ಮೈಸೂರು,ಡಿ.18(ಆರ್‍ಕೆ)-ದೂರ ಶಿಕ್ಷಣ ವ್ಯವಸ್ಥೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರಲಿ ಎಂದು ಉನ್ನತ ಶಿಕ್ಷಣ ಪರಿಷತ್(Higher Education Council) ಸಾಮಾನ್ಯ ಸಭೆಯು ನಿರ್ಣಯ ಕೈಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ದೂರ ಶಿಕ್ಷಣ ನೀಡಲು ಈಗಾಗಲೇ ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ಅನು ಮತಿ ನೀಡಿರುವುದರಿಂದ ಕಾಲೇಜುಗಳಲ್ಲಿ ದಾಖಲಾಗಿ…
ಡಿ.26ರಂದು ಅಪರೂಪದ `ಕಂಕಣ’ ಸೂರ್ಯ ಗ್ರಹಣ
December 19, 2019ಮೈಸೂರು,ಡಿ.18(ಆರ್‍ಕೆಬಿ)-ಡಿ.26ರಂದು ಬೆಳಿಗ್ಗೆ 8.06ರಿಂದ 11.09ರವರೆಗೆ ಸಂಭವಿಸಲಿರುವ ಅಪರೂಪದ `ಕಂಕಣ ಸೂರ್ಯ ಗ್ರಹಣ’ವನ್ನು ಯಾವುದೇ ಮೌಢ್ಯವಿಲ್ಲದೇ, ಸುರಕ್ಷಿತವಾಗಿ ವೀಕ್ಷಿಸು ವಂತೆ ಹರಿ ವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ಶ್ರೀಧರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 172 ವರ್ಷಗಳ ನಂತರ ಸಂಭವಿಸುತ್ತಿರುವ ಕಂಕಣ ಸೂರ್ಯಗ್ರಹಣದ ಈ ಅಪರೂಪದ ಸೂರ್ಯ-ಚಂದ್ರರ ಕಣ್ಣಾ ಮುಚ್ಚಾಲೆ ಬೆಳಕಿನ ಆಟದ ಖಗೋಳ ವಿದ್ಯಮಾನವನ್ನು ವೀಕ್ಷಿಸಿ ಸೂರ್ಯ ಸಂಭ್ರಮ, ಸೂರ್ಯೋತ್ಸವ ಆಚರಿಸುವಂತೆ ತಿಳಿಸಿದರು. ಸೂರ್ಯ ಮತ್ತು ಭೂಮಿ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ,…
ದೇವೇಗೌಡರು ವಾನಪ್ರಸ್ಥಾಶ್ರಮದ ಶಾಂತಿ ಪಡೆಯಲಿ
December 19, 2019– ಟಿ.ಜೆ.ಎಸ್. ಜಾರ್ಜ್ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಿದಾಗ ಅದರ ಲಾಭ ಬಿಜೆಪಿಗೆ ಆಯಿತು. ಏಕೆಂದರೆ ಬಿಜೆಪಿ ವಿರೋಧಿ ಮತಗಳು ಒಡೆದು ಹೋದವು. ಯಡಿಯೂರಪ್ಪನವರ ಮೇಲಿದ್ದ ಕಳಂಕ (ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹೋಗಿ ಬಂದ ಅವರು ರಾಜ್ಯದಲ್ಲಿ ಬಿಜೆಪಿಯ ಏಕೈಕ ಅಧಿನಾಯಕ) ಸಮರ್ಥ ಪರ್ಯಾಯದ ಅನುಪಸ್ಥಿತಿಯಲ್ಲಿ ಮರೆಯಾಗಿ ಹೋಯಿತು. ಬಿಜೆಪಿಯ ಈ ಗೊಂದಲದ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಏನಾದರೂ ಹೊಳಹುಗಳನ್ನು ಹೊಂದಿದೆಯೋ ನಿಶ್ಚಯವಿಲ್ಲ. ಹಾಗೊಂದು ವೇಳೆ ಅದು ಹೊಳಹುಗಳನ್ನು ಹೊಂದಿದ್ದರೆ ಅದು…
ವ್ಯಾಪ್ತಿ ಮೀರಿ ದೂರ ಶಿಕ್ಷಣ ಅನುಮತಿ ಸರಿಯಿಲ್ಲ: ಡಾ.ಎನ್.ಎಸ್.ರಾಮೇಗೌಡ
December 19, 2019ಮೈಸೂರು, ಡಿ. 18(ಆರ್‍ಕೆ)- ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪ್ತಿ ಮೀರಿ ದೂರ ಶಿಕ್ಷಣ ವ್ಯಾಸಂಗಕ್ಕೆ ಅನುಮತಿ ನೀಡಿರುವುದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಆಘಾತಕಾರಿ ಎಂದು ವಿಶ್ರಾಂತ ಕುಲಪತಿ ಡಾ. ಎನ್.ಎಸ್.ರಾಮೇಗೌಡ ತಿಳಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸಾಂಪ್ರ ದಾಯಿಕ ವಿಶ್ವವಿದ್ಯಾನಿಲಯಗಳಿಗೆ ದೂರ ಶಿಕ್ಷಣಕ್ಕೆ ಅನುಮತಿ ನೀಡಿರುವುದರಿಂದ ಮುಕ್ತ ವಿಶ್ವವಿದ್ಯಾನಿಲಯದ ಅಸ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿಟಿಯು, ರಾಜೀವ್‍ಗಾಂಧಿ, ಕಾನೂನು ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದಾಗ ಆಯಾ ವ್ಯಾಪ್ತಿಗೆ ಬರುವ ಕಾಲೇಜುಗಳನ್ನು ಸೇರಿಸಲಾಯಿತು. ಆದರೆ…
ಎಸ್.ಎಂ.ಕೃಷ್ಣರ `ಕೃಷ್ಣಪಥ’ ಸಾಧನೆ-ಸಿದ್ಧಿಗಳ ಪರಿಚಯ, ಆಕರ ಗ್ರಂಥಗಳ ಲೋಕಾರ್ಪಣೆ
December 19, 2019ಮೈಸೂರು,ಡಿ.18-ಕೃಷ್ಣಪಥ ಸಮಿತಿ ವತಿಯಿಂದ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರ ಐವತ್ತು ವಸಂತಗಳ ಸಾರ್ಥಕ ಸಂಸದೀಯ ಬದುಕಿನ ನೆನಪಿಗಾಗಿ ಹೊರತಂದಿರುವ ಎಸ್.ಎಂ. ಕೃಷ್ಣ ಅವರ `ಕೃಷ್ಣಪಥ’ ಸಾಧನೆ-ಸಿದ್ಧಿಗಳ ಪರಿಚಯ ಹಾಗೂ ಆಕರ ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನು ಜ.4 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾ ಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದ ಮಹಾರಾಜ್ ಕೃಷ್ಣಪಥ ಲೋಕಾರ್ಪಣೆ ಮಾಡುವರು. ನಿವೃತ್ತ…
ಡಿ.20, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ
December 19, 2019ಮೈಸೂರು, ಡಿ.18-ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ.ಮರೀಗೌಡರ ಹುಟ್ಟುಹಬ್ಬದ ಅಂಗವಾಗಿ ಡಿ.20ರಂದು ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಟ್ಟದ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ, 8.30ಕ್ಕೆ ಶಕ್ತಿಧಾಮದ ಬಡ ಮಹಿಳೆಯರಿಗೆ ಸೀರೆ ವಿತರಣೆ, 150 ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ಹಾಗೂ ನೋಟ್ ಪುಸ್ತಕ ವಿತರಣೆ, 10 ಗಂಟೆಗೆ ಧನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಿಗೆ ಸಿಹಿ ವಿತರಣೆ ನಡೆಯಲಿದೆ….
`ಮಾಧ್ಯಮ: ಪ್ರಜಾಸತ್ತೆ’ ರಾಷ್ಟ್ರೀಯ ವಿಚಾರ ಸಂಕಿರಣ
December 19, 2019ಮೈಸೂರು, ಡಿ.18(ಆರ್‍ಕೆಬಿ)- ಗಾಂಧಿ ವಿಚಾರ ಪರಿಷತ್ತು, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಜಂಟಿಯಾಗಿ ಡಿ.21 ಮತ್ತು 22ರಂದು ಮೈಸೂರಿನ ಅರವಿಂದನಗರದ ಆದಿಚುಂಚನಗಿರಿ ರಸ್ತೆಯ ಉದ್ದೇಶಿತ ಗಾಂಧಿ ಭವನ ನಿವೇಶನದಲ್ಲಿ ಪತ್ರಿಕೋದ್ಯಮ ಕುರಿತ `ಮಾಧ್ಯಮ: ಪ್ರಜಾಸತ್ತೆ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಗಾಂಧಿ ವಿಚಾರ ಪರಿಷತ್ತಿನ ಅಧ್ಯಕ್ಷ ಪ.ಮಲ್ಲೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಡಿ.21ರಂದು ಬೆಳಿಗ್ಗೆ 10.30 ಗಂಟೆಗೆ ಹಿರಿಯ ಗಾಂಧಿವಾದಿ, ಪತ್ರಕರ್ತ ರಾಜಮೋಹನಗಾಂಧಿ ಸಮಾವೇಶಕ್ಕೆ…
ಶ್ರೀರಾಮಕೃಷ್ಣ ವಿದ್ಯಾಶಾಲೆಯ ಹಳೆ ವಿದ್ಯಾರ್ಥಿ ಪುನೀತ್ ಟಿ. ಘಂಟಿಗೆ ಚಿನ್ನದ ಪದಕ
December 19, 2019ಮೈಸೂರು,ಡಿ.18-ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ಅಲ್ಯೂಮ್ನಿ ವಿದ್ಯಾರ್ಥಿ ಪುನೀತ್ ಟಿ. ಘಂಟಿ ಅವ ರನ್ನು ಕೆ. ಸರೋಜಿನಿ ಅವರು ಸ್ಥಾಪಿಸಿರುವ `ಅತ್ಯುತ್ತಮ ಗುಣ’ (ಔಟ್‍ಸ್ಟ್ಯಾಂಡಿಂಗ್ ಕ್ಯಾರೆಕ್ಟರ್)ಕ್ಕೆ ಕೊಡ ಮಾಡುವ ಡಾ.ಆರ್.ಕೆ.ನಾರಾಯಣ ಮತ್ತು ಶ್ರೀಮತಿ ಪಿ.ಕೌಶಲ್ಯ ನಾರಾ ಯಣ ಮೆಮೋರಿಯಲ್ ಗೋಲ್ಡ್ ಮೆಡಲ್‍ಗೆ ಆಯ್ಕೆ ಮಾಡ ಲಾಗಿದೆ. ಡಿ.21ರಂದು ಸಂಜೆ 6.30 ಗಂಟೆಗೆ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಹಾಗೂ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ ಎಸ್.ಎಸ್. ನಾಗಾನಂದ್…
ಸಾಲಿಗ್ರಾಮ ದೌರ್ಜನ್ಯ ಘಟನೆ: ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಲು ಹರಿಹರ ಆನಂದಸ್ವಾಮಿ ಒತ್ತಾಯ
December 19, 2019ಮೈಸೂರು,ಡಿ.18(ಆರ್‍ಕೆಬಿ)-ಸಾಲಿಗ್ರಾಮದಲ್ಲಿ ದೌರ್ಜನ್ಯ ಎಸಗಿದವರ ಮೇಲೆ ಇದುವರೆಗೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಯಾವೊಂದು ಜಾತಿ ನಿಂದನೆ ಪ್ರಕರಣ ವನ್ನೂ ದಾಖಲಿಸಿಲ್ಲ. ಅಲ್ಲಿನ ಪೊಲೀಸರು ಪಕ್ಷಪಾತಿ ಗಳಂತೆ ವರ್ತಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಗೆ ಭೇಟಿ ನೀಡಿ ಶಾಶ್ವತವಾಗಿ ಅಲ್ಲಿ ದೌರ್ಜನ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಹರಿಹರ ಆನಂದಸ್ವಾಮಿ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಾರಾ ಹೆಸರು ಇರುವವರೆಲ್ಲ ನನ್ನ ಸಹೋದರರಲ್ಲ, ಸಾಲಿಗ್ರಾಮ ಪ್ರಕರಣದಲ್ಲಿ ನನ್ನ ಸಹೋ ದರನ…
ದೇಶದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅಭಿಮತ
December 19, 2019ಮೈಸೂರು, ಡಿ.18(ಎಸ್‍ಪಿಎನ್)- ದೇಹದ ಒಂದು ಭಾಗ ಅಭಿವೃದ್ಧಿಯಾಗಿ ಇತರೆ ಭಾಗಗಳು ಊನವಾಗಿದ್ದರೆ ಅದು ದೇಹದ ಪರಿಪೂರ್ಣತೆ ಎಂದಾಗುವುದು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ದೇಶದ ಒಂದು ಭಾಗ ಅಭಿವೃದ್ಧಿಗೊಂಡು ಮಿಕ್ಕ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತ ವಾಗಿದ್ದರೆ, ಅಂತಹ ಆಡಳಿತವನ್ನು ರೋಗಗ್ರಸ್ತ ಎನ್ನಬಹುದು ಎಂದು ಪೇಜಾವರ ಅಧೋಕ್ಷಜ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು. ಮೈಸೂರಿನ ಸರಸ್ವತಿಪುರಂ ವಿಜಯವಿಠ್ಠಲ ವಿದ್ಯಾಶಾಲಾ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಆಧುನಿಕ ಯುಗದಲ್ಲಿ ಪ್ರತಿಭೆಗಳಿಗೆ ಪ್ರಪಂಚದ…










