ಮೈಸೂರು,ಡಿ.18(ಆರ್‍ಕೆಬಿ)-ಸಾಲಿಗ್ರಾಮದಲ್ಲಿ ದೌರ್ಜನ್ಯ ಎಸಗಿದವರ ಮೇಲೆ ಇದುವರೆಗೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಯಾವೊಂದು ಜಾತಿ ನಿಂದನೆ ಪ್ರಕರಣ ವನ್ನೂ ದಾಖಲಿಸಿಲ್ಲ. ಅಲ್ಲಿನ ಪೊಲೀಸರು ಪಕ್ಷಪಾತಿ ಗಳಂತೆ ವರ್ತಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಗೆ ಭೇಟಿ ನೀಡಿ ಶಾಶ್ವತವಾಗಿ ಅಲ್ಲಿ ದೌರ್ಜನ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಹರಿಹರ ಆನಂದಸ್ವಾಮಿ ಆಗ್ರಹಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಾರಾ ಹೆಸರು ಇರುವವರೆಲ್ಲ ನನ್ನ ಸಹೋದರರಲ್ಲ, ಸಾಲಿಗ್ರಾಮ ಪ್ರಕರಣದಲ್ಲಿ ನನ್ನ ಸಹೋ ದರನ ಪಾತ್ರ ಇಲ್ಲ ಎಂದು ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ. ಆದರೆ ಅವರ ಸಹೋ ದರನ ನೇರ ಪಾತ್ರದಿಂದಲೇ ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯವಾಗಿದೆ ಎಂದು ಆರೋಪಿಸಿದರು.
ಸಾಲಿಗ್ರಾಮದಲ್ಲಿ 40 ವರ್ಷಗಳಿಂದ ದಲಿತ ದೌರ್ಜ ನ್ಯಕ್ಕೆ ಕುಖ್ಯಾತಿ ಪಡೆದುಕೊಂಡಿದೆ. ಯಾವುದೇ ಶಾಂತಿ ಸಭೆ ನಡೆದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಪಕ್ಷಪಾತಿಯಾಗಿ ವರ್ತಿಸಿದ್ದಾರೆ. ಹಿಂದೆ ನಡೆದಿದ್ದ ಶಾಂತಿ ಸಭೆಗಳು ಯಾವುದೂ ಫಲ ನೀಡಿಲ್ಲ ಎಂದು ದೂರಿದರು.
ಶಾಂತಿ ಸಭೆಗಳಿಂದ ಪ್ರಯೋಜನವಿಲ್ಲ. ಈ ದೌರ್ಜನ್ಯಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. ಜಾತ್ಯತೀತ ಪಕ್ಷದಲ್ಲಿರುವ ಶಾಸಕರ ಕುಟುಂಬದಿಂದಲೇ ದೌರ್ಜನ್ಯ ಆಗುತ್ತಿದೆ. ಆದರೆ ದೌರ್ಜನ್ಯವನ್ನು ಆ ಪಕ್ಷದ ಮುಖಂ ಡರು ಖಂಡಿಸಿಲ್ಲ. ಈಗ ಸಾ.ರಾ.ಮಹೇಶ್ ನಾನು ಪರಿಹಾರ ಕೊಡಿಸುತ್ತೇನೆ. ನನ್ನ ಕೈಯಿಂದಲೂ ಪರಿಹಾರ ನೀಡುತ್ತೇನೆ. ಇದರಲ್ಲಿ ನನ್ನ ಸಹೋದರನ ಪಾತ್ರವಿಲ್ಲ ಎಂದು ಹೇಳು ತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಇದರ ಬದಲು ದೌರ್ಜನ್ಯ ನಡೆಯದಂತೆ ತಡೆಯಬೇಕಿತ್ತು. ಇನ್ನು ಮುಂದೆ ದೌರ್ಜನ್ಯ ನಡೆಯದಂತೆ ಕಠಿಣ ಕ್ರಮಕ್ಕೆ ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಕುರಿ ತಂತೆ ಅರಿವು ಮೂಡಿಸಲು ಸಾಲಿಗ್ರಾಮದಿಂದ ಕೆ.ಆರ್. ನಗರದ ತಾಲೂಕು ಕಚೇರಿವರೆಗೆ ಮರಳಿ ಮನೆಗೆ ಬುದ್ಧ ನೆಡೆಗೆ ಜಾಗೃತಿ ಜಾಥಾ ಆಯೋಜಿಸಿ, ಸಾಮರಸ್ಯ ಮೂಡಿ ಸಲಾಗುವುದು. ಇಂಥ ಅರಿವು ಕಾರ್ಯಕ್ರಮ ನಿರಂತರ ವಾಗಿ ನಡೆಸಲಾಗುವುದು ಎಂದು ಹೇಳಿದರು.