ಡಿ.20, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ
ಮೈಸೂರು

ಡಿ.20, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

December 19, 2019

ಮೈಸೂರು, ಡಿ.18-ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ.ಮರೀಗೌಡರ ಹುಟ್ಟುಹಬ್ಬದ ಅಂಗವಾಗಿ ಡಿ.20ರಂದು ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಅಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಟ್ಟದ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ, 8.30ಕ್ಕೆ ಶಕ್ತಿಧಾಮದ ಬಡ ಮಹಿಳೆಯರಿಗೆ ಸೀರೆ ವಿತರಣೆ, 150 ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ಹಾಗೂ ನೋಟ್ ಪುಸ್ತಕ ವಿತರಣೆ, 10 ಗಂಟೆಗೆ ಧನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಿಗೆ ಸಿಹಿ ವಿತರಣೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ರಮಾಬಾಯಿ ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಹಾಗೂ ಸಿಹಿ ವಿತ ರಣೆ, 11 ಗಂಟೆಗೆ ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೋಟ್‍ಬುಕ್, ಸಿಹಿ ವಿತರಣೆ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಮೈಸೂರಿನ ಶ್ರೀರಾಂಪುರದಲ್ಲಿರುವ ಅಶ್ವಿನಿ ಕಲ್ಯಾಣ ಮಂಟಪ ದಲ್ಲಿ ಮೈಸೂರು ತಾಲೂಕು ಅಭಿಮಾನಿಗಳಿಂದ ಕೆ.ಮರೀಗೌಡರಿಗೆ ಸನ್ಮಾನ, ಮಧ್ಯಾಹ್ನ 1 ಗಂಟೆಗೆ ಕಿವುಡ ಮತ್ತು ಅಂಧ ಮಕ್ಕಳಿಗೆ ಊಟದ ವ್ಯವಸ್ಥೆ, ಸಂಜೆ 4 ಗಂಟೆಗೆ ಛಾಯಾ ದೇವಿ ಅನಾಥಾಶ್ರಮದಲ್ಲಿ ಹಣ್ಣು-ಹಂಪಲು ವಿತರಣೆ, 7 ಗಂಟೆಗೆ ಗುರೂರು ಶೀಟಿನ ಮನೆ ಹತ್ತಿರ ರಸಮಂಜರಿ ಕಾರ್ಯಕ್ರಮ ಹಾಗೂ ಕೆ.ಮರೀಗೌಡರಿಗೆ ಸನ್ಮಾನ. ರಾತ್ರಿ 9 ಗಂಟೆಗೆ ಬೀರಿಹುಂಡಿ ಗ್ರಾಮದಲ್ಲಿ ರಾಜೇಂದ್ರ ಪ್ರಸಾದ್, ಜೂನಿಯರ್ ವಿಷ್ಣು ವರ್ಧನ್ ಮತ್ತು ಅವರ ಪತ್ನಿ ಜಯಶ್ರೀ ಅವರಿಂದ `ಚನ್ನಪ್ಪ ಚನ್ನೇಗೌಡ’ ಸಾಮಾಜಿಕ ನಾಟಕ, ಕೆ.ಮರೀಗೌಡ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕೆ.ಮರೀಗೌಡ ಅಭಿಮಾನಿಗಳ ಬಳಗದ ಅಧ್ಯಕ್ಷ ಎಂ. ಬಸವರಾಜು ತಿಳಿಸಿದ್ದಾರೆ.

Translate »