ದ್ವಿತೀಯ ಪಿಯುಸಿ ಪರೀಕ್ಷೆ ಈ ಸಾಲಿನಿಂದ 42 ಪುಟಗಳ ಉತ್ತರ ಪತ್ರಿಕೆ ವಿತರಣೆ
ಮೈಸೂರು

ದ್ವಿತೀಯ ಪಿಯುಸಿ ಪರೀಕ್ಷೆ ಈ ಸಾಲಿನಿಂದ 42 ಪುಟಗಳ ಉತ್ತರ ಪತ್ರಿಕೆ ವಿತರಣೆ

December 18, 2019

ಮೈಸೂರು,ಡಿ.17(ಎಂಕೆ)-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ವರ್ಷದಿಂದ 42 ಪುಟಗಳ ಉತ್ತರ ಪತ್ರಿಕೆಯನ್ನು ನೀಡ ಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಿರಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಡಾ.ಬಿ.ಎನ್.ನಾಗರತ್ನ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯವಿಠಲ ಪದವಿಪೂರ್ವ ಕಾಲೇ ಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್‍ಸೈಟ್ ಉದ್ಘಾಟಿಸಿ ಮಾತ ನಾಡಿದ ಅವರು,  42 ಪುಟಗಳ ಉತ್ತರ ಪತ್ರಿಕೆಯ ಜತೆಗೆ ಹೆಚ್ಚುವರಿ ಪುಟಗಳನ್ನು ನೀಡು ವುದಿಲ್ಲ. ಯಾವುದೇ ಹಾಳೆಗಳನ್ನು ಹರಿದು ಹಾಕುವಂತಿಲ್ಲ. 42 ಪುಟಗಳಲ್ಲಿಯೇ ಉತ್ತರ ಬರೆಯಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 250 ಪದವಿ ಪೂರ್ವ ಕಾಲೇಜುಗಳಿದ್ದು, 30 ಸಾವಿರ ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷದ ಜಿಲ್ಲಾವಾರು ಫಲಿತಾಂಶ ಪಟ್ಟಿ ಯಲ್ಲಿ ಮೈಸೂರು ಜಿಲ್ಲೆ 14ನೇ ಸ್ಥಾನ ದಲ್ಲಿತ್ತು. ಆದರೆ ಈ ವರ್ಷ ಕಳೆದ ಸಾಲಿ ಗಿಂತ ಉತ್ತಮ ಫಲಿತಾಂಶ ಬರುವಂತೆ ಈಗಾಗಲೇ 4 ಪ್ರಿಪರೇಟರಿ ಪರೀಕ್ಷೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳು ಭಯ ಪಡದೆ ಉತ್ತಮವಾಗಿ ಬರೆಯಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಿ. ವಿದ್ಯಾರ್ಥಿಗಳು ಪ್ರತಿನಿತ್ಯ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಬೇಕು. ಇದರಿಂದ ಏಕಾಗ್ರತೆ ಜತೆಗೆ ಆರೋಗ್ಯವು ವೃದ್ಧಿಯಾಗುತ್ತದೆ. ಪಿಯುಸಿ ನಂತರ ಮುಂದೇನು ಎಂದು ಚಿಂತಿಸದೆ ಅಧ್ಯಯನದಲ್ಲಿ ನಿರತ ರಾಗಿ ಎಂದು ಕಿವಿಮಾತು ಹೇಳಿದರು.

ವಿದ್ಯಾಸಂಸ್ಥೆಗಳು ಬೆಳೆಯಲು ವಿದ್ಯಾರ್ಥಿ ಗಳು ಮತ್ತು ಪೋಷಕರು ಮುಖ್ಯ ಕಾರಣ ರಾಗುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಒತ್ತಡ ತರಬಾರದು. ಅಲ್ಲದೆ ಬೇರೆ ವಿದ್ಯಾರ್ಥಿಗಳ ನೋಡಿ, ತಮ್ಮ ಮಕ್ಕಳನ್ನು ಹಿಯ್ಯಾಳಿಸಬಾರದು ಎಂದು ತಿಳಿಸಿದರು.

ಬಳಿಕ ನಡೆದ ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಬಣ್ಣ ಬಣ್ಣದ ಉಡುಗೆ ತೊಟ್ಟು ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಕನ್ನಡ, ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿ ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರ ಕರ್ತ ಅಂಶಿ ಪ್ರಸನ್ನಕುಮಾರ್, ವಿಜಯ ವಿಠಲ ವಿದ್ಯಾಸಂಸ್ಥೆಗಳ ಖಜಾಂಚಿ ಬಿ.ಎಸ್.ರವಿ ಕುಮಾರ್, ಟ್ರಸ್ಟಿ ಶ್ರೀಕಾಂತ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

Translate »