ಮೈಸೂರಲ್ಲಿ ವ್ಯಾಪಕಗೊಳ್ಳುತ್ತಿದೆ ಪುಂಡ ಪೋಕರಿಗಳ ಅಟ್ಟಹಾಸ
ಮೈಸೂರು

ಮೈಸೂರಲ್ಲಿ ವ್ಯಾಪಕಗೊಳ್ಳುತ್ತಿದೆ ಪುಂಡ ಪೋಕರಿಗಳ ಅಟ್ಟಹಾಸ

July 13, 2019

ಮೈಸೂರು, ಜು.12- ಮೈಸೂರಿನಲ್ಲಿ ದಿನೇ ದಿನೆ ಪುಂಡ ಪೋಕರಿಗಳ ಹಾವಳಿ ವ್ಯಾಪಕವಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಹಾಡಹಗಲೇ ಅಮಾ ಯಕರ ಮೇಲೆ ನಡುರಸ್ತೆಯಲ್ಲಿ ದಾಳಿ ನಡೆಸಿ, ಸಾರ್ವಜನಿಕವಾಗಿ ಹಲ್ಲೆ ನಡೆ ಸುವ ಮೂಲಕ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಎಂದೂ ಲೆಕ್ಕಿಸದೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಜೋರಾಗಿ ಕೂಗಾಡುತ್ತಾ ಅಬ್ಬರಿಸುವುದು, ಏಕಾಏಕಿ ಹಲ್ಲೆ ನಡೆಸುವುದು, ಧಮ್ಕಿ ಹಾಕುವುದು, ಜೀವ ಬೆದರಿಕೆ ಹಾಕುವುದು ಮಾಮೂಲಿ ಯಾಗಿದೆ. ಈ ಆತಂಕವಾದಿಗಳ ಆರ್ಭಟ ನೋಡಿದರೆ ಮಧ್ಯಪ್ರವೇಶಿಸಲು ಎಂತಹ ವರೂ ಹಿಂಜರಿಯುತ್ತಾರೆ. ದೌರ್ಜನ್ಯದಿಂದ ನಲುಗಿದವರಲ್ಲಿ ಕೆಲವರು ಮಾತ್ರ ಪೊಲೀ ಸರಿಗೆ ದೂರು ನೀಡುತ್ತಾರೆ. ಅಮಾಯ ಕರು `ದುಷ್ಟರ ಕಂಡರೆ ದೂರ ಇರು’ ಎಂಬ ಮನೋಭಾವನೆಯಿಂದ ಎಲ್ಲವನ್ನೂ ಸಹಿಸಿಕೊಂಡು ಮನೆಗೆ ಹೋಗುವವರೇ ಹೆಚ್ಚು. ಇದರಿಂದಾಗಿ ಪುಂಡರು ಆಡಿದ್ದೇ ಆಟ ಎಂಬಂತಾಗಿದೆ.

ನಜರ್‍ಬಾದ್ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಜಿಂಜರ್ ಹೋಟೆಲ್ ಎದುರು ಇಂದು ನಡೆದ ಘಟನೆ ಮೈಸೂರಿನಲ್ಲಿ ವ್ಯಾಪಕವಾಗಿರುವ ಪುಂಡರ ಹಾವಳಿಗೆ ಕನ್ನಡಿ ಹಿಡಿದಂತಿತ್ತು. ಮಾರುತಿ 800 ಕಾರಿನಲ್ಲಿ ತೆರಳುತಿದ್ದ ಯುವಕ-ಯುವತಿ(ಬಹುಶಃ ಸಹೋದರ-ಸಹೋ ದರಿ) ಮೇಲೆ ದುಷ್ಟರ ಗುಂಪು ದಾಳಿ ನಡೆಸಿ, ಹಲ್ಲೆ ಮಾಡಿದ ದೃಶ್ಯ ನೋಡಿ ದವರು ಕ್ಷಣಕಾಲ ದಂಗಾದರು. ಎರ ಡ್ಮೂರು ಬೈಕ್‍ಗಳಲ್ಲಿ ಬೆನ್ನತ್ತಿ ಬಂದು ಕಾರನ್ನು ಅಡ್ಡಗಟ್ಟಲು ಯತ್ನಿಸಿದ ದುಷ್ಟರು, ಕಾರು ಚಲಿಸುತ್ತಿರುವಾಗಲೇ ಚಾಲಿಸುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದರು. ಪಕ್ಕದಲ್ಲಿ ಕುಳಿತಿದ್ದ ಯುವತಿ ಭಯದಿಂದ ಚೀರಾಡಿದರೂ ಬಿಡಲಿಲ್ಲ. ಕಾರು ನಿಲ್ಲಿಸಿದ ಕೂಡಲೇ ಸುತ್ತುವರಿದು ಅತ್ಯಂತ ಅಸಹ್ಯ ಕರ ಮಾತುಗಳಿಂದ ನಿಂದಿಸಿ, ಯುವಕನ ಮೇಲೆ ದೌರ್ಜನ್ಯ ಮುಂದುವರೆಸಿದರು. ಅಸಹಾಯಕತೆಯಿಂದ ಯುವತಿ ರಕ್ಷಣೆಗೆ ದಾರಿಹೋಕರನ್ನು ಅಂಗಲಾಚುತ್ತಿದ್ದಳು. ಆದರೂ ಕೆಲ ನಿಮಿಷಗಳ ಕಾಲ ಅಟ್ಟ ಹಾಸ ಮೆರೆದ ಗೂಂಡಾಗಳು ಬೈಕ್‍ಗಳ ಏರಿ ಅಲ್ಲಿಂದ ಪರಾರಿಯಾದರು.

ಕಾರು ಚಲಿಸುವಾಗಲೇ ಸಿನಿಮೀಯ ರೀತಿ ಹಲ್ಲೆ ನಡೆಸಿದ್ದಲ್ಲದೆ, ರಸ್ತೆಯಲ್ಲಿ ರಾಜಾ ರೋಷವಾಗಿ ಗೂಂಡಾಗಿರಿ ನಡೆಸಿದರೆಂ ದರೆ ಅವರಿಗೆ ಪೊಲೀಸರ ಭಯವೇ ಇಲ್ಲ ಅನ್ನಿಸುತ್ತದೆ. ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಇದೆ, ಸಮೀಪದ ವೃತ್ತ ದಲ್ಲಿ ಸಂಚಾರ ಪೊಲೀಸರು ಇರುತ್ತಾರೆ. ಇದಾವುದನ್ನೂ ಲೆಕ್ಕಿಸದೆ ಅಟ್ಟಹಾಸ ಮೆರೆ ದರು. ಅವರ ಮಾತುಗಳನ್ನು ಕೇಳಿದರೆ ಸಂಚಾರ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಸಿದ್ದರು ಎನ್ನಿಸುತ್ತದೆ. ಈ ಕ್ಷುಲ್ಲಕ ಕಾರಣಕ್ಕೆ ಪುಂಡರು ರಾಕ್ಷಸರಂತೆ ಬಂದು ಆ ಯುವಕ-ಯುವತಿ ಮೇಲೆ ಎರಗಿ ದ್ದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಚಾಮರಾಜ ಜೋಡಿ ರಸ್ತೆಯ ಶಾಂತಲಾ ಥಿಯೇಟರ್ ಸಿಗ್ನಲ್ ಬಳಿ ಬಸ್ ಶೆಲ್ಟರ್‍ನಲ್ಲಿ ಮದ್ಯಗೋಷ್ಠಿ ನಡೆಸು ತ್ತಿದ್ದ ಪುಂಡರು, ವಿಳಾಸ ಕೇಳಿದ ಪ್ರವಾಸಿ ಗರ ವಾಹನಕ್ಕೆ ನುಗ್ಗಿ ಹಲ್ಲೆ ನಡೆಸಿದ್ದರು. ಇಂತಹ ಕೆಟ್ಟ ಘಟನೆಗಳು ಸಾಕಷ್ಟು ನಡೆ ಯುತ್ತಿವೆ. ಆದರೆ ಎಲ್ಲವೂ ಬೆಳಕಿಗೆ ಬರು ತ್ತಿಲ್ಲ. ಇಂತಹ ಪುಂಡಾಟಿಕೆಯನ್ನು ಆರಂಭ ದಲ್ಲೇ ಚಿವುಟಬೇಕು. ಸಾರ್ವಜನಿಕ ಸ್ಥಳ ಗಳಲ್ಲಿ ಭಯಭೀತ ವಾತಾವರಣ ಸೃಷ್ಟಿ ಸುವ ಆಗಂತುಕರಿಗೆ ಸರಿಯಾದ ಶಾಸ್ತಿ ಮಾಡಬೇಕು. ಪೊಲೀಸರು ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇಂತಹವರು ಸಾರ್ವಜನಿಕರಿಗೆ ಕಂಟಕಪ್ರಾಯರಾಗು ತ್ತಾರೆ. ಪ್ರವಾಸಿಗರಲ್ಲೂ ಮೈಸೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಅಲ್ಲದೆ ನಗರದ ಕಾನೂನು ಸುವ್ಯವಸ್ಥೆಗೂ ಮಾರಕವಾಗುತ್ತದೆ.

Translate »