ಸರ್ಕಾರಿ ಅತಿಥಿಗೃಹದ ಪಾರಂಪರಿಕ ಕಮಾನು ಸಂರಕ್ಷಣೆ ಕೆಲಸ ಆರಂಭ
ಮೈಸೂರು

ಸರ್ಕಾರಿ ಅತಿಥಿಗೃಹದ ಪಾರಂಪರಿಕ ಕಮಾನು ಸಂರಕ್ಷಣೆ ಕೆಲಸ ಆರಂಭ

December 18, 2019

ಮೈಸೂರು,ಡಿ.17(ಆರ್‍ಕೆ)- ಮೈಸೂ ರಿನ ಸರ್ಕಾರಿ ಅತಿಥಿ ಗೃಹದ ಉತ್ತರ ಭಾಗದಲ್ಲಿರುವ ಪಾರಂಪರಿಕ ಕಮಾನನ್ನು ಸಂರಕ್ಷಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗಿದೆ.

ನಜರ್‍ಬಾದ್‍ನ ಬಿ.ಎನ್. ರಸ್ತೆಯಲ್ಲಿ ರುವ ಕಮಾನಿಗೆ ಧಕ್ಕೆಯಾಗದಂತೆ ಸುತ್ತ ಕಬ್ಬಿಣದ ಸಲಾಕೆಗಳನ್ನು ಅಳವಡಿಸುವ ಕಾಮಗಾರಿಯನ್ನು ಪಾಲಿಕೆಯು ಮಂಗಳ ವಾರ ಆರಂಭಿಸಿದೆ. ಅವೈಜ್ಞಾನಿಕವಾಗಿ ರಿಪೇರಿ ಮಾಡಲಾಗುತ್ತಿದೆ ಎಂಬ ವರದಿ ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟ ಗೊಂಡ ಬೆನ್ನಲ್ಲೇ ಪಾಲಿಕೆ ಕಾಮಗಾರಿ ಆರಂಭಿಸಿದೆ.

ಜೆಸಿಬಿಯಿಂದ ಕಮಾನಿನ ಸುತ್ತ ಗುಂಡಿ ತೆಗೆಯುವ ಕೆಲಸ ಆರಂಭವಾಗಿದ್ದು, ನಂತರ ಅಡಿಪಾಯ ಹಾಕಿ ಅದರ ಮೇಲೆ ಕಾಂಕ್ರಿಟ್ ಪ್ಲಿಂತ್ ನಿರ್ಮಿಸಲಾಗುವುದು. ಅದು ಕ್ಯೂರಿಂಗ್ ಆದ ಮೇಲೆ ಎರಡು ಅಡಿ ಎತ್ತರದ ಗೋಡೆ ಕಟ್ಟಿ ಅದರ ಮೇಲೆ 2 ಮೀಟರ್ ಎತ್ತರದ ಪಾರಂಪರಿಕ ಶೈಲಿಯ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗು ವುದು ಎಂದು ಪಾಲಿಕೆ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ವಿಶೇಷ ಪಾರಂಪರಿಕ ಸಮಿತಿ ಸದಸ್ಯರು ನೀಡಿ ರುವ ಮಾರ್ಗಸೂಚಿ ಹಾಗೂ ಪಾರಂ ಪರಿಕ ವಿನ್ಯಾಸದಂತೆಯೇ ಕಮಾನಿನ ಸಂರಕ್ಷಣಾ ಕೆಲಸವನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಯಾವುದೇ ವಾಹನ ಡಿಕ್ಕಿ ಹೊಡೆ ದರೂ ಪಾರಂಪರಿಕ ನಿರ್ಮಾಣಕ್ಕೆ ಧಕ್ಕೆಯಾಗದಂತೆ ಕಮಾನಿನ ಸುತ್ತ 8 ಅಡಿ ಎತ್ತರದ ಕಬ್ಬಿಣದ ಸರಳುಗಳನ್ನು ಅಳವಡಿಸುತ್ತಿದ್ದು, ಮುಂದೆ ಕಮಾನನ್ನು ರಿಪೇರಿ ಮಾಡಿ ಯಥಾಸ್ಥಿತಿ ಕಾಪಾಡುವ ಕೆಲಸವನ್ನು ಪಾರಂಪರಿಕ ಇಲಾಖೆಯು ಮಾಡುತ್ತದೆ ಎಂದು ಶ್ರೀನಿವಾಸ್ ತಿಳಿಸಿದರು.

ಈಗಾಗಲೇ ಗ್ರಾಮಾಂತರ ಬಸ್ ನಿಲ್ದಾಣದೆದುರು ಹಾಗೂ ಹುಣಸೂರು ರಸ್ತೆಯಲ್ಲಿ ಡಿಸಿ ಕಚೇರಿಗೆ ಹೋಗುವ ರಸ್ತೆಯಲ್ಲಿರುವ ಪಾರಂಪರಿಕ ಕಮಾನಿಗೆ ನಿರ್ಮಿಸಿರುವಂತೆಯೇ ಸರ್ಕಾರಿ ಅತಿಥಿ ಗೃಹದ ಉತ್ತರ ಭಾಗದ ಆರ್ಚ್‍ಗೂ ಭದ್ರತಾ ವ್ಯವಸ್ಥೆಯನ್ನು ಪಾಲಿಕೆಯಿಂದ ಮಾಡ ಲಾಗುತ್ತಿದೆ ಎಂದು ಅವರು ತಿಳಿಸಿದರು. ನಿರಂತರವಾಗಿ ಹಾಗೂ ವೇಗವಾಗಿ ಕಾಮ ಗಾರಿ ನಡೆಸಿ 15 ದಿನದೊಳಗಾಗಿ ಪೂರ್ಣ ಗೊಳಿಸುತ್ತೇವೆ. ನಂತರವಷ್ಟೇ ರಸ್ತೆ ಕಾಮಗಾರಿ ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.

Translate »