`ಮಾಧ್ಯಮ: ಪ್ರಜಾಸತ್ತೆ’ ರಾಷ್ಟ್ರೀಯ ವಿಚಾರ ಸಂಕಿರಣ
ಮೈಸೂರು

`ಮಾಧ್ಯಮ: ಪ್ರಜಾಸತ್ತೆ’ ರಾಷ್ಟ್ರೀಯ ವಿಚಾರ ಸಂಕಿರಣ

December 19, 2019

ಮೈಸೂರು, ಡಿ.18(ಆರ್‍ಕೆಬಿ)- ಗಾಂಧಿ ವಿಚಾರ ಪರಿಷತ್ತು, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಜಂಟಿಯಾಗಿ ಡಿ.21 ಮತ್ತು 22ರಂದು ಮೈಸೂರಿನ ಅರವಿಂದನಗರದ ಆದಿಚುಂಚನಗಿರಿ ರಸ್ತೆಯ ಉದ್ದೇಶಿತ ಗಾಂಧಿ ಭವನ ನಿವೇಶನದಲ್ಲಿ ಪತ್ರಿಕೋದ್ಯಮ ಕುರಿತ `ಮಾಧ್ಯಮ: ಪ್ರಜಾಸತ್ತೆ’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಗಾಂಧಿ ವಿಚಾರ ಪರಿಷತ್ತಿನ ಅಧ್ಯಕ್ಷ ಪ.ಮಲ್ಲೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಡಿ.21ರಂದು ಬೆಳಿಗ್ಗೆ 10.30 ಗಂಟೆಗೆ ಹಿರಿಯ ಗಾಂಧಿವಾದಿ, ಪತ್ರಕರ್ತ ರಾಜಮೋಹನಗಾಂಧಿ ಸಮಾವೇಶಕ್ಕೆ ಚಾಲನೆ ನೀಡುವರು. ಗಾಂಧಿ ವಿಚಾರ ಪರಿಷತ್ ಗೌರವಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 2 ಗಂಟೆಗೆ ಮೊದಲ ಗೋಷ್ಠಿಯಲ್ಲಿ `ಮಾಧ್ಯಮ- ಭಾರತದ ಅಳಿವು-ಉಳಿವು’ ಕುರಿತು ಔಟ್‍ಲುಕ್ ಮಾಜಿ ಸಂಪಾದಕ ಕೃಷ್ಣಪ್ರಸಾದ್, `ಮಾಧ್ಯಮ ಅಪಾಯ ಕರವಾಗಿದೆ’ ಕುರಿತು ಹಿರಿಯ ಪತ್ರಕರ್ತ, ರಾಜ್ಯಸಭಾ ಸದಸ್ಯ ಕುಮಾರ್ ಕೇತ್ಕರ್, `ಮಾಧ್ಯಮದಲ್ಲಿ ಬದಲಾವಣೆ’ ಕುರಿತು ಪತ್ರಕರ್ತ ರವೀಂದ್ರ ಭಟ್ಟ, `ಮಾಧ್ಯಮ ಎಷ್ಟು ಉಚಿತ’ ಕುರಿತು ಪತ್ರಕರ್ತರಾದ ಸೀಮಾ ಮುಸ್ತಫಾ, `ಧರ್ಮ ಮತ್ತು ಪ್ರಚಾರ’ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ ವಿಚಾರ ಮಂಡಿಸುವರು ಎಂದರು.

ಡಿ.22ರಂದು ಬೆಳಿಗ್ಗೆ 10.30 ಗಂಟೆಗೆ ಸಮಾರೋಪ ಗೋಷ್ಠಿಯಲ್ಲಿ `ಅಭಿವೃದ್ಧಿ ಪತ್ರಿ ಕೋದ್ಯಮ’ದ ಬಗ್ಗೆ ಲೇಖಕಿ ಬಿ.ಆರ್.ಪೂರ್ಣಿಮಾ, `ಕಾಯುವ ನಾಯಿ ಅಲ್ಲ ಮಡಿಲ ಲ್ಲಾಡುವ ಮುದ್ದಿನ ನಾಯಿ’ ಕುರಿತು ಪತ್ರಕರ್ತ ಡಿ.ಉಮಾಪತಿ, `ತಪ್ಪಿಸಬಹುದಾಗಿದ್ದ ನಂಬಿಕೆ ದ್ರೋಹ’ ಕುರಿತು ಚಿಂತಕ ಡಾ.ಜಿ.ರಾಮಕೃಷ್ಣ, ಬ್ರೇಕಿಂಗ್ ನ್ಯೂಸ್ ಮಧ್ಯೆ ಬದುಕಲು ಕಲಿಯಿರಿ’ ಕುರಿತು ಪತ್ರಕರ್ತ ರವಿ ಹೆಗಡೆ, `ಮಾಧ್ಯಮವೋ? ಉದ್ಯಮವೋ’ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, `ಸುದ್ದಿವಾಹಿನಿಗಳು ಮತ್ತು ಸಮಾಜ’ ಕುರಿತು ಪತ್ರಕರ್ತ ಎ.ಹರಿಪ್ರಸಾದ್ ವಿಷಯ ಮಂಡಿಸುವರು. ಗಾಂಧಿ ವಿಚಾರ ಪರಿಷತ್ತು ಗೌರವ ಉಪಾಧ್ಯಕ್ಷ ಡಾ.ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸು ವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ. ಆರ್.ಶಿವಪ್ಪ, ಗಾಂಧಿ ವಿಚಾರ ಪರಿಷತ್ ಕಾರ್ಯದರ್ಶಿ ಸಂಸ್ಕøತಿ ಸುಬ್ರಹ್ಮಣ್ಯ, ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಉಪಸ್ಥಿತರಿದ್ದರು.

Translate »