ಶಿಕ್ಷಕರ ಸಮಸ್ಯೆ ನಿವಾರಣೆಗೆ ನೂತನ `ಆ್ಯಪ್’
ಮಂಡ್ಯ

ಶಿಕ್ಷಕರ ಸಮಸ್ಯೆ ನಿವಾರಣೆಗೆ ನೂತನ `ಆ್ಯಪ್’

December 19, 2019

20 ದಿನದಲ್ಲಿ ಆ್ಯಪ್ ಬಿಡುಗಡೆಗೆ ಕ್ರಮ: ಶಿಕ್ಷಣ ಸಚಿವ ಸುರೇಶ್‍ಕುಮಾರ್
ಮಂಡ್ಯ, ಡಿ.18(ನಾಗಯ್ಯ)- ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ನೂತನವಾಗಿ ಆ್ಯಪ್ ಜಾರಿಗೆ ತರಲಾಗುತ್ತಿದ್ದು, ಇನ್ನು 20 ದಿನದಲ್ಲಿ ಈ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ತಾಲೂಕಿನ ಸಾತನೂರು ಗ್ರಾಮದ ಅಚೀ ವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಬುಧವಾರ ರಾಜ್ಯಶಾಸ್ತ್ರ ಅಕಾಡೆಮಿ ಯಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ಸಮಾವೇಶ, ನಿವೃತ್ತ ಶಿಕ್ಷಕರಿಗೆ ಅಭಿನಂ ದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕರು ಮತ್ತು ಉಪನ್ಯಾಸಕರು ಇನ್ನು ಮುಂದೆ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಬಿಟ್ಟು ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಅಲೆಯಬೇಕಾ ಗಿಲ್ಲ. ಈ ಸಮಸ್ಯೆಯನ್ನು ತಪ್ಪಿಸುವುದಕ್ಕಾಗಿಯೇ ನೂತನ ಆ್ಯಪ್ ರೂಪಿಸಲಾಗುತ್ತಿದೆ. ಇದರ ಮೂಲಕವೇ ಕುಳಿತಲ್ಲೇ ತಮ್ಮ ಸಮಸ್ಯೆ ಯನ್ನು ನಮ್ಮ ಗಮನಕ್ಕೆ ತರಬಹುದು. ಇದ ರಿಂದ ತಕ್ಷಣವೇ ನಿಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಚುನಾವಣಾ ಕೆಲಸ ಗಳಿಗೆ ಶಿಕ್ಷಕರು, ಉಪನ್ಯಾಸಕರನ್ನು ಬಳಸಿ ಕೊಳ್ಳಲಾಗುತ್ತಿದೆ. ಇದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಇದು ನನ್ನ ಗಮನಕ್ಕೂ ಬಂದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರನ್ನು ಶಾಲಾ ಪಾಠ-ಪ್ರವ ಚನದ ಕೆಲಸಗಳನ್ನು ಹೊರತುಪಡಿಸಿ ಚುನಾ ವಣಾ ಕರ್ತವ್ಯಗಳಿಗೆ ನಿಯೋಜಿಸಿಕೊಳ್ಳ ಬಾರದು ಎಂದು ಕೋರಿ ಚುನಾವಣಾ ಆಯೋ ಗಕ್ಕೆ ಮನವಿ ಮಾಡಿದ್ದೇನೆ. ಈ ಕುರಿತು ಪತ್ರ ವನ್ನೂ ಬರೆಯಲಾಗಿದೆ ಎಂದು ತಿಳಿಸಿದರು.

ಶಿಕ್ಷಕರ ವರ್ಗಾವಣೆ ಸಮಸ್ಯೆ ನಿವಾರಣೆ ಗಾಗಿ ಹೊಸ ಕಾಯ್ದೆ ಜಾರಿಗೊಳಿಸಲು ಚಿಂತಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಹೇಳಿದರು.

ತಾವು ಅಧಿಕಾರವಹಿಸಿಕೊಳ್ಳುತ್ತಿದ್ದಂ ತೆಯೇ ವರ್ಗಾವಣೆ ಸಮಸ್ಯೆ ಎದುರಾ ಯಿತು. ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷೆಯಾಗಿದೆ. ಇಂತಹ ಕ್ರಮಗಳಿಂದ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇಷ್ಟಪಟ್ಟು ಕೆಲಸ ಮಾಡುವ ಸ್ಥಳಗಳಿಗೆ ಶಿಕ್ಷಕರ ವರ್ಗಾವಣೆಯಾಗಬೇಕು. ಅದಕ್ಕಾಗಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿ ಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಜೈಲಲ್ಲಿ ರಾಜಕೀಯ ಪಾಠ ಕಲಿತೆ: ನಾನು ಓದಿದ್ದು ಕಾನೂನು ಶಿಕ್ಷಣವಾದರೂ ಕಾಲೇಜಿ ನಲ್ಲಿ ರಾಜಕೀಯ ವಿಜ್ಞಾನ ಕಲಿಯಲಿಲ್ಲ. ಆದರೆ ಜೈಲಿನಲ್ಲಿ ನಾನು ರಾಜಕೀಯ ಪಾಠ ವನ್ನು ಕಲಿತೆ. ಎಲ್.ಕೆ.ಅಡ್ವಾಣಿ, ರಾಮಕೃಷ್ಣ ಹೆಗಡೆ, ಹೆಚ್.ಡಿ.ದೇವೇಗೌಡ, ಜೆ.ಹೆಚ್. ಪಟೇಲ್ ಅವರನ್ನೊಳಗೊಂಡ ದಿಗ್ಗಜರು ನನಗೆ ರಾಜಕೀಯ ಗುರುಗಳು ಎಂದು ಇದೇ ವೇಳೆ ಸ್ಮರಿಸಿಕೊಂಡರು.

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಡಾ.ಸಿದ್ದರಾಮಯ್ಯ, ಉಪನ್ಯಾಸಕರಾದ ನಾಗೇಶ್, ಡಾ.ಸುಧಾಕರ್, ನಾಗರಾಜು ಕೆ.ಸಿ.ಮಹನುಂತಯ್ಯ, ದೊಡ್ಡಬೋರಯ್ಯ, ಜಿ.ಆರ್.ಗೀತಾ ಇದ್ದರು.

600 ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿಯಿ ರುವ ಪ್ರಾಂಶುಪಾಲರ ಹುದ್ದೆಗಳಿಗೆ ಶೀಘ್ರ ದಲ್ಲಿಯೇ ಭರ್ತಿ ಮಾಡಲಾಗುವುದು. ಪದವಿಪೂರ್ವ ಕಾಲೇಜು ‘ಡಿ’ಗ್ರೂಪ್ ಹುದ್ದೆಗಳ ನೇಮಕಾತಿ ಪ್ರಸ್ತಾವವನ್ನೂ ಈ ಬಾರಿಯ ಬಜೆಟ್‍ನಲ್ಲಿ ಸೇರಿಸ ಲಾಗುವುದು. ಬಹುತೇಕ ಶಾಲಾ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು.

-ಎಸ್.ಸುರೇಶ್‍ಕುಮಾರ್, ಸಚಿವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ.

Translate »