ಕೊರೊನಾ ವೈರಸ್ ಭೀತಿ: ಮೈಸೂರು ಭಾಗದ ವಾಣಿಜ್ಯ ವಹಿವಾಟಿಗೆ ಭಾರೀ ಪೆಟ್ಟು
ಮೈಸೂರು

ಕೊರೊನಾ ವೈರಸ್ ಭೀತಿ: ಮೈಸೂರು ಭಾಗದ ವಾಣಿಜ್ಯ ವಹಿವಾಟಿಗೆ ಭಾರೀ ಪೆಟ್ಟು

March 9, 2020

ಮೈಸೂರು, ಮಾ. 8(ಆರ್‍ಕೆ)- ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ಪ್ರವಾಸೋದ್ಯಮಕ್ಕೆ ಒಂದು ರೀತಿ ವಸಂತ ಕಾಲ. ಪ್ರವಾಸಿಗರು ಹೆಚ್ಚು ಹೆಚ್ಚು ಪ್ರವಾಸ ಕಾರ್ಯಕ್ರಮ ಆಯೋಜಿಸಿ ಕೊಳ್ಳುವುದು ಇದೇ ಸಮಯದಲ್ಲಿ.

ಆದರೆ, ಈ ಬಾರಿ ಎಲ್ಲೆಡೆ ಕೊರೊನಾ ವೈರಸ್ ವದಂತಿ ಹಬ್ಬಿರುವುದರಿಂದ ಪ್ರವಾಸೋದ್ಯಮ, ಹೋಟೆಲ್, ಟೂರ್ಸ್ ಅಂಡ್ ಟ್ರಾವೆಲ್ಸ್, ಕೈಗಾರಿ ಕೋದ್ಯಮದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಅದರ ಜೊತೆಗೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಮಾಂಸಾಹಾರಿ ಪದಾರ್ಥಗಳ ಮಾರಾಟವೂ ಕುಂಠಿತವಾಗಿದೆ.

ಇನ್ನೇನು ಮಕ್ಕಳಿಗೆ ಪರೀಕ್ಷೆಗಳು ಮುಗಿದು ಜನರು ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಯೋಜನೆ ಹಾಕಿ ಕೊಳ್ಳಬೇಕಿತ್ತು. ಕಳೆದ ಸುಮಾರು 20 ದಿನಗಳಿಂದ ಕೊರೊನಾ ವೈರಸ್ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿರುವು ದರಿಂದ ತೀವ್ರ ಆತಂಕಕ್ಕೊಳಗಾದ ನಾಗರಿಕರು ಎಲ್ಲೂ ಹೋಗಲು ಭಯಪಡುತ್ತಿದ್ದಾರೆ. ಪರಿಣಾಮ ಮೈಸೂರಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆಯಲ್ಲದೆ, ಇಲ್ಲಿಂದ ಹೊರಗೆ ಹೋಗುವವರೂ ಪ್ರವಾಸ ರದ್ದುಪಡಿಸಿದ್ದಾರೆ. ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಜಗನ್ಮೋಹನ ಅರಮನೆ, ಚಾಮುಂಡಿಬೆಟ್ಟ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.

ಮೈಸೂರಿನ ಹೋಟೆಲ್‍ಗಳು, ಟೂರ್ಸ್ ಅಂಡ್ ಟ್ರಾವೆಲ್, ಏಜೆನ್ಸಿಗಳು, ಪ್ರವಾಸಿ ವಿಸಾ ನೀಡುವ ಸಂಸ್ಥೆಗಳಲ್ಲಿ ಮಾಡಿದ್ದ ಬುಕ್ಕಿಂಗ್‍ಗಳನ್ನು ರದ್ದು ಮಾಡಲಾಗುತ್ತಿ ದೆಯಲ್ಲದೆ, ಹೊರ ರಾಜ್ಯ, ವಿದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಟೂರ್ ಆಪರೇಟರ್‍ಗಳಲ್ಲೂ ಯಾರೂ ಬುಕ್ಕಿಂಗ್ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ.

ಭಾರತ್ ಇಂಟರ್‍ನ್ಯಾಷನಲ್ ಟ್ರಾವೆಲ್ಸ್, ಟ್ರಾವೆಲ್ ಪಾರ್ಕ್, ಸೀಗಲ್ ಟ್ರಾವೆಲ್ ಅಂಡ್ ಟೂರ್ಸ್, ಸೇಫ್ ವ್ಹೀಲ್ಸ್ ಅಂಡ್ ಟ್ರಾವೆಲ್ಸ್, ಸ್ಕೈವೇ, ಟ್ರಾವೆಲ್, ನೆಕ್ಸ್ಟ್ ಕೇರ್‍ನಂತಹ ಹೆಸರಾಂತ ಟ್ರಾವೆಲ್ ಉದ್ಯಮ ಸಂಸ್ಥೆಗಳ ವಹಿವಾಟಿಗೆ ಕೊರೊನಾ ವೈರಸ್ ವದಂತಿಯಿಂದ ಭಾರೀ ಪೆಟ್ಟು ಬಿದ್ದಿದೆ. ಕೊರೊನಾ ವೈರಸ್ ಆತಂಕ ಮೈಸೂರಿನ ಯೋಗ ಕೇಂದ್ರಗಳಿಗೂ ತಟ್ಟಿದೆ. ಹೊರದೇಶದಿಂದ ಯೋಗ ತರಬೇತಿ ಪಡೆಯಲು ಬರುತ್ತಿದ್ದವರು ತಮ್ಮ ಪ್ರವಾಸ ರದ್ದು ಮಾಡಿಕೊಂಡಿದ್ದಾರೆ. ಇನ್ನು ಕೈಗಾರಿಕೋದ್ಯಮಿಗಳು ಇಂಡಸ್ಟ್ರಿಯಲ್ ಟೂರ್ ಕೈಗೊಳ್ಳುತ್ತಿಲ್ಲ. ಕೊರೊನಾ ವೈರಸ್‍ಗೆ ಹೆದರಿ ಎಷ್ಟೋ ಮಂದಿ ಪ್ರವಾಸಿ ವಾಹನಗಳಿಗೆ ಮಾಡಿದ್ದ ಬುಕ್ಕಿಂಗ್ ಅನ್ನು ರದ್ದು ಮಾಡಿಕೊಳ್ಳುತ್ತಿದ್ದಾರೆ. ಮೈಸೂರಿನ ಎಲ್ಲಾ ಟೂರ್ಸ್ ಅಂಡ್ ಟ್ರಾವೆಲ್ ಏಜೆನ್ಸಿಗಳಲ್ಲಿರುವ ಸುಮಾರು 750 ಪ್ರವಾಸಿ ವಾಹನಗಳು, ಡ್ರೈವರ್‍ಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸೇಫ್ ವ್ಹೀಲ್ಸ್‍ನ ಬಿ.ಎಸ್. ಪ್ರಶಾಂತ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಟ್ರಾವೆಲ್ ಪಾರ್ಕ್‍ನ ಸಿ.ಎ. ಜಯಕುಮಾರ್ ಪ್ರತಿಕ್ರಿಯೆ ನೀಡಿ, ಏಪ್ರಿಲ್ ಮತ್ತು ಮೇ ತಿಂಗಳಿಗೆ ಪ್ರವಾಸಿಗರು ಮಾಡಿದ್ದ ವಾಹನ ಬುಕ್ಕಿಂಗ್ ಅನ್ನು ರದ್ದು ಮಾಡುತ್ತಿದ್ದಾರೆ. ಕೆಲ ಯೂರೋಪ್ ರಾಷ್ಟ್ರಗಳಿಂದ ನಮ್ಮಲ್ಲಿಗೆ ಯಾರೂ ಬರುತ್ತಿಲ್ಲ ಹಾಗೂ ಇಲ್ಲಿಂದ ಅಲ್ಲಿಗೂ ಹೋಗಲು ಹಿಂಜರಿಯುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ವದಂತಿ ಇಲ್ಲಿನ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ ಎಂದರು. ಈ ಆತಂಕದಿಂದ ಭಯಭೀತರಾಗಿರುವ ಜನರು ಪ್ರವಾಸ ಕೈಗೊಳ್ಳುವುದನ್ನೇ ಮೊಟಕುಗೊಳಿಸುತ್ತಿದ್ದು, ಪರಿಣಾಮ ಮೈಸೂರು ಹಾಗೂ ಸುತ್ತುಮುತ್ತಲ ಪ್ರದೇಶಗಳ ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿವೆ ಎಂದು ಬಿಜೆಪಿಯ ಶ್ರೀನಿವಾಸ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಈ ವೈರಸ್ ವದಂತಿ ಹೀಗೆಯೇ ಮುಂದುವರಿದಲ್ಲಿ ಪ್ರವಾಸೋದ್ಯಮ, ಹೋಟೆಲ್, ವ್ಯಾಪಾರ-ವಹಿವಾಟು, ಕೈಗಾರಿಕೋದ್ಯಮವಷ್ಟೇ ಅಲ್ಲದೆ, ಮೈಸೂರಿನ ಎಲ್ಲಾ ಕ್ಷೇತ್ರಗಳ ವ್ಯಾಪಾರಿ, ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ನೆಲಕಚ್ಚುವುದರಲ್ಲಿ ಸಂಶಯವಿಲ್ಲ.

ಇರಾನ್‍ನಲ್ಲಿ ಸಂಸದೆಯೇ ಬಲಿ
ಟೆಹ್ರಾನ್/ರೋಮ್, ಮಾ.8-ವಿಶ್ವಾ ದ್ಯಂತ ಮರಣ ಮೃದಂಗ ಭಾರಿಸುತ್ತಿ ರುವ ಮಾರಕ ಕೊರೊನಾ ವೈರಸ್‍ಗೆ ಇರಾನ್‍ನಲ್ಲಿ ಸಂಸದರೊಬ್ಬರು ಬಲಿ ಯಾಗಿದ್ದಾರೆ. ಇರಾನ್‍ನ ಕನ್ಸರ್ವೇಟಿವ್ ಪಕ್ಷದ ಸಂಸದೆ ಫಾತೆಮೆ ರಬಾರ್ (55 ವರ್ಷ) ಕೊರೊನಾ ವೈರಸ್ ಸೋಂಕಿ ನಿಂದ ತೀವ್ರ ಅಸ್ವಸ್ಥರಾಗಿ ಕೊನೆಯುಸಿ ರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಫಾತೆಮೆ ಇರಾನ್‍ನಲ್ಲಿ ಕೊರೊನಾ ವೈರಸ್‍ಗೆ ತುತ್ತಾಗಿ ಸಾವನ್ನಪ್ಪಿದ 2ನೇ ಜನಪ್ರತಿನಿಧಿ. ಅಲ್ಲದೆ ಇನ್ನೂ 7 ಜನಪ್ರತಿನಿಧಿಗಳಿಗೆ ಸೋಂಕು ತಗುಲಿದೆ. ಇರಾನ್‍ನಲ್ಲಿ ಈವರೆಗೂ ಒಟ್ಟು 4,747 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 124 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಮತ್ತೆ 50 ಸಾವು: ಇಟಲಿಯಲ್ಲಿ ಮತ್ತೆ ಕೊರೊನಾ ವೈರಸ್‍ಗೆ 50 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಶುಕ್ರವಾರ 49 ಮಂದಿ, ಶನಿವಾರ 50 ಮಂದಿಯನ್ನು ಕೊರೊನಾ ಬಲಿ ಪಡೆದಿದೆ ಎಂದು ಇಟಲಿ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ.

ಚೀನಾದಲ್ಲಿ ಮತ್ತೆ 27 ಬಲಿ: ಚೀನಾದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆ ದಿದ್ದು, ಶನಿವಾರ ಮತ್ತೆ 27 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3097ಕ್ಕೆ ಏರಿಕೆಯಾಗಿದೆ. ಸೋಂಕಿನ ಶಂಕಿತ ಪ್ರಕರಣಗಳ ಸಂಖ್ಯೆ 5,264ಕ್ಕೆ ಏರಿಕೆಯಾಗಿದೆ. 1,661 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

 

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39

ನವದೆಹಲಿ/ಚೆನ್ನೈ/ಬೆಂಗಳೂರು,ಮಾ.8- ಭಾರತದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ 5 ಪ್ರಕರಣಗಳು ಖಚಿತವಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮಾ.7 ರಂದು ಕೊರೊನಾ ಸೋಂಕಿನ 34 ಪ್ರಕರಣ ದಾಖಲಾಗಿದ್ದವು. ಭಾನುವಾರ ಕೇರಳ, ಲಡಾಕ್, ತಮಿಳುನಾಡಿನಿಂದ ಹೊಸದಾಗಿ 5 ಪ್ರಕರಣಗಳು ವರದಿಯಾದವು. ಕೊರೊನಾ ವೈರಸ್ ಪರೀಕ್ಷೆಗಾಗಿ ದೇಶಾದ್ಯಂತ 57 ಪ್ರಯೋಗಾಲಯಗಳನ್ನು ಹೊಸದಾಗಿ ತೆರೆಯಲಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ವಿಮಾನ ನಿಲ್ದಾಣಗಳಲ್ಲಿ ಒಟ್ಟು 7 ಸಾವಿರಕ್ಕಿಂತ ಹೆಚ್ಚು ವಿಮಾನಗಳ 7 ಲಕ್ಷ ಪ್ರಯಾಣಿಕರ ತಪಾಸಣೆ ಮಾಡಲಾಗಿದೆ.

ಕೇರಳದ ಐವರಲ್ಲಿ ಕೊರೊನಾ: ಕೇರಳದ ಭಾನುವಾರ ಐವರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಈ ಐವರು ಪಟ್ಟಣಂತಿಟ್ಟ ಜಿಲ್ಲೆಯವರು. ಇವರಲ್ಲಿ ಮೂವರು ಫೆ.29ರಂದು ಇಟಲಿಯಿಂದ ವಾಪಸ್ ಬಂದವರು. ಇನ್ನಿಬ್ಬರು ಅವರ ಸಂಬಂಧಿಕರು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ತ.ನಾಡಿನಲ್ಲಿ ಸೋಂಕು: ತಮಿಳುನಾಡಿ

Translate »