ಏಳು ಮಂದಿ ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ
ಮೈಸೂರು

ಏಳು ಮಂದಿ ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ

March 9, 2020

ನವದೆಹಲಿ: ವಿಶ್ವ ಮಹಿಳಾ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಖಾತೆ ಗಳನ್ನು ಮಹಿಳೆಯ ರಿಗೆ ಬಿಟ್ಟುಕೊಟ್ಟಿದ್ದಾರೆ. 7 ಮಹಿಳಾ ಸಾಧಕರು ತಮ್ಮ ಸ್ಫೂರ್ತಿ ದಾಯಕ ಕಥೆಗಳನ್ನು ಹಂಚಿಕೊಳ್ಳಲು ನನ್ನ ಟ್ವಿಟರ್ ಅಕೌಂಟ್ ಅನ್ನು ಬಳಸುತ್ತಾರೆ ಎಂದು ಅವರು ಬಹುದಿನಗಳ ಹಿಂದೆಯೇ ಹೇಳಿಕೊಂಡಿದ್ದರು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 7 ಮಹಿಳಾ ಸಾಧಕಿಯರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಮತ್ತು ಜನರೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂವಹನ ನಡೆಸಲಿ ದ್ದಾರೆ ಎಂದು ಅವರು ಘೋಷಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ದೇಶದ ಎಲ್ಲ ಮಹಿಳೆಯರಿಗೆ ಶುಭ ಕೋರಿದ್ದು, ಈ ಹಿಂದಿನ ತಮ್ಮ ಮಾತನ್ನು ನೆನಪು ಮಾಡಿಕೊಳ್ಳುತ್ತಾ, ನಾನು ಸಾಮಾಜಿಕ ಜಾಲತಾಣಗಳ ದೂರ ಉಳಿಯುತ್ತಿದ್ದೇನೆ. ನನ್ನ ಟ್ವಿಟರ್ ಖಾತೆಯ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಹ ತ್ತರ ಸಾಧನೆಗೈದ ಮಹಿಳಾ ಮಣಿಯರಿಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಇಂದಿನ ಮಟ್ಟಿಗೆ ತಮಿಳು ನಾಡು ಮೂಲದ ಮಾಳವಿಕ ಅಯ್ಯರ್ ನಿರ್ವಹಣೆ ಮಾಡುತ್ತಿದ್ದಾರೆ.

Translate »