ವಿಶೇಷಚೇತನರಿಂದಲೂ ಸಮಾಜಕ್ಕೆ ಕೊಡುಗೆ
ಮೈಸೂರು

ವಿಶೇಷಚೇತನರಿಂದಲೂ ಸಮಾಜಕ್ಕೆ ಕೊಡುಗೆ

December 19, 2019

ಮೈಸೂರು, ಡಿ.18(ಎಂಕೆ)-  ಅಂಗ ವೈಕಲ್ಯ ಇದ್ದವರಿಗೆ ಸ್ವಲ್ಪ ಸಹಕಾರ ಮತ್ತು ಪ್ರೋತ್ಸಾಹ ನೀಡಿದರೆ, ಅವರೂ ಎಲ್ಲ ರಂತೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾರೆ  ಎಂದು ಹಿರಿಯ ನಾಗರಿಕರು ಮತ್ತು ವಿಶೇಷಚೇತನ ಮಕ್ಕಳ ಸಬಲೀಕರಣ ಇಲಾಖೆ ನಿರ್ದೇಶಕಿ ಕೆ.ಲೀಲಾವತಿ ಹೇಳಿದರು.

ನಗರದ ಬೋಗಾದಿ ಮುಖ್ಯರಸ್ತೆಯಲ್ಲಿ ರುವ ‘ಆಯಿಷ್’ನ ಪಂಚವಟಿ ಸಭಾಂ ಗಣದಲ್ಲಿ ವಿಶೇಷ ಶಿಕ್ಷಣ ಮತ್ತು ಕ್ಲಿನಿಕಲ್ ಸೇವಾ ವಿಭಾಗದ ವತಿಯಿಂದ ಆಯೋ ಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿಶೇಷ ಚೇತನರು ತಮ್ಮಲ್ಲಿನ ನ್ಯೂನತೆಯನ್ನು ಮೀರಿ ನಡೆದರೆ, ಇತರರಂತೆ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.

ತಂದೆ-ತಾಯಂದಿರು ತಮ್ಮ ಮಗುವಿನ ನ್ಯೂನತೆಯನ್ನು ಸಾಧ್ಯವಾದಷ್ಟ್ಟು ಬೇಗನೆ ಅರಿತು ಚಿಕಿತ್ಸೆ ಕೊಡಿಸಬೇಕು. ಬಳಿಕ ಅವರೇ ತಮ್ಮಲ್ಲಿನ ಕೌಶಲ್ಯದಿಂದ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ವಿಕಲಚೇತನ ರಿಗೆ ಸಹಕಾರಕ್ಕಿಂತ ಪ್ರೋತ್ಸಾಹದ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಅಂಗವೈಕಲ್ಯ ನಡುವೆ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಎಸ್.ಎಂ.ವೇದಾಮೂರ್ತಿ, ಕೆ.ಆರ್. ಶ್ರೇಯಸ್, ಡಿ.ಹೆಚ್.ಪ್ರಶಾಂತ್ ಹಾಗೂ ಆಯಿಸ್‍ನಿಂದ ಚಿಕಿತ್ಸೆ ಪಡೆದು ಗುಣ ಮುಖರಾದ ವಸಂತ ಲಕ್ಷ್ಮಿ ಅವರನ್ನು ಸನ್ಮಾನಿಸಿದರೆ, ‘ಅತ್ಯುತ್ತಮ ತಾಯಿ ಪ್ರಶಸ್ತಿ’ಯನ್ನು ಡಾ.ಖೈರೂ ನಿಶಾ ಅವರಿಗೆ ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಯಿಸ್‍ನ ಕ್ಲಿನಿಕಲ್ ಸೇವಾ ವಿಭಾಗದ ಮುಖ್ಯಸ್ಥೆ ಸಂಗೀತಾ ಮಹೇಶ್, ವಿಶೇಷ ಸೇವಾ ವಿಭಾಗದ ಮುಖ್ಯಸ್ಥೆ ಡಾ.ಪಿ.ಮಂಜುಳ ಉಪಸ್ಥಿತರಿದ್ದರು.

 

Translate »