ದೂರ ಶಿಕ್ಷಣ ಮುಕ್ತ ವಿವಿಗೆ ಮಾತ್ರ ಸೀಮಿತವಾಗಿರಲಿ
ಮೈಸೂರು

ದೂರ ಶಿಕ್ಷಣ ಮುಕ್ತ ವಿವಿಗೆ ಮಾತ್ರ ಸೀಮಿತವಾಗಿರಲಿ

December 19, 2019

ಮೈಸೂರು,ಡಿ.18(ಆರ್‍ಕೆ)-ದೂರ ಶಿಕ್ಷಣ ವ್ಯವಸ್ಥೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರಲಿ ಎಂದು ಉನ್ನತ ಶಿಕ್ಷಣ ಪರಿಷತ್(Higher Education Council) ಸಾಮಾನ್ಯ ಸಭೆಯು ನಿರ್ಣಯ ಕೈಗೊಂಡಿದೆ.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು.

ದೂರ ಶಿಕ್ಷಣ ನೀಡಲು ಈಗಾಗಲೇ ಮೈಸೂರು, ಬೆಂಗಳೂರು, ಮಂಗಳೂರು, ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ಅನು ಮತಿ ನೀಡಿರುವುದರಿಂದ ಕಾಲೇಜುಗಳಲ್ಲಿ ದಾಖಲಾಗಿ ಶಿಕ್ಷಣ ಪಡೆಯಲು ಸಾಧ್ಯವಾಗದೆ ಉನ್ನತ ಶಿಕ್ಷಣ ದಿಂದ ವಂಚಿತರಾಗುವವರಿಗೆ ಅನುಕೂಲ ಕಲ್ಪಿಸ ಲೆಂದೇ ಇರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಧಕ್ಕೆಯಾಗುತ್ತದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ವಾದಿಸಿದರು.

ರಾಜ್ಯದಾದ್ಯಂತ ದೂರದ ಪ್ರದೇಶಗಳಲ್ಲಿರುವವರು, ವೃತ್ತಿನಿರತರು, ಉದ್ಯೋಗಿಗಳು, ವಯಸ್ಸಾಗಿರುವವರಿಗೆ ಉನ್ನತ ಶಿಕ್ಷಣ, ನೀಡಲೆಂದೇ ಇರುವ ಮುಕ್ತ ವಿಶ್ವವಿದ್ಯಾ ನಿಲಯವು ದೂರ ಶಿಕ್ಷಣ (ಆisಣಚಿಟಿಛಿe ಇಜuಛಿಚಿಣioಟಿ) ನೀಡುತ್ತಾ ಬಂದಿದ್ದು, ಅದಕ್ಕಾಗಿ ಬೋಧಕ, ಬೋಧ ಕೇತರ ಸಿಬ್ಬಂದಿ, ಸಿಲಬಸ್, ನೋಟ್, ಕಟ್ಟಡ, ಪರೀಕ್ಷಾ ಪರಿಕರ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ, ಈ ಹಂತದಲ್ಲಿ ಇನ್ನಿತರ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣ ನೀಡಿದರೆ ತೀವ್ರ ಸ್ಪರ್ಧೆ ಏರ್ಪಡಲಿದೆ ಎಂದೂ ಪ್ರೊ. ವಿದ್ಯಾಶಂಕರ್ ಸಭೆಯಲ್ಲಿ ಪ್ರತಿಪಾದಿಸಿದರು.

ನಮ್ಮ ವ್ಯಾಪ್ತಿಗಳಲ್ಲಿ ದೂರ ಶಿಕ್ಷಣ ನೀಡಲು ನಿಯಮ ದಡಿ ಅವಕಾಶವಿದೆಯಲ್ಲದೆ, ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ದೂರ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಕುಲಪತಿಗಳು ತಿಳಿಸಿ ದರು. ಕಡೆಗೆ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಆರಂಭ ವಾಗಿರುವುದರಿಂದ ಹಾಗೂ ಅಗತ್ಯ ಮೂಲ ವ್ಯವಸ್ಥೆ ಮಾಡಿಕೊಂಡು ಉನ್ನತ ಶಿಕ್ಷಣ ನೀಡುತ್ತಿರುವ ಮೈಸೂ ರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ದೂರ ಶಿಕ್ಷಣಕ್ಕೆ ಅಭ್ಯರ್ಥಿಗಳಿಗೆ ಪ್ರವೇಶಾತಿ ನೀಡಬೇಕು ಎಂದು ಸಭೆ ನಿರ್ಧರಿಸಿ ಅಧ್ಯಕ್ಷತೆ ವಹಿ ಸಿದ್ದ ಡಾ.ಅಶ್ವತ್ಥನಾರಾಯಣ ಅವರೂ ಪ್ರಕಟಿಸಿದರು.

ಮೈಸೂರು, ಬೆಂಗಳೂರು, ಮಂಗಳೂರು, ಕುವೆಂಪು, ಹಂಪಿ ಸೇರಿದಂತೆ ರಾಜ್ಯದ 24 ವಿಶ್ವವಿದ್ಯಾನಿಲಯ ಗಳ ಕುಲಪತಿಗಳು, ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Translate »