ಬೆಂಗಳೂರು, ಜು.11- ನಮಗೂ ಅತೃಪ್ತ ಶಾಸಕರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ, ಯಾವುದೇ ಅತೃಪ್ತ ಶಾಸಕರು ನನ್ನ ಸಂಪರ್ಕ ದಲ್ಲಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂ ರಿನಲ್ಲಿ ಮಾತನಾಡಿದ ಅಶೋಕ್, ಅತೃಪ್ತ ಶಾಸಕರು ಯಾರು ಎಂಬುದು ನನಗೆ ಗೊತ್ತಿಲ್ಲ, ಅವರು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ, ಸದಸ್ಯತ್ವಕ್ಕೆ ಯಾರೂ ರಾಜೀನಾಮೆ ನೀಡಿಲ್ಲ, ಇದಕ್ಕೆ ಬಿಜೆಪಿ ಕಾರಣ ವಲ್ಲ, ಸಿದ್ದರಾಮಯ್ಯ ಅವರೇ ಇದಕ್ಕೆ ಉತ್ತರಿಸಬೇಕು ಎಂದು ಹೇಳಿದ್ದಾರೆ. ಒಂದು ವರ್ಷದಿಂದ…
ಸರ್ವರ ಹಿತ ಬಯಸುವ ಪುರೋಹಿತರ ಅವಹೇಳನ
July 12, 2019ಮೈಸೂರು, ಜು.11(ಎಂಕೆ)- ಎಲ್ಲರ ಹಿತ ಬಯಸುವ ಪುರೋಹಿತರನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಅವಹೇಳನ ಕಾರಿಯಾಗಿ ಬಿಂಬಿಸಲಾಗುತ್ತಿದೆ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂ ಗಾರ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀರಾಮಮಂದಿರದಲ್ಲಿ ಗುರು ವಾರ ಏರ್ಪಡಿಸಿದ್ದ ‘ಪುರೋಹಿತರು ಮತ್ತು ಅರ್ಚಕರ ಕುಂದು-ಕೊರತೆ’ ಸಭೆಯಲ್ಲಿ ಮಾತನಾಡಿದ ಅವರು, ಪುರೋಹಿತರಾಗು ವುದು ಅಷ್ಟು ಸುಲಭವಲ್ಲ. ವಿಶ್ವವಿದ್ಯಾನಿಲಯ ದಲ್ಲಿ ಪಿಹೆಚ್.ಡಿ ಪದವಿ ಪಡೆಯುವುದಕ್ಕಿಂತ ವೇದ, ಶಾಸ್ತ್ರಗಳ ಅಧ್ಯಯನ ಕಷ್ಟಕರವಾದದ್ದು. ಕನಿಷ್ಠ 2 ವರ್ಷ ವೇದಗಳ ಅಧ್ಯಯನ ಮಾಡಿದವರನ್ನು ಸಾಮಾನ್ಯ ಹಾಗೂ…
ಥೈಲ್ಯಾಂಡ್‍ನಲ್ಲಿ ಮೈಸೂರಿನ ಯುವಕ ಯೋಗ ಸಾಧನೆ
July 12, 2019ಮೈಸೂರು, ಜು.11(ವೈಡಿಎಸ್)- ಥೈಲ್ಯಾಂಡ್‍ನಲ್ಲಿ ನಡೆದ 7ನೇ ಅಂತಾ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಮೈಸೂರಿನ ಯುವಕ 6 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮೈಸೂರು ಬೆಸ್ತಗೇರಿ ನಿವಾಸಿ, ಸಿಎಆರ್ ಮುಖ್ಯಪೇದೆ ಪರಶುರಾಮ್ ಮತ್ತು ಮಂಜುಳ ದಂಪತಿ ಪುತ್ರ ಕುವಲಾಶ್ವ ವಿದೇಶ ದಲ್ಲಿ ಯೋಗ ಸಾಧನೆ ಮಾಡಿದ್ದಾನೆ. ಯುವ ರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ಯೋಗ ಸಾಧನೆಯನ್ನೂ ಮುಂದು ವರೆಸಿದ್ದಾನೆ. ಅಗ್ರಹಾರದ ಎಸ್‍ಜಿಎಸ್ ಯೋಗ ಇಂಟರ್‍ನ್ಯಾಷನಲ್ ಫೌಂಡೇಷನ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್‍ನಲ್ಲಿ ನಾಲ್ಕುವರೆ…
ಜ್ಞಾನ, ಕಠಿಣ ಪರಿಶ್ರಮ ಸಾಧನೆಯ ಸಾಧನ
July 12, 2019ಮೈಸೂರು,ಜು.11(ಎಂಕೆ)- ಐಎಎಸ್, ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಜ್ಞಾನ ಮತ್ತು ಕಠಿಣ ಪ್ರಯತ್ನ ಬಹಳ ಮುಖ್ಯ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ(ಎಸ್ಪಿ) ಸಿ.ಬಿ.ರಿಷ್ಯಂತ್ ಕಿವಿಮಾತು ಹೇಳಿದರು. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎನ್ನುವ ಬಯಕೆ ನಿಮ್ಮಲ್ಲಿ ಮೊದಲು ಮೂಡಬೇಕು. ಅದಕ್ಕಾಗಿ ಬೇಕಾದ ಜ್ಞಾನ ಸಂಪಾದಿಸಲು ನಿರಂತರ ಓದಿನಲ್ಲಿ ತೊಡಗಿಕೊಳ್ಳಬೇಕೆಂದು…
ದೇಶದಲ್ಲಿನ ಜನಸಂಖ್ಯಾ ಸ್ಫೋಟ ಬಾಂಬ್ ಪರಿಣಾಮಕ್ಕಿಂತಲೂ ಭೀಕರ
July 12, 2019ಮೈಸೂರು, ಜು.11(ಎಂಟಿವೈ)-ಬಾಂಬ್ ಗಿಂತಲೂ ಭೀಕರವಾಗಿರುವ ಜನಸಂಖ್ಯಾ ಸ್ಫೋಟ ನಿಯಂತ್ರಿಸದಿದ್ದರೆ ಆಹಾರ ಕೊರತೆ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿ ದೇಶದ ಅಭಿವೃದ್ಧಿ ಮರೀಚಿಕೆಯಾಗಿ ಮನುಷ್ಯ ರನ್ನು ಕಿತ್ತು ತಿನ್ನಲಿದೆ ಎಂದು ಡಿ.ಬನು ಮಯ್ಯ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾ ಸಕ ಡಾ.ಬಿ.ಹಿರಣ್ಣಯ್ಯ ವಿಷಾದಿಸಿದ್ದಾರೆ. ಮೈಸೂರಿನ ಪುರಭವನದ ಸಭಾಂಗಣ ದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಹಾಗೂ ಎಫ್‍ಪಿಎ ಇಂಡಿಯಾ ಮೈಸೂರು ಶಾಖೆ ಸಂಯುಕ್ತಾ ಶ್ರಯದಲ್ಲಿ ನಡೆದ `ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ…
ಎಸಿಎಸ್‍ಐಆರ್ ಕೇಂದ್ರಗಳಲ್ಲಿ ಶೀಘ್ರವೇ ಇಂಡಸ್ಟ್ರಿ ವಿಷಯದಲ್ಲಿ ಪಿಹೆಚ್.ಡಿ ಆರಂಭ
July 12, 2019ಮೈಸೂರು,ಜು.11(ವೈಡಿಎಸ್)-ವೈಜ್ಞಾ ನಿಕ ಮತ್ತು ನವಶೋಧಗಳ ಸಂಶೋಧನಾ ಅಕಾಡೆಮಿ (ಎಸಿಎಸ್‍ಐಆರ್) ಕೇಂದ್ರ ಗಳಲ್ಲಿ ಶೀಘ್ರದಲ್ಲೇ ಇಂಡಸ್ಟ್ರಿ (ಕೈಗಾರಿಕೆ) ವಿಷಯದಲ್ಲಿ ಪಿಹೆಚ್.ಡಿ ಆರಂಭಿಸಲಾಗು ವುದು ಎಂದು ದೆಹಲಿಯ ಎಸಿಎಸ್ ಐಆರ್ ನಿರ್ದೇಶಕ ಪ್ರೊ.ಆರ್.ಎಸ್. ಸಾಂಗ್ವಾನ್ ತಿಳಿಸಿದರು. ಸಿಎಫ್‍ಟಿಐಆರ್‍ನ ಚೆಲುವಾಂಬ ಸಭಾಂ ಗಣದಲ್ಲಿ ವೈಜ್ಞಾನಿಕ ಹಾಗೂ ನವಶೋಧ ಗಳ ಸಂಶೋಧನಾ ಅಕಾಡೆಮಿ (ಎಸಿಎಸ್ ಐಆರ್) ಹಾಗೂ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಸ್ಸಿ ಮತ್ತು ಐಎಸ್ ಎಂಟಿ ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾ…
ಅಡುಗೆ, ಉಡುಗೆ, ನಡೆ, ನುಡಿಯಲ್ಲಿ ಅಂದು ಕಾಣುತ್ತಿದ್ದ ಜನಪದ ಇಂದು ಇಲ್ಲ
July 12, 2019ಮೈಸೂರು, ಜು.11(ಆರ್‍ಕೆಬಿ)- ಹಿಂದೆ ಅಡುಗೆ, ಉಡುಗೆ, ನಡೆ, ನುಡಿ, ಹಾಡು ಎಲ್ಲದರಲ್ಲೂ ಜನಪದವನ್ನು ಪ್ರತಿಬಿಂಬಿ ಸುತ್ತಿದ್ದವು. ನಾಡಿನ ಸಂಸ್ಕøತಿಯನ್ನು ತಿಳಿ ಸುತ್ತಿತ್ತು. ಜನಪದವಿದ್ದಲ್ಲಿ ವಾತಾವರಣ ನೀರಸವಾಗಿರದೆ ಲವಲವಿಕೆಯಿಂದ ಇರು ತ್ತಿತ್ತು. ಅಂತಹ ಜನಪದ ಇಂದು ಇಲ್ಲವಾ ಗಿದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ತಿಳಿಸಿದರು. ಮೈಸೂರಿನ ಮಹಾಜನ ಕಾಲೇಜಿನ ವಿವೇ ಕಾನಂದ ಸಭಾಂಗಣದಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಕಾರ್ಯಾಗಾರ, ಜಾನ ಪದ ಸಾಹಿತ್ಯ ಮತ್ತು ಜೀವನ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದರು. ಜನಪದ…
ಮುಚ್ಚಿರುವ ಇ-ಟಾಯ್ಲೆಟ್ ತೆರೆಯಲು ಆಗ್ರಹಿಸಿ ಚೊಂಬು ಹಿಡಿದು ಪ್ರತಿಭಟನೆ
July 12, 2019ಮೈಸೂರು, ಜು.11(ಆರ್‍ಕೆಬಿ)- ಮೈಸೂರಿನ ದಿವಾನ್ಸ್ ಮತ್ತು ಡಿ.ದೇವರಾಜ ಅರಸು ರಸ್ತೆಗಳು ಕೂಡುವ ಸ್ಥಳದಲ್ಲಿ ಇದ್ದೂ ಇಲ್ಲದಂತೆ ಮುಚ್ಚಿರುವ ಇ-ಟಾಯ್ಲೆಟ್ ಅನ್ನು ಸಾರ್ವಜನಿಕರ ಬಳಕೆಗೆ ತೆರೆಯಬೇಕೆಂದು ಆಗ್ರ ಹಿಸಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಇ-ಟಾಯ್ಲೆಟ್ ಬಳಿ ಪ್ರತಿಭಟನೆ ನಡೆಸಿದರು. ಮಹಾನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ವೇದಿಕೆ ಅಧ್ಯಕ್ಷ ಎಂ.ಎಸ್.ಗುರುರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೈಯ್ಯಲ್ಲಿ ಬಹಿರ್ದೆಸೆಗೆ ಹೋಗುವಾಗ ಬಳಸುವ ಚೊಂಬು ಹಿಡಿದು `ಅಣಕು ಪ್ರದರ್ಶನ’ ನಡೆಸಿದರು. ಪಾಲಿಕೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ಕಾರರು,…
ಸುಪ್ರೀಮ್ ಫಾರ್ಮಾಸ್ಯುಟಿಕಲ್ಸ್‍ಗೆ ಅತ್ಯುತ್ತಮ ಭಾರತದ ಎಸ್‍ಎಂಇ 100 ಪ್ರಶಸ್ತಿ
July 12, 2019ಮೈಸೂರು, ಜು.11(ಪಿಎಂ)- ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದ ಸುಪ್ರೀಮ್ ಫಾರ್ಮಾಸ್ಯುಟಿಕಲ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ, ಭಾರತದ ಎಸ್‍ಎಂಇ ವೇದಿಕೆ, ಆಕ್ಸಿಸ್ ಬ್ಯಾಂಕ್ ಜಂಟಿ ಆಶ್ರಯ ದಲ್ಲಿ ಕೊಡಮಾಡುವ `ಅತ್ಯುತ್ತಮ ಭಾರತದ ಎಸ್‍ಎಂಇ 100 ಅವಾರ್ಡ್’ಗೆ ಭಾಜನ ವಾಗಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇ ಶಕ ಎಸ್.ಎನ್.ರಾವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದೇಶದ 100 ಉದ್ದಿಮೆಗಳಿಗೆ…
ಮಕ್ಕಳಾಗಲಿಲ್ಲವೆಂದು ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ
July 12, 2019ಮೈಸೂರು, ಜು.11- ಮಕ್ಕಳಾಗಿಲ್ಲವೆಂದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಜಿ.ಕುರುವಟ್ಟಿ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರದ ಬಸವೇಶ್ವರ ಕಾಲೋನಿ ನಿವಾಸಿ ಮಹ ದೇವನಿಗೆ ಶಿಕ್ಷೆ ವಿಧಿಸಲಾಗಿದೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತ್ನಿ ಭಾಗ್ಯ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಮಹದೇವ, ಮತ್ತೊಂದು ವಿವಾಹ ವಾಗಲು ನಿರ್ಧರಿಸಿದ್ದ. ಇದಕ್ಕೆ ಭಾಗ್ಯ ಅಡ್ಡಿಯಾಗುತ್ತಾರೆಂದು 2016ರ ಜ.4ರಂದು ಮದ್ಯಕ್ಕೆ ವಿಷ ಬೆರೆಸಿ…










