ಮೈಸೂರಲ್ಲಿ ಮತ್ತೆ ಸರಗಳ್ಳರ ಕಾಟ
ಮೈಸೂರು

ಮೈಸೂರಲ್ಲಿ ಮತ್ತೆ ಸರಗಳ್ಳರ ಕಾಟ

March 9, 2020

ಮೈಸೂರು, ಮಾ.8(ಎಂಕೆ)- ಬೈಕ್ ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗರಿಸಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿ ನಡೆ ದಿದೆ. ಇಲ್ಲಿನ ನಿವಾಸಿ ಲೀಲಾವತಿ ಚಿನ್ನದ ಸರ ಕಳೆದುಕೊಂಡವರು. ಲೀಲಾವತಿ ಅವರು ಶನಿವಾರ ರಾತ್ರಿ ಮೊಸರು ತರ ಲೆಂದು ಜಯಲಕ್ಷ್ಮಿಪುರಂನ ರಾಘವೇಂದ್ರ ಮಠದ ಹಿಂಭಾಗದ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಲೀಲಾವತಿ ಅವರ ಕುತ್ತಿಗೆಯಲ್ಲಿದ್ದ 1.23 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Translate »