ಮೈಸೂರು,ಜು.12(ಎಂಟಿವೈ)- ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಡ ಮಾಸದ ಎರಡನೇ ಶುಕ್ರವಾರವಾದ ಇಂದು ಮುಂಜಾನೆಯಿಂದಲೇ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ನಾಡದೇವಿಯ ದರ್ಶನ ಪಡೆದರು. ಚಾಮುಂಡೇಶ್ವರಿ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ನಾಡದೇವಿ ಚಾಮುಂಡೇಶ್ವರಿ ತಾಯಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಮಹಾಮಂಗಳಾರತಿ ಬೆಳಗಿದ…
ಕುಕ್ಕರಹಳ್ಳಿ ಕೆರೆಯಲ್ಲಿ ರಾಸಾಯನಿಕ ನೊರೆ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಪರಿಶೀಲನೆ
July 13, 2019ಮೈಸೂರು,ಜು.12(ಎಂಟಿವೈ)- ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿ ರಾಸಾಯನಿಕ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ, ಕಲುಷಿತ ನೀರು ಸೇರುತ್ತಿರುವ ಸ್ಥಳ ಪರಿಶೀಲಿಸಿ ದರಲ್ಲದೆ, ಒಳಚರಂಡಿ ಪೈಪ್ ದುರಸ್ತಿಗೆ ಪಾಲಿಕೆಗೆ ಮನವರಿಕೆ ಮಾಡಿಕೊಟ್ಟರು. ಪಡುವಾರಹಳ್ಳಿ, ಜಯಲಕ್ಷ್ಮೀಪುರಂ, ಒಂಟಿಕೊಪ್ಪಲು ಸೇರಿದಂತೆ ಸುತ್ತಮುತ್ತ ಲಿನ ಬಡಾವಣೆಗಳ ಒಳಚರಂಡಿ ನೀರು, ಸರ್ವಿಸ್ ಸ್ಟೇಷನ್‍ಗಳಿಂದ ರಾಸಾಯನಿಕ ಮಿಶ್ರಿತ ನೀರು, ವಿದ್ಯಾರ್ಥಿನಿಲಯಗಳಿಂದ ಶೌಚಾಲಯದ ನೀರು ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಿಂಭಾಗವಿರುವ ದೊಡ್ಡ…
ಮೈಸೂರಲ್ಲಿ ವ್ಯಾಪಕಗೊಳ್ಳುತ್ತಿದೆ ಪುಂಡ ಪೋಕರಿಗಳ ಅಟ್ಟಹಾಸ
July 13, 2019ಮೈಸೂರು, ಜು.12- ಮೈಸೂರಿನಲ್ಲಿ ದಿನೇ ದಿನೆ ಪುಂಡ ಪೋಕರಿಗಳ ಹಾವಳಿ ವ್ಯಾಪಕವಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಹಾಡಹಗಲೇ ಅಮಾ ಯಕರ ಮೇಲೆ ನಡುರಸ್ತೆಯಲ್ಲಿ ದಾಳಿ ನಡೆಸಿ, ಸಾರ್ವಜನಿಕವಾಗಿ ಹಲ್ಲೆ ನಡೆ ಸುವ ಮೂಲಕ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಎಂದೂ ಲೆಕ್ಕಿಸದೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಜೋರಾಗಿ ಕೂಗಾಡುತ್ತಾ ಅಬ್ಬರಿಸುವುದು, ಏಕಾಏಕಿ ಹಲ್ಲೆ ನಡೆಸುವುದು, ಧಮ್ಕಿ ಹಾಕುವುದು, ಜೀವ ಬೆದರಿಕೆ ಹಾಕುವುದು ಮಾಮೂಲಿ ಯಾಗಿದೆ. ಈ ಆತಂಕವಾದಿಗಳ ಆರ್ಭಟ ನೋಡಿದರೆ ಮಧ್ಯಪ್ರವೇಶಿಸಲು ಎಂತಹ…
ಬೆಂಗಳೂರು ನಗರ ಡಿಸಿ ವಿಜಯಶಂಕರ್, ಎಸಿ ನಾಗರಾಜ್‍ಗೆ ನ್ಯಾಯಾಂಗ ಬಂಧನ
July 13, 2019ಬೆಂಗಳೂರು, ಜು. 12- ಐಎಂಎ ಬಹು ಕೋಟಿ ವಂಚನೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿಯಿಂದ ಬಂಧಿ ಸಲ್ಪಟ್ಟಿರುವ ಬೆಂಗ ಳೂರು ನಗರದ ಜಿಲ್ಲಾ ಧಿಕಾರಿಯಾಗಿದ್ದ ಬಿ.ಎಂ. ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ವಿಭಾಗಾಧಿ ಕಾರಿಯಾಗಿದ್ದ ನಾಗರಾಜ್ ಅವರ ಮಧ್ಯಂ ತರ ಜಾಮೀನು ಅರ್ಜಿ ತಿರಸ್ಕರಿಸಿದ ಬೆಂಗ ಳೂರಿನ 1ನೇ ಸಿಸಿಹೆಚ್ ನ್ಯಾಯಾಲಯವು ಇಬ್ಬರೂ ಅಧಿಕಾರಿಗಳನ್ನು ಜುಲೈ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಐಎಂಎ ಸಂಸ್ಥೆ ಪರವಾಗಿ ವರದಿ ನೀಡಲು ಐಎಎಸ್ ಅಧಿಕಾರಿ ಬಿ.ಎಂ.ವಿಜಯಶಂಕರ್ ಮತ್ತು ನಾಗರಾಜ್ ಲಂಚ…
ಎದೆ ಬಗೆಯೋಕೆ ಆಗಲ್ಲ ಅಲ್ವಾ!?
July 13, 2019ಬೆಂಗಳೂರು, ಜು.12- ನಮ್ಮ ಮೈತ್ರಿ ಸರ್ಕಾರದಲ್ಲಿಂದ ಬ್ಲ್ಯಾಕ್‍ಶಿಪ್‍ಗಳೆಲ್ಲಾ ಈಗ ಇಲ್ಲಿಂದ ಓಡಿ ಹೋಗಿವೆ ಎಂದು ರಾಜೀನಾಮೆ ಕೊಟ್ಟ ಶಾಸಕರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಲೆಳೆದಿದ್ದಾರೆ. ವಿಧಾನ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಇರುವ ಕಾರಣಕ್ಕೆ ವಿಶ್ವಾಸಮತ ಯಾಚಿಸುತ್ತಿರೋದು. ಅದು ಹೇಗೆ ಆಗುತ್ತೆ? ಹೆಂಗೆ ಆಗುತ್ತೆ ಅನ್ನೊದೆಲ್ಲ ಹೇಳೋಕೆ ಆಗಲ್ಲ. ನಮ್ಮ ಜೊತೆ ಚರ್ಚಿಸಿಯೇ ಸಿಎಂ ಈ ಮಾತನ್ನು ಸದನದಲ್ಲಿ ಹೇಳಿದ್ದು ಎಂದರು. ಯಡಿಯೂರಪ್ಪನೇ ಬೇರೆ ಸಿದ್ದರಾಮಯ್ಯನೇ ಬೇರೆ ಎಂದ ಅವರು, ಈ ಹಿಂದೆ…
ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಸಿಎಂ!
July 13, 2019ಬೆಂಗಳೂರು, ಜು.12- ವಿಶ್ವಾಸ ಮತ ಯಾಚನೆಗೆ ಸಮಯ ನಿಗದಿ ಮಾಡಲು ಸ್ಪೀಕರ್ ಅವರಿಗೆ ಮನವಿ ಮಾಡುವ ಮೂಲಕ ಮುಖ್ಯಮಂತ್ರಿಗಳು ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದ್ರಾ ಎಂಬ ಚರ್ಚೆ ರಾಜ ಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಸದ್ಯ ಸಿಎಂ ಅವರು ವಿಶ್ವಾಸ ಮತಯಾಚನೆ ಸಮಯ ನಿಗದಿ ಮಾಡಲು ಕೇಳಿರು ವುದರಿಂದ ಎಲ್ಲಾ ಶಾಸಕರಿಗೂ ಆಯಾ ಪಕ್ಷಗಳು ವಿಪ್ ಜಾರಿ ಮಾಡಿವೆ. ಸದ್ಯ ವಿಶ್ವಾಸ ಮತಯಾಚನೆಗೆ ಸಿಎಂ ಅವರಿಗೆ 14 ದಿನಗಳ ಕಾಲಾವಕಾಶ ಲಭಿಸಲಿದೆ. ಈ ಸಂದರ್ಭದಲ್ಲಿ ಇತರೇ…
ಇಬ್ಬರು ಮುಖಂಡರು ಕಾಂಗ್ರೆಸ್‍ಗೆ ವಾಪಸ್?
July 13, 2019ಬೆಂಗಳೂರು, ಜು.12- ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಅವರ ಮನವೊಲಿಸುವ ಉದ್ದೇಶದಿಂದ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ತಮ್ಮ ಈ ಉದ್ದೇಶ ಸಾಧನೆಯಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಗುಲಾಂ ನಬಿ ಆಜಾದ್ ಅವರ ಮನವೊಲಿಕೆ ಪರಿಣಾಮ ವಾಗಿ ರಾಮಲಿಂಗಾರೆಡ್ಡಿ ಹಾಗೂ ಬೇಗ್ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆ ಯುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ವಲಯಗಳು ನಂಬಿವೆ. ಈ ಮನವೊಲಿಕೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗುಲಾಂ…
ಕ್ಷೇತ್ರ ಬಿಟ್ಟ ಶಾಸಕರು: ಯಾವ ಪಕ್ಷದ ಶಾಸಕರು ಯಾವ ರೆಸಾರ್ಟ್‍ನಲ್ಲಿದ್ದಾರೆ?
July 13, 2019ಬೆಂಗಳೂರು, ಜು.12- ಸಮ್ಮಿಶ್ರ ಸರ್ಕಾರವನ್ನು ವಿರೋಧಿಸಿ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಿವೆ. ಜು.12ರಂದು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಶಾಸಕರು ರೆಸಾರ್ಟ್‍ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಕ್ಲಾರ್ಕ್ಸ್ ಎಕ್ಸೋಟಿಕಾ ರೆಸಾರ್ಟ್‍ನಲ್ಲಿರಲಿದ್ದಾರೆ. ಇನ್ನು ಬಿಜೆಪಿ ಶಾಸಕರು ಬೆಂಗಳೂರಿನ ರಮಾಡ ಹೋಟೆಲ್‍ನಲ್ಲಿರಲಿದ್ದಾರೆ. ಬಿಜೆಪಿ ಎರಡು ದಿನಗಳಿಗೆ 30 ರೂಮ್‍ಗಳನ್ನು ಕಾಯ್ದಿರಿಸಿದೆ. ಪಕ್ಷದ ಎಲ್ಲಾ ಶಾಸಕರು ಹೊಟೆಲ್‍ಗೆ ತೆರಳಲಿದ್ದು, ಸೋಮವಾರ ಸದನಕ್ಕೆ ಆಗಮಿಸಲಿ…
ಸಮ್ಮಿಶ್ರ ಸರ್ಕಾರಕ್ಕೆ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ
July 13, 2019ಚಿಕ್ಕಬಳ್ಳಾಪುರ, ಜು.12- ಸಮ್ಮಿಶ್ರ ಸರ್ಕಾರಕ್ಕೆ ಅತೃಪ್ತತೆಯ ಬೆಂಕಿ ಹತ್ತಿದ್ದೇ ಬೆಳಗಾವಿಯಿಂದ. ನಾವು ಬೆಂಕಿ ಹಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿ ದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಎಂದೂ ರೆಸಾರ್ಟಿಗೆ ಹೋದವನಲ್ಲ, ಹಾಗಾಗಿ ರೆಸಾರ್ಟಿಗೆ ಹೋಗಲ್ಲ. ನಾನು ನನ್ನ ಊರು ಬೆಳ ಗಾವಿಗೆ ತೆರಳುತ್ತಿದ್ದೇನೆ ಎಂದರು. ಅತೃಪ್ತ ಶಾಸಕರು ಯಾರೂ ಬಿಜೆಪಿಯವರಲ್ಲ. ಕಾಂಗ್ರೆಸ್-ಜೆಡಿಎಸ್‍ನ ನಮ್ಮ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್ ಬರುತ್ತಾರೆ. ಸಿಎಂ ಸಹ ಸಚಿವ ಸಂಪುಟ ಸಭೆಯಲ್ಲಿ ಅಭಯ…
ಉಪ ರಾಷ್ಟ್ರಪತಿಗಳು ಸಾಗುವ ಮಾರ್ಗದ ರಸ್ತೆ ಡುಬ್ಬಗಳ ತೆರವು
July 13, 2019ಮೈಸೂರು, ಜು.12(ಆರ್‍ಕೆ)-ಉಪ ರಾಷ್ಟ್ರಪತಿ ಗಳ ಆಗಮನದ ಹಿನ್ನೆಲೆಯಲ್ಲಿ ಕಾನ್‍ವಾಯ್ ವಾಹನ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ಮೈಸೂರು ಮಹಾನಗರಪಾಲಿಕೆಯು ಅಗತ್ಯ ವ್ಯವಸ್ಥೆಗೆ ಇಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಕಾರಿನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಿಂದ ನಜರ್‍ಬಾದಿನ ಸರ್ಕಾರಿ ಅತಿಥಿ ಗೃಹಕ್ಕೆ ಸಾಗುವ ರಸ್ತೆ, ನಾಳೆ(ಜು.13) ಸರ್ಕಾರಿ ಅತಿಥಿ ಗೃಹ ದಿಂದ ಕಾರ್ಯಕ್ರಮ ನಡೆಯುವ ಮಾನಸಗಂಗೋ ತ್ರಿಯ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (CIIL) ಮತ್ತು ಎಸ್‍ಜೆಸಿಇ ಬಳಿಯ ಪ್ರಾದೇಶಿಕ ಶಿಕ್ಷಣ…










