ಮಡಿಕೇರಿ,ಮಾ.8(ಪ್ರಸಾದ್)- ಟಿಪ್ಪು ಜಯಂತಿ ವಿರೋಧಿಸಿ ನಡೆದಂತಹ ಪ್ರತಿಭಟನೆಗಳು ಸೇರಿ ದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಿವಿಧ ಒಟ್ಟು 46 ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆಯಲು ಅನುಮತಿ ನೀಡಿದೆ. ಈ 46 ಕೇಸುಗಳ ಪೈಕಿ 18 ಪ್ರಕರಣಗಳು ಕೊಡಗು ಜಿಲ್ಲೆಗೇ ಸಂಬಂಧಿಸಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣ ಗಳು ಟಿಪ್ಪು ಜಯಂತಿಯ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕೇಸು ಗಳಾಗಿದ್ದು, ಇದೀಗ ಬಿಜೆಪಿ ಸರಕಾರ ಎರಡೂ ಕೋಮುಗಳ ಕೇಸುಗಳನ್ನು ಹಿಂಪಡೆಯುತ್ತಿದೆ. ರಾಜ್ಯದಲ್ಲಿ…
ಏಳು ಮಂದಿ ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ
March 9, 2020ನವದೆಹಲಿ: ವಿಶ್ವ ಮಹಿಳಾ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಖಾತೆ ಗಳನ್ನು ಮಹಿಳೆಯ ರಿಗೆ ಬಿಟ್ಟುಕೊಟ್ಟಿದ್ದಾರೆ. 7 ಮಹಿಳಾ ಸಾಧಕರು ತಮ್ಮ ಸ್ಫೂರ್ತಿ ದಾಯಕ ಕಥೆಗಳನ್ನು ಹಂಚಿಕೊಳ್ಳಲು ನನ್ನ ಟ್ವಿಟರ್ ಅಕೌಂಟ್ ಅನ್ನು ಬಳಸುತ್ತಾರೆ ಎಂದು ಅವರು ಬಹುದಿನಗಳ ಹಿಂದೆಯೇ ಹೇಳಿಕೊಂಡಿದ್ದರು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 7 ಮಹಿಳಾ ಸಾಧಕಿಯರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಮತ್ತು ಜನರೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂವಹನ ನಡೆಸಲಿ ದ್ದಾರೆ ಎಂದು ಅವರು ಘೋಷಿಸಿದ್ದರು….
ಲಂಡನ್‍ಗೆ ಹಾರಲು ಸಜ್ಜಾಗಿದ್ದ ಯೆಸ್ ಬ್ಯಾಂಕ್ ಸಂಸ್ಥಾಪಕನ ಪುತ್ರಿಗೆ ತಡೆ: ಮತ್ತಷ್ಟು ವಂಚನೆ ಬಯಲು
March 9, 2020ನವದೆಹಲಿ: ಯೆಸ್ ಬ್ಯಾಂಕ್ ಮುಳುಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿರುವ ಜಾರಿ ನಿರ್ದೇಶನಾಲಯಕ್ಕೆ ತನಿಖೆಯ ವೇಳೆ ಬೆಚ್ಚಿಬೀಳುವ ವಿಚಾರಗಳು ಬಯಲಾಗುತ್ತಿವೆ. ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಡ್ರಿಲ್ ನಡೆಸುತ್ತಿರುವ ಇಡಿ, ಬಗೆದಷ್ಟು ಬಯಲಾಗುತ್ತಿರುವ ಕರ್ಮಕಾಂಡಗಳನ್ನು ಕಂಡು ಶಾಕ್ ಆಗಿದೆ. ಹೀಗಾಗಿಯೇ ಇಂದು ನಸುಕಿನ ವೇಳೆ ರಾಣಾ ಕಪೂರ್ ಅವರನ್ನು ಬಂಧಿಸಿದ ಇಡಿ, ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ತಮ್ಮ…
ಕೊರೊನಾ ವೈರಸ್ ಭೀತಿ: ಮೈಸೂರು ಭಾಗದ ವಾಣಿಜ್ಯ ವಹಿವಾಟಿಗೆ ಭಾರೀ ಪೆಟ್ಟು
March 9, 2020ಮೈಸೂರು, ಮಾ. 8(ಆರ್‍ಕೆ)- ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ಪ್ರವಾಸೋದ್ಯಮಕ್ಕೆ ಒಂದು ರೀತಿ ವಸಂತ ಕಾಲ. ಪ್ರವಾಸಿಗರು ಹೆಚ್ಚು ಹೆಚ್ಚು ಪ್ರವಾಸ ಕಾರ್ಯಕ್ರಮ ಆಯೋಜಿಸಿ ಕೊಳ್ಳುವುದು ಇದೇ ಸಮಯದಲ್ಲಿ. ಆದರೆ, ಈ ಬಾರಿ ಎಲ್ಲೆಡೆ ಕೊರೊನಾ ವೈರಸ್ ವದಂತಿ ಹಬ್ಬಿರುವುದರಿಂದ ಪ್ರವಾಸೋದ್ಯಮ, ಹೋಟೆಲ್, ಟೂರ್ಸ್ ಅಂಡ್ ಟ್ರಾವೆಲ್ಸ್, ಕೈಗಾರಿ ಕೋದ್ಯಮದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಅದರ ಜೊತೆಗೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಮಾಂಸಾಹಾರಿ ಪದಾರ್ಥಗಳ ಮಾರಾಟವೂ ಕುಂಠಿತವಾಗಿದೆ. ಇನ್ನೇನು ಮಕ್ಕಳಿಗೆ ಪರೀಕ್ಷೆಗಳು ಮುಗಿದು…
ಗಣಪತಿ ಆಶ್ರಮದ ಶುಕವನ, ಬೋನ್ಸಾಯ್ ಗಾರ್ಡನ್, ಮ್ಯೂಸಿಯಂ ಬಂದ್
March 9, 2020ಮೈಸೂರು, ಮಾ.8(ಎಸ್‍ಬಿಡಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕೆಲ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆಶ್ರಮದ ಶುಕವನ ಪಕ್ಷಿಧಾಮ, ಕಿಷ್ಕಿಂಧ ಮೂಲಿಕಾ ಬೋನ್ಸಾಯ್ ಗಾರ್ಡನ್ ಹಾಗೂ ವಿಶ್ವಂ ವಸ್ತು ಸಂಗ್ರಹಾಲಯಕ್ಕೆ ಸೋಮವಾರದಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸ ಲಾಗಿದೆ. ಈ ಸಂಬಂಧ ಆಶ್ರಮದ ವೆಬ್‍ಸೈಟ್‍ನಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಪ್ರಕಟಿಸಲಾಗಿದೆ. `ಕೊರೊನಾದಿಂದ ಉದ್ಭವಿಸುತ್ತಿ ರುವ ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಶುಕವನ, ಬೋನ್ಸಾಯ್ ವನ ಹಾಗೂ ವಿಶ್ವ ಮ್ಯೂಸಿಯಂಗಳನ್ನು…
ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ತುಂಡಾದ ವ್ಯಕ್ತಿಯ ಕಾಲು
March 9, 2020ಬೆಂಗಳೂರು, ಮಾ.8- ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದೆ. ನಗರದ ಆಡು ಗೋಡಿಯ ಬಳಿ ಈ ಘಟನೆ ಸಂಭವಿ ಸಿದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯೊಬ್ಬರ ಎಡಗಾಲು ತುಂಡಾಗಿದೆ. ಕಸದ ರಾಶಿಯ ನಡುವೆ ಈ ಸ್ಫೋಟ ಸಂಭವಿಸಿರುವುದು ಅಚ್ಚರಿ, ಆತಂಕ ಮೂಡಿಸಿದೆ. ಗಾಯಾಳು ವನ್ನು 50 ವರ್ಷದ ನರಸಿಂಹಯ್ಯ ಎಂದು ಗುರುತಿಸಲಾಗಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಗ್ರಾನೈಟ್ ಕತ್ತರಿಸುವ ಕೆಮಿಕಲ್ ಎಸೆದಿದ್ದು ಕೆಮಿಕಲ್ ರಿಯಾಕ್ಷನ್‍ನ ಪರಿಣಾಮ ಈ…
ಪ್ರೇಕ್ಷಕರ ಮನಗೆದ್ದ ಹೇಮರೆಡ್ಡಿ ಮಲ್ಲಮ್ಮ ನೃತ್ಯರೂಪಕ
March 9, 2020ಮೈಸೂರು, ಮಾ.8(ಎಂಕೆ)- ಮೈಸೂ ರಿನ ಕಲಾಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದಿಂದ ಭಾನು ವಾರ ಏರ್ಪಡಿಸಿದ್ದ ‘ಮಹಾಸಾಧ್ವಿ ಹೇಮ ರೆಡ್ಡಿ ಮಲ್ಲಮ್ಮ ನೃತ್ಯರೂಪಕ’ ಅತ್ಯಾಕರ್ಷಕ ಸಂಗೀತ ಸಂಯೋಜನೆ, ಭರತನಾಟ್ಯ ಮತ್ತು ಭಾವಾಭಿನಯದೊಂದಿಗೆ ಕಲಾ ಭಿಮಾನಿಗಳ ಮನಗೆದ್ದಿತು. ವಿದುಷಿ ಜ್ಯೋತಿ ಶಂಕರ್ ಪರಿಕಲ್ಪನೆ ಮತ್ತು ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇ ಶಕಿ ವಿದುಷಿ ಕೃಪಾ ಪಡ್ಕೆ ನೃತ್ಯ ನಿರ್ದೇಶನ ದಲ್ಲಿ ನೃತ್ಯ ರೂಪಕ ಮೂಡಿಬಂದಿತು. ನಾಗರೆಡ್ಡಿ-ಗೌರಮ್ಮ ದಂಪತಿಯ ಮಗ ಳಾಗಿ ಮಲ್ಲಮ್ಮ ಜನನ, ಶಿವನ ಆರಾಧನೆ,…
ಶಾಸಕ ಎಲ್.ನಾಗೇಂದ್ರರಿಗೆ ಪಿತೃವಿಯೋಗ
March 9, 2020ಉಪಮುಖ್ಯಮಂತ್ರಿ ಅಶ್ವಥ್‍ನಾರಾಯಣ ಸೇರಿ ಹಲವು ಗಣ್ಯರಿಂದ ಯಜಮಾನ್ ಲಿಂಗಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಮೈಸೂರು,ಮಾ.8(ಆರ್‍ಕೆ)-ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ತಂದೆ ಯಜಮಾನ್ ಲಿಂಗಪ್ಪ (96) ಅವರು ಕೆ.ಜಿ. ಕೊಪ್ಪಲಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಿಂಗಪ್ಪ ಅವರು ಮುಂಜಾನೆ ಸುಮಾರು 4.20 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ಪುಟ್ಟಲಿಂಗಮ್ಮ (ಕರಗಮ್ಮ), ಪುತ್ರರಾದ ಶಾಸಕ ಎಲ್.ನಾಗೇಂದ್ರ, ಎಲ್.ಮಾದಪ್ಪ, ಎಲ್.ಚೌಡಪ್ಪ, ಎಲ್.ಮಂಜುನಾಥ,…
ವಿದ್ಯಾಭವನದಲ್ಲಿ ಆರ್ಟಿಕ್ಯುಲೇಟ್ ನೃತ್ಯೋತ್ಸವ
March 9, 2020ಮೈಸೂರು, ಮಾ.8- ಮೈಸೂರಿನ ಭಾರತೀಯ ವಿದ್ಯಾಭವನದಲ್ಲಿ ಇತ್ತೀಚೆಗೆ ನಡೆದ ಆರ್ಟಿಕ್ಯುಲೇಟ್ ನೃತ್ಯೋ ತ್ಸವದ 50ನೇ ಸರಣಿ ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ಕಥಕ್ ನೃತ್ಯ ವೈಭವ ಮೇಳೈಸಿತ್ತು. ಭವನದ ತಾತಾ ಚಾರಿ ಸಭಾಂಗಣದಲ್ಲಿ ಇತ್ತೀಚೆಗೆ ವಿದ್ವಾನ್ ಮೈಸೂರು ಬಿ.ನಾಗ ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜಾಶ್ರೀ ಹಾಗೂ ವೈದೇಹಿ 4 ನೃತ್ಯ ವಿಭಾಗ ಗಳಲ್ಲಿ ಪ್ರದರ್ಶನ ನೀಡಿದರು. ಕಥಕ್ ಶೈಲಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಸಾಮರಸ್ಯ ಅನಾವರಣಗೊಳಿಸಿದರು. ಶಕುಂತಲಾ ಪ್ರಭಾತ್ ಹಾಗೂ ವಿದ್ವಾನ್ ಪಾಶ್ರ್ವನಾಥ್ ಅವರ…
ಮೈಸೂರಲ್ಲಿ ಮತ್ತೆ ಸರಗಳ್ಳರ ಕಾಟ
March 9, 2020ಮೈಸೂರು, ಮಾ.8(ಎಂಕೆ)- ಬೈಕ್ ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗರಿಸಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿ ನಡೆ ದಿದೆ. ಇಲ್ಲಿನ ನಿವಾಸಿ ಲೀಲಾವತಿ ಚಿನ್ನದ ಸರ ಕಳೆದುಕೊಂಡವರು. ಲೀಲಾವತಿ ಅವರು ಶನಿವಾರ ರಾತ್ರಿ ಮೊಸರು ತರ ಲೆಂದು ಜಯಲಕ್ಷ್ಮಿಪುರಂನ ರಾಘವೇಂದ್ರ ಮಠದ ಹಿಂಭಾಗದ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಲೀಲಾವತಿ ಅವರ ಕುತ್ತಿಗೆಯಲ್ಲಿದ್ದ 1.23 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ…