ಸಾಲಮನ್ನಾ ವಿಚಾರದಲ್ಲಿ ರೈತ ವಿರೋಧಿ ಧೋರಣೆ ಖಂಡಿಸಿ ರೈತರಿಂದ ಎಸ್‍ಬಿಐ ಬ್ಯಾಂಕ್‍ಗೆ ಮುತ್ತಿಗೆ
ಮಂಡ್ಯ

ಸಾಲಮನ್ನಾ ವಿಚಾರದಲ್ಲಿ ರೈತ ವಿರೋಧಿ ಧೋರಣೆ ಖಂಡಿಸಿ ರೈತರಿಂದ ಎಸ್‍ಬಿಐ ಬ್ಯಾಂಕ್‍ಗೆ ಮುತ್ತಿಗೆ

December 18, 2019

ಶ್ರೀರಂಗಪಟ್ಟಣ, ಡಿ.17(ವಿನಯ್)- ಸಾಲಮನ್ನಾ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿ ಗಳು ಅನುಸರಿಸುತ್ತಿರುವ ರೈತ ವಿರೋಧಿ ಧೋರಣೆ ಖಂಡಿಸಿ ರೈತರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ಪಟ್ಟಣದ ಎಸ್‍ಬಿಐ ಎದುರು ಸಮಾವೇಶಗೊಂಡ ರೈತಸಂಘ ಹಾಗೂ ದಲಿತ ಸಂಘಟನೆಯ ಕಾರ್ಯ ಕರ್ತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ರೈತರ ಸಾಲಮನ್ನಾ ವಿಚಾರದಲ್ಲಿ ಅನುಸರಿಸುತ್ತಿರುವ ಕ್ರಮ ವನ್ನು ತೀವ್ರವಾಗಿ ಖಂಡಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಂಜೇಶ್‍ಗೌಡ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ದಲ್ಲಿ ಆಗಿದ್ದ ಸಾಲಮನ್ನಾ ಯೋಜನೆ ಹಣವನ್ನು ಅಧಿಕಾರಿಗಳು ರೈತರ ಸಾಲದ ಬಡ್ಡಿಗೆ ವಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಈಗಾ ಗಲೇ ರೈತರ 2 ಲಕ್ಷ ವರೆಗಿನ ಸಾಲಮನ್ನಾ ಮಾಡಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ರೈತರ ಸಾಲಕ್ಕೆ ವಿಧಿಸಿದ್ದ ಬಡ್ಡಿಗೆ ಸಾಲ ಮನ್ನಾ ಯೋಜನೆ ಹಣ ವಜಾ ಮಾಡಿ ಕೊಳ್ಳುತ್ತಿರುವುದು ರೈತ ವಿರೋಧಿ ಧೋರಣೆ ಯಾಗಿದ್ದು, ಇಲ್ಲಿನ ವಿಜಯಾ, ಕೆನರಾ ಬ್ಯಾಂಕ್‍ಗಳು ಈ ಧೋರಣೆ ಅನುಸರಿಸು ತ್ತಿಲ್ಲ. ಆದರೆ ಎಸ್‍ಬಿಐ ವಸೂಲಾಗದ ರೈತರ ಸಾಲಕ್ಕೆ ಶೇ.15ರಿಂದ 50ರವರೆಗೆ ರಿಯಾಯಿತಿ ನೀಡುವುದಾಗಿ ತಿಳಿಸಿ ಬಡ್ಡಿ ಯನ್ನು 4ಪಟ್ಟು ಹೆಚ್ಚಿಸುವ ಮೂಲಕ ಅದ ರಲ್ಲಿ ರೈತರಿಗೆ ರಿಯಾಯಿತಿ ನೀಡಿ 2ಪಟ್ಟು ಬಡ್ಡಿ ಕಟ್ಟಿಸಿ ಬ್ಯಾಂಕ್ ಸಿಬ್ಬಂದಿ ಮೋಸ ಮಾಡು ತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು 15ದಿನದೊಳಗೆ ಸಾಲ ಮನ್ನಾ ಮಾಡದಿದ್ದರೆ ಬ್ಯಾಂಕ್ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವು ದಾಗಿ ಇದೇ ವೇಳೆ ಎಚ್ಚರಿಕೆ ನೀಡಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಬ್ಯಾಂಕ್ ಮ್ಯಾನೇಜರ್ ಮಾತನಾಡಿ, ಬ್ಯಾಂಕ್ ಕಾನೂ ನಿನ ಪ್ರಕಾರವೇ ನಡೆಯುತ್ತಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆಯೇ ಹೊರತು ನಮ್ಮ ನಿರ್ಣಯವೇ ಅಂತಿಮವಲ್ಲ. ಹೀಗಾಗಿ ನಿಮ್ಮ ಬೇಡಿಕೆಯನ್ನು ಮೇಲಧಿ ಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಸದಸ್ಯರಾದ ಚಂದ್ರು, ತಿಮ್ಮೇಗೌಡ, ದಲಿತ ಮುಖಂಡ ಕುಬೇರ, ರವಿಚಂದ್ರ, ಮೋಹನ್, ತೇಜಸ್ ಸೇರಿದಂತೆ ಇತರರಿದ್ದರು.

Translate »