಂಬುದಾಗಿ ಮಾನಸಿಕ ಸ್ಥಿತಿ ಬದಲಾದರೆ ಮಾತ್ರ ಉದ್ಯೋಗ ಮತ್ತು ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯ. ಜೊತೆಗೆ ಉತ್ತಮ ಅನುಭವವನ್ನು ಹೊಂದಲು ಸಾಧ್ಯ ಎಂದು ಹೇಳಿದರು.

ಕೌಶಲ್ಯ ಇಲ್ಲದಿದ್ದರೆ ಉದ್ಯೋಗ ಸಿಗುವುದು ಕಷ್ಟ. ಅಂತಹ ಕೌಶಲ ತರ ಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ, ಮೌಲ್ಯಮಾಪನ ಮಾಡಿ, ಪ್ರಮಾಣಪತ್ರ ವನ್ನು ನೀಡುವ ಜೊತೆಗೆ ಉದ್ಯೋಗ ವನ್ನು ದೊರಕಿಸಿಕೊಡುವುದು ಕೌಶಲ್ಯ ಕರ್ನಾಟಕದ ಉದ್ದೇಶವಾಗಿದೆ. ತರಬೇತಿ ಹೊಂದಿದ ಬಳಿಕ ಉದ್ಯೋಗ ಸಿಕ್ಕಿದ ಕಡೆ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗುವಂತೆ ಸಲಹೆ ನೀಡಿದರು.

ಎಜುಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಚನಾ ಮಹೇಶ್ ಪ್ರಾಸ್ತಾ ವಿಕವಾಗಿ ಮಾತನಾಡಿ, ಯಾರಿಂದಲೂ ಪ್ರೋತ್ಸಾಹ, ಸಹಕಾರ ಸಿಗಲಿಲ್ಲ ಎಂದು ಇನ್ನೊಬ್ಬರನ್ನು ದೂಷಿಸುವ ಬದಲು ನಾವೇ ಮೊದಲ ಹೆಜ್ಜೆ ಇಡಬೇಕು. ಗುರಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿ ಕೊಂಡು ಮುಂದಡಿ ಇಟ್ಟರೆ ಉದ್ಯೋಗ ಮತ್ತು ಉದ್ಯಮದಲ್ಲಿ ಯಶಸ್ಸು ಮತ್ತು ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎ.ಎಸ್.ಸತೀಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ನಿವೃತ್ತ ಜಂಟಿ ನಿರ್ದೇ ಶಕ ಎಸ್.ರಾಮಕೃಷ್ಣೇಗೌಡ, ರುಡ್‍ಸೆಟ್ ನಿರ್ದೇಶಕ ಎನ್.ಜಿ.ಲಕ್ಷ್ಮಣರಾವ್ ಇನ್ನಿ ತರರು ಉಪಸ್ಥಿತರಿದ್ದರು.

Translate »