ಪ್ರಸ್ತುತ ಕಾಲಘಟ್ಟದಲ್ಲೂ ಜಾತಿ ವ್ಯವಸ್ಥೆ ಅತ್ಯಂತ ಅಪಮಾನಕಾರಿ
ಮೈಸೂರು

ಪ್ರಸ್ತುತ ಕಾಲಘಟ್ಟದಲ್ಲೂ ಜಾತಿ ವ್ಯವಸ್ಥೆ ಅತ್ಯಂತ ಅಪಮಾನಕಾರಿ

December 18, 2019

ಮೈಸೂರು,ಡಿ.17-ಪ್ರಸ್ತುತ ಜಾಗತಿಕ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಅಪಮಾನಕಾರಿ ಎಂದು ಸಾಹಿತಿ ಪ್ರೊ.ಗೋವಿಂದಯ್ಯ ಅಭಿಪ್ರಾಯಪಟ್ಟರು.

ನಗರದ ಇಂಜಿನಿಯರ್‍ಗಳ ಸಂಸ್ಥೆ ಯಲ್ಲಿ ನಡೆದ ಶೋಷಿತ ಸಮುದಾಯದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಬಲ ಜಾತಿಯವರು ಕೆಳಜಾತಿ ಯವರ ಶೋಷಿಸುವುದು, ಅಸ್ಪøಶ್ಯತೆ ಆಚರಿ ಸುವುದು ಬೇಸರದ ಸಂಗತಿ ಎಂದರು.
ದಲಿತರು, ಶೋಷಿತರು, ಹಿಂದುಳಿದ ವರು, ಸಾಮಾಜಿಕ ನ್ಯಾಯ ಹಾಗೂ ತಮ್ಮ ಹಕ್ಕುಗಳನ್ನು ಪಡೆಯಲು ಒಗ್ಗೂಡ ಬೇಕಿದೆ ಎಂದು ಸಲಹೆ ನೀಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಬಿಜೆಪಿಗೆ ಧರ್ಮ ಹಾಗೂ ಸಂಸ್ಕøತಿ ಬಗ್ಗೆ ಗೌರವವಿದ್ದರೆ, ಶೋಷಿ ತರು ಹಾಗೂ ದಮನಿತರ ಬಗ್ಗೆ ಹೆಚ್ಚು ಕಾಳಜಿ ವಹಿಸಲಿ. ಭಾರತಮಾತೆ, ಭಾರ ತೀಯತೆ, ಧರ್ಮ, ಸಂಸ್ಕøತಿಯನ್ನು ಕಟ್ಟಿದ ವರು, ಉಳಿಸಿದವರು ಶೋಷಿತರೆ. ಇದನ್ನು ಎಲ್ಲಾ ಶೋಷಿತ ಸಮುದಾಯ ಅರಿಯಬೇಕಿದ್ದು, ಶೋಷಿತರು ತಮ್ಮ ಜಾತಿಯ ಜೈಲುಗಳಿಂದ ಹೊರಬಂದು ಸಂಘ ಟನೆಗೊಳ್ಳದಿದ್ದರೆ, ಎಲ್ಲರ ಸರ್ವ ನಾಶ ಖಂಡಿತ ಎಂದು ಎಚ್ಚರಿಸಿದರು.

ಪ್ರಸ್ತುತ ಕಾಲಘಟ್ಟದಲ್ಲಿ ದಲಿತ ಚಳವಳಿಯನ್ನು ಮುಂದುವರೆಸಬೇಕಾದ ಅಗತ್ಯವಿದೆ ಎಂದು ಇದೇ ವೇಳೆ ಗೋವಿಂ ದಯ್ಯ ಬಲವಾಗಿ ಪ್ರತಿಪಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ, ಇಂದಿನ ತಂತ್ರಜ್ಞಾನದ ಹೈಟೆಕ್ ಯುಗದಲ್ಲೂ ಜಾತಿ, ಸಾಮಾಜಿಕ ಅಸಮ ತೋಲನವನ್ನು ಸಹಿಸಲು ಅಸಾಧ್ಯ ವಾದಂತಹ ವಾತಾವರಣ ಜೀವಂತ ವಾಗಿದೆ ಎಂದರು. ಶತಮಾನಗಳ ಹಿಂದಿನಿಂದಲೂ ಸಾಮಾಜಿಕ ಸುಧಾರಣೆ ನಿರಂತರವಾಗಿ ನಡೆದಿದ್ದರೂ, ಅಸಹಾಯಕರು ಶೋಷಿತ ರನ್ನು ತುಳಿಯುವ ಸಮಾಜ ಸದೃಢಗೊ ಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ನಿಂಗರಾಜ ಮಲ್ಲಾಡಿ, ಹೆಚ್.ಬಿ.ದಿವಾಕರ್, ರಾಮಸ್ವಾಮಿ, ವೆಂಕಟೇಶ್, ಕೆಂಪರಾಜು ಇತರರು ಉಪಸ್ಥಿತರಿದ್ದರು.

Translate »