ಕುಕ್ಕರಹಳ್ಳಿ ಕೆರೆಯಲ್ಲಿ ರಾಸಾಯನಿಕ ನೊರೆ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಪರಿಶೀಲನೆ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ರಾಸಾಯನಿಕ ನೊರೆ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಪರಿಶೀಲನೆ

July 13, 2019

ಮೈಸೂರು,ಜು.12(ಎಂಟಿವೈ)- ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿ ರಾಸಾಯನಿಕ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ, ಕಲುಷಿತ ನೀರು ಸೇರುತ್ತಿರುವ ಸ್ಥಳ ಪರಿಶೀಲಿಸಿ ದರಲ್ಲದೆ, ಒಳಚರಂಡಿ ಪೈಪ್ ದುರಸ್ತಿಗೆ ಪಾಲಿಕೆಗೆ ಮನವರಿಕೆ ಮಾಡಿಕೊಟ್ಟರು.

ಪಡುವಾರಹಳ್ಳಿ, ಜಯಲಕ್ಷ್ಮೀಪುರಂ, ಒಂಟಿಕೊಪ್ಪಲು ಸೇರಿದಂತೆ ಸುತ್ತಮುತ್ತ ಲಿನ ಬಡಾವಣೆಗಳ ಒಳಚರಂಡಿ ನೀರು, ಸರ್ವಿಸ್ ಸ್ಟೇಷನ್‍ಗಳಿಂದ ರಾಸಾಯನಿಕ ಮಿಶ್ರಿತ ನೀರು, ವಿದ್ಯಾರ್ಥಿನಿಲಯಗಳಿಂದ ಶೌಚಾಲಯದ ನೀರು ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಿಂಭಾಗವಿರುವ ದೊಡ್ಡ ಮೋರಿಗೆ ಸೇರುತ್ತಿದ್ದು, ಮೈಸೂರು-ಹುಣಸೂರು ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಲಾಗಿರುವ ಮ್ಯಾಜಿಕ್ ಬಾಕ್ಸ್ ಮೂಲಕ ಕುಕ್ಕರಹಳ್ಳಿ ಕೆರೆಗೆ ಸೇರುತ್ತಿದೆ. ಇದರಿಂದಾಗಿ ಕೆರೆಯಲ್ಲಿ ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿ ಜು.9ರಿಂದ ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲಾರಂಭಿಸಿತ್ತು. ಅದರಲ್ಲೂ ಬುಧವಾರ(ಜು.10) ನೊರೆ ಪ್ರಮಾಣ ಹೆಚ್ಚಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೆರೆಗೆ ಕಲುಷಿತ ನೀರು ಸೇರದಂತೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಕುಲಸಚಿವ ಪ್ರೊ.ಲಿಂಗರಾಜಗಾಂಧಿ, ಪ್ರಬಾರ ಪ್ರಧಾನ ಅಭಿಯಂತರ ಶಿವೇಗೌಡ, ಎಇ ಶಿವಲಿಂಗ ಪ್ರಸಾದ್, ಎಲೆಕ್ಟ್ರಿಕಲ್ ಇನ್‍ಚಾರ್ಜ್ ಸುಬ್ಬಯ್ಯ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುಜಾವರ್ ಹಾಗೂ ಇನ್ನಿತರರೊಂದಿಗೆ ಸ್ಥಳ ಪರಿಶೀಲಿಸಿದರು.

ಈ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪ್ರೊ. ಲಿಂಗರಾಜ ಗಾಂಧಿ, ಪಡುವಾರಹಳ್ಳಿ ಕಡೆಯಿಂದ ಮ್ಯಾಜಿಕ್ ಬಾಕ್ಸ್‍ನಲ್ಲಿ ಸಣ್ಣ ಪ್ರಮಾಣದಲ್ಲಿ ಚರಂಡಿ ನೀರು ಬರುತ್ತಿದೆ. ಒಳಚರಂಡಿ ಪೈಪ್ ನಲ್ಲೂ ಸಣ್ಣ ಪ್ರಮಾಣದ ಸೋರಿಕೆಯಾಗು ತ್ತಿದೆ. ಈ ಹಿಂದೆಯೇ ಒಮ್ಮೆ ಒಡೆದಿದ್ದ ಒಳಚರಂಡಿ ಪೈಪ್ ಅನ್ನು ದುರಸ್ತಿ ಮಾಡ ಲಾಗಿತ್ತು. ಆದರೂ ಇದೀಗ ಮತ್ತೊಮ್ಮೆ ಸೋರಿಕೆಯಾಗುತ್ತಿದೆ. ಪಾಲಿಕೆ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗಿದ್ದು, ತುರ್ತಾಗಿ ಕ್ರಮ ಕೈಗೊಂಡು ಕೆರೆಗೆ ಒಳಚರಂಡಿ ನೀರು ಬರದಂತೆ ಕ್ರಮ ಕೈಗೊಳ್ಳಲಾಗು ತ್ತದೆ. ಕುಕ್ಕರಹಳ್ಳಿ ಕೆರೆ ಸಂರಕ್ಷಿಸುವ ಹೊಣೆ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುತ್ತೇವೆ ಎಂದರು.

ಮೀನುಗಾರಿಕೆ ಒಂದು ವರ್ಷ ಅವಧಿ ಇದೆ: ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ಕರ್ನಾಟಕ ಮೀನುಗಾರಿಕೆ ಮಂಡಳಿ ಐದು ವರ್ಷಗಳವರೆಗೆ ಗುತ್ತಿಗೆ ಪಡೆದಿದೆ. ನಾಲ್ಕು ವರ್ಷ ಪೂರ್ಣಗೊಂಡಿದ್ದು, ಇನ್ನೂ ಒಂದು ವರ್ಷ ಬಾಕಿ ಇದೆ. ಕೆಲವು ಷರತ್ತುಗಳನ್ನು ಹಾಕಿ ಮೀನುಗಾರಿಕೆಗೆ ಟೆಂಡರ್ ನೀಡಲಾಗಿದೆ. ವಲಸೆ ಪಕ್ಷಿಗಳ ಸಂತಾನೋತ್ಪತ್ತಿಗೆ ಮೀನುಗಾರಿಕೆಯಿಂದ ತೊಂದರೆಯಾಗುತ್ತಿರುವುದು ಮೇಲ್ನೋ ಟಕ್ಕೆ ಕಂಡು ಬಂದಿಲ್ಲ. ಮೀನುಗಾರಿಕೆ ಮಹಾಮಂಡಳವೂ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ನಿಯಮ ಪಾಲಿಸುತ್ತದೆ ಎಂದರು.

ನೊರೆ ಕಣ್ಮರೆ: ಮೂರ್ನಾಲ್ಕು ದಿನದಿಂದ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ನೊರೆ ಈಗ ಕರಗಿದೆ. ಆದರೂ ಕೆರೆ ಮಧ್ಯ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸು ತ್ತಿದೆ. ಮೇಲ್ನೋಟಕ್ಕೆ ಸಮಸ್ಯೆ ಉಲ್ಬಣ ಗೊಳ್ಳದೇ ಇದ್ದರೂ, ಕೆರೆಯ ತಳಭಾಗ ದಲ್ಲಿ ಕಲುಷಿತ ವಸ್ತು ಭಾರೀ ಪ್ರಮಾಣ ದಲ್ಲಿ ಶೇಖರಣೆಯಾಗಿದ್ದು, ಯಾವುದಾ ದರೂ ಪಕ್ಷಿ ನೀರಿನಲ್ಲಿ ಮುಳುಗಿ ಮೇಲೆ ದ್ದರೆ ಕಪ್ಪು ಮಿಶ್ರಿತ ಕೆಸರು ಮೇಲೇಳುತ್ತಿದೆ. ಇದನ್ನು ಗಮನಿಸಿದರೆ ಮುಂದಿನ ದಿನದಲ್ಲಿ ಕೆರೆ ವಾತಾವರಣ ಮತ್ತಷ್ಟು ಹದಗೆಡುವ ಆತಂಕ ಪರಿಸರ ಪ್ರೇಮಿಗಳಲ್ಲಿ ವ್ಯಕ್ತವಾಗುತ್ತಿದೆ.

Translate »