ಶ್ರೀರಾಮಕೃಷ್ಣ ವಿದ್ಯಾಶಾಲೆಯ ಹಳೆ ವಿದ್ಯಾರ್ಥಿ ಪುನೀತ್ ಟಿ. ಘಂಟಿಗೆ ಚಿನ್ನದ ಪದಕ
ಮೈಸೂರು

ಶ್ರೀರಾಮಕೃಷ್ಣ ವಿದ್ಯಾಶಾಲೆಯ ಹಳೆ ವಿದ್ಯಾರ್ಥಿ ಪುನೀತ್ ಟಿ. ಘಂಟಿಗೆ ಚಿನ್ನದ ಪದಕ

December 19, 2019

ಮೈಸೂರು,ಡಿ.18-ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ಅಲ್ಯೂಮ್ನಿ ವಿದ್ಯಾರ್ಥಿ ಪುನೀತ್ ಟಿ. ಘಂಟಿ ಅವ ರನ್ನು ಕೆ. ಸರೋಜಿನಿ ಅವರು ಸ್ಥಾಪಿಸಿರುವ `ಅತ್ಯುತ್ತಮ ಗುಣ’ (ಔಟ್‍ಸ್ಟ್ಯಾಂಡಿಂಗ್ ಕ್ಯಾರೆಕ್ಟರ್)ಕ್ಕೆ ಕೊಡ ಮಾಡುವ ಡಾ.ಆರ್.ಕೆ.ನಾರಾಯಣ ಮತ್ತು ಶ್ರೀಮತಿ ಪಿ.ಕೌಶಲ್ಯ ನಾರಾ ಯಣ ಮೆಮೋರಿಯಲ್ ಗೋಲ್ಡ್ ಮೆಡಲ್‍ಗೆ ಆಯ್ಕೆ ಮಾಡ ಲಾಗಿದೆ. ಡಿ.21ರಂದು ಸಂಜೆ 6.30 ಗಂಟೆಗೆ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಹಾಗೂ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ ಎಸ್.ಎಸ್. ನಾಗಾನಂದ್ ಮತ್ತು ಡೆಕ್ಸ್‍ಟೆರಿಟಿ ಗ್ಲೋಬಲ್‍ನ ಸ್ಥಾಪಕರು ಹಾಗೂ ಸಿಇಓ ಆದ ಶರದ್ ಸಾಗರ್ ಅವರಿಂದ ಗೋಲ್ಡ್ ಮೆಡಲ್ ಸ್ವೀಕರಿಸಲಿದ್ದಾರೆ.

Translate »