ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಹೊಣೆ
ಮೈಸೂರು

ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಹೊಣೆ

December 21, 2019

ಮೈಸೂರು,ಡಿ.20(ಆರ್‍ಕೆ)- ಮಂಗ ಳೂರಿನಲ್ಲಿ ಗುರುವಾರ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ಸಂಸದ ಪ್ರತಾಪ್‍ಸಿಂಹ ಅವರು ಆರೋಪಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಾದ್ಯಂತ ಸೆಕ್ಷನ್ 144 ರೀತ್ಯಾ ನಿಷೇ ಧಾಜ್ಞೆ ಜಾರಿಯಲ್ಲಿದ್ದರೂ ಪೌರತ್ವ ತಿದ್ದು ಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ನೇರ ಹೊಣೆ ಎಂದರು.

ಮಾಜಿ ಸಚಿವ ಯು.ಟಿ.ಖಾದರ್ ಅವರು ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿ ಸಿದರೆ ರಾಜ್ಯ ಹೊತ್ತಿ ಉರಿಯುತ್ತದೆ’ ಎಂದು ಹೇಳಿಕೆ ನೀಡಿದ್ದೇ ಮಂಗಳೂರಲ್ಲಿ ಗಲಭೆ ಉಂಟಾಗಿ ಇಬ್ಬರು ಬಲಿಯಾಗಿ, ಹಲವರು ಗಾಯಗೊಂಡು, ಸಾರ್ವಜನಿಕ ಆಸ್ತಿಗೆ ಹಾನಿ ಯಾಗಲು ಕಾರಣ. ಗಲಭೆಗೆ ಪ್ರಚೋದನೆ ನೀಡಿದ ಖಾದರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾ ಯಿಸಿದರು. ಮೈಸೂರಿನಲ್ಲೂ ಕೆಲ ಸಂಘಟನೆ ಗಳು ಪೌರತ್ವ ತಿದ್ದುಪಡಿ ಕಾಯ್ದೆ ಖಂಡಿಸಿ ನಿತ್ಯ ಪ್ರತಿಭಟನೆ ನಡೆಸುತ್ತಿರುವುದು ಖಂಡ ನೀಯ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುಂಪು ಸೇರುವುದು, ಮೆರವಣಿಗೆ ನಡೆಸುತ್ತಿರು ವುದಕ್ಕೂ ಕೆಲವರ ಪ್ರೇರಣೆ ಕಾರಣ. ಕಾನೂನು ಮೀರಿ ಪ್ರತಿಭಟನೆ ನಡೆಸುವ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡು ವವರು ಯಾರೇ ಆಗಲಿ ಅಂತಹರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ಎಂದು ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿದರು.

ಸಾರ್ವಜನಿಕರ ರಕ್ಷಣೆ ದೃಷ್ಟಿಯಿಂದ ರಾಜ್ಯಾದ್ಯಂತ 3 ದಿನ ಸೆಕ್ಷನ್ 144 ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾರೂ ಪ್ರತಿಭಟನೆ ಹೆಸರಲ್ಲಿ ಶಾಂತಿ ಕದಡಬಾರದು ಎಂದೂ ಮನವಿ ಮಾಡಿದರು.

ಹೊರದೇಶದಲ್ಲಿ ದೌರ್ಜನ್ಯಕ್ಕೊಳಗಾಗಿ ಆಶ್ರಯ ಅರಸಿ ಬಂದ ಈ ಆರೂ ಧರ್ಮೀ ಯರಿಗೆ ನಮ್ಮ ದೇಶದಲ್ಲಿ ಆಶ್ರಯ ಕೊಟ್ಟು ಪೌರತ್ವ ನೀಡುವುದು ತಪ್ಪೇ? ಇಲ್ಲಿ ತುಳಿ ಯುವವರು ಹಾಗೂ ತುಳಿತಕ್ಕೊಳಗಾಗು ವವರ ನಡುವಿನ ವ್ಯತ್ಯಾಸವನ್ನು ಸರ್ಕಾರ ಗಮನದಲ್ಲಿರಿಸಿಯೇ ಈ ನಿರ್ಧಾರ ಮಾಡಿ ದೆಯೇ ಹೊರತು, ಯಾವ ಸಮುದಾಯ ದವರನ್ನೂ ಹೊರಗೆ ಕಳುಹಿಸುವುದಕ್ಕಲ್ಲ ಎಂದೂ ಸ್ಪಷ್ಟಪಡಿಸಿದರು. ಆದರೆ ಕಾಂಗ್ರೆಸ್ ಧರ್ಮದ ಹೆಸರಲ್ಲಿ ಶಾಂತಿ ಕದಡಿ ದೇಶ ಒಡೆಯಲೆತ್ನಿಸುತ್ತಿದೆ. ಪ್ರಧಾನಿ ಮೋದಿ ಅವರ ಒಳ್ಳೇನಡೆಯನ್ನು ಸಹಿಸಲಾರದೆ ಕಾಂಗ್ರೆಸ್ ಗಲಭೆ ಎಬ್ಬಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದೆಲ್ಲೆಡೆ ಗಲಭೆ ಎಬ್ಬಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತಂದು ಹಿಂಬಾಗಿ ಲಿನಿಂದ ಅಧಿಕಾರ ಹಿಡಿಯಲು ಕಾಂಗ್ರೆಸ್ ಮಾಡುತ್ತಿರುವ ಹುನ್ನಾರವಿದು. ಸಿಎಎಗೂ, ಪ್ರತಿಭಟನೆ ಮಾಡುತ್ತಿರುವವರಿಗೂ ಯಾವುದೇ ಸಂಬಂಧವಿಲ್ಲ. ಪೈಶಾಚಿಕ ಮನಸ್ಥಿತಿಯುಳ್ಳವರು ಈ ಕೃತ್ಯವೆಸಗುತ್ತಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಮೈ.ವಿ.ರವಿಶಂಕರ್, ಗಿರಿಧರ್, ಹೇಮಂತ್ ಕುಮಾರ್‍ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

Translate »