ವಿದ್ಯಾಭವನದಲ್ಲಿ ಆರ್ಟಿಕ್ಯುಲೇಟ್ ನೃತ್ಯೋತ್ಸವ
ಮೈಸೂರು

ವಿದ್ಯಾಭವನದಲ್ಲಿ ಆರ್ಟಿಕ್ಯುಲೇಟ್ ನೃತ್ಯೋತ್ಸವ

March 9, 2020

ಮೈಸೂರು, ಮಾ.8- ಮೈಸೂರಿನ ಭಾರತೀಯ ವಿದ್ಯಾಭವನದಲ್ಲಿ ಇತ್ತೀಚೆಗೆ ನಡೆದ ಆರ್ಟಿಕ್ಯುಲೇಟ್ ನೃತ್ಯೋ ತ್ಸವದ 50ನೇ ಸರಣಿ ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ಕಥಕ್ ನೃತ್ಯ ವೈಭವ ಮೇಳೈಸಿತ್ತು. ಭವನದ ತಾತಾ ಚಾರಿ ಸಭಾಂಗಣದಲ್ಲಿ ಇತ್ತೀಚೆಗೆ ವಿದ್ವಾನ್ ಮೈಸೂರು ಬಿ.ನಾಗ ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜಾಶ್ರೀ ಹಾಗೂ ವೈದೇಹಿ 4 ನೃತ್ಯ ವಿಭಾಗ ಗಳಲ್ಲಿ ಪ್ರದರ್ಶನ ನೀಡಿದರು. ಕಥಕ್ ಶೈಲಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಸಾಮರಸ್ಯ ಅನಾವರಣಗೊಳಿಸಿದರು. ಶಕುಂತಲಾ ಪ್ರಭಾತ್ ಹಾಗೂ ವಿದ್ವಾನ್ ಪಾಶ್ರ್ವನಾಥ್ ಅವರ ಶಿಷ್ಯೆ ಪೂಜಿತಾ ಭಾಸ್ಕರ್, ಗಣೇಶ ಕೌತ್ವಮ್ ಸ್ತುತಿಯೊಂದಿಗೆ `ಶ್ರೀ ಕೃಷ್ಣ ಕಮಲನಾಥೋ’ ಹಾಡಿಗೆ 25 ನಿಮಿಷಗಳ ಭರತನಾಟ್ಯ ಪ್ರದರ್ಶನ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದರು. ಶಂಕರಾಚಾರ್ಯರ ವೇದಸ್ರ, ಭಲ್ವಂತ್ರಾಯ ಭಟ್‍ರ ನಟರಾಜ ಸ್ತುತಿ, `ಅಣ್ಣಮ್ಮಾ ಚಾರ್ಯ’ ವಿರಚಿತ ಕೃತಿ ಮತ್ತು ಪುರಂದರದಾಸರ `ಬಾಲಕೃಷ್ಣನೇ ಬಾರೋ’, `ಉಗಾ ಭೋಗದ’ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿದರು.

Translate »