ಬೇಡಿಕೆಗನುಗುಣವಾಗಿ ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ
ಹಾಸನ

ಬೇಡಿಕೆಗನುಗುಣವಾಗಿ ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ

December 18, 2019

ಹಾಸನ, ಡಿ.17- ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿ ರುವ ಯೋಜನೆಗಳನ್ನು ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಬೇಕಿದೆ. ಅದಕ್ಕಾಗಿ ಎಲ್ಲಾ ಇಲಾಖಾಧಿಕಾರಿ ಗಳು ಶ್ರಮಿಸಬೇಕು ಎಂದು ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿಯೂ ಆದ ನವೀನ್ ರಾಜ್ ಸಿಂಗ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಬೇಡಿಕೆಗೆ ತಕ್ಕಂತೆ ರಾಗಿ, ಭತ್ತದ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆಗೆ ಅನುಗುಣವಾಗಿ ಖರೀದಿಸುವಂತೆ ಕೃಷಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕು ಹಾಗೂ ಹೋಬಳಿ ಮಟ್ಟ ದಲ್ಲಿ ಮಳೆ, ಬರ ಪರಿಹಾರ, ಕುಡಿಯುವ ನೀರು, ಆರೋಗ್ಯ ಇಲಾಖೆ, ವಸತಿ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ತಮ್ಮ ಗಮನಕ್ಕೆ ತರುವಂತೆಯೂ ರೈತರ ಆತ್ಮಹತ್ಯೆ ಪ್ರಕ ರಣಗಳ ಕುರಿತು ನಿಗದಿತ ಸಮಯದಲ್ಲಿ ಸಭೆ ನಡೆಸಿ, ತ್ವರಿತಗತಿಯಲ್ಲಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಾಕಿಯಿರುವ 130 ಶಾಲೆ ಹಾಗೂ ಅಂಗನವಾಡಿಗಳ ದುರಸ್ತಿ ಕೆಲಸ ಗಳನ್ನು ತುರ್ತಾಗಿ ಮುಗಿಸಿ. ನಿರ್ಮಾಣ ಕಾರ್ಯಗಳಿಗೆ ಮರಳಿನ ಕೊರತೆ ಯಾಗದಂತೆ ಗಮನ ಹರಿಸಿ ಎಂದು ನಿರ್ದೇಶನ ನೀಡಿದರು.

ಎಂ ಸ್ಯಾಂಡ್ ಘಟಕ: ಜಿಲ್ಲೆಯಲ್ಲಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಮೈಸೂರು ಮಿನರಲ್ಸ್‍ನಿಂದ ಎಮ್‍ಸ್ಯಾಂಡ್ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುವುದು. ಅದ ಕ್ಕಾಗಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿ ಎಂದರು. ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಪೈಪ್‍ಲೈನ್ ಮೂಲಕವೇ ಕುಡಿಯುವ ನೀರಿನ ಸರಬ ರಾಜಾಗುವಂತೆ ನೋಡಿಕೊಳ್ಳಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಶಾಲೆಯ ಮಕ್ಕಳು ಅಪಾಯಕಾರಿ ಕಟ್ಟಡ ಗಳಲ್ಲಿ ಕಲಿಯುವುದನ್ನು ತಪ್ಪಿಸಿ. ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿ ಕಟ್ಟಡಗಳನ್ನು ದುರಸ್ತಿಗಾಗಿ ಪಡೆದುಕೊಳ್ಳಿ ಎಂದು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆÉ ತಿಳಿಸಿದರು.

ಸಭೆಯಲ್ಲಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ, ರೇಡಿಯಾಲಜಿಸ್ಟ್, ಫಾರ್ಮಸಿಸ್ಟ್‍ಗಳ ಕೊರತೆ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. ಜಿಪಂ ಸಿಇಓ ಬಿ.ಎ.ಪರಮೇಶ್, ಉಪ ಅರಣ್ಯ ಸಂರಕ್ಷ ಣಾಧಿಕಾರಿ ಶಿವರಾಂ ಬಾಬು, ಉಪವಿಭಾಗಾ ಧಿಕಾರಿಗಳಾದ ಡಾ.ನವೀನ್ ಭಟ್, ಗಿರೀಶ್ ನಂದನ್, ತಹಸಿಲ್ದಾರರು ಸೇರಿ ದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಧಿಕಾರಿಗಳು ಸಭೆಯಲ್ಲಿದ್ದರು.

Translate »