ಬೆಂಗಳೂರು ನಗರ ಡಿಸಿ ವಿಜಯಶಂಕರ್, ಎಸಿ ನಾಗರಾಜ್‍ಗೆ ನ್ಯಾಯಾಂಗ ಬಂಧನ
ಮೈಸೂರು

ಬೆಂಗಳೂರು ನಗರ ಡಿಸಿ ವಿಜಯಶಂಕರ್, ಎಸಿ ನಾಗರಾಜ್‍ಗೆ ನ್ಯಾಯಾಂಗ ಬಂಧನ

July 13, 2019

ಬೆಂಗಳೂರು, ಜು. 12- ಐಎಂಎ ಬಹು ಕೋಟಿ ವಂಚನೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿಯಿಂದ ಬಂಧಿ ಸಲ್ಪಟ್ಟಿರುವ ಬೆಂಗ ಳೂರು ನಗರದ ಜಿಲ್ಲಾ ಧಿಕಾರಿಯಾಗಿದ್ದ ಬಿ.ಎಂ. ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ವಿಭಾಗಾಧಿ ಕಾರಿಯಾಗಿದ್ದ ನಾಗರಾಜ್ ಅವರ ಮಧ್ಯಂ ತರ ಜಾಮೀನು ಅರ್ಜಿ ತಿರಸ್ಕರಿಸಿದ ಬೆಂಗ ಳೂರಿನ 1ನೇ ಸಿಸಿಹೆಚ್ ನ್ಯಾಯಾಲಯವು ಇಬ್ಬರೂ ಅಧಿಕಾರಿಗಳನ್ನು ಜುಲೈ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಐಎಂಎ ಸಂಸ್ಥೆ ಪರವಾಗಿ ವರದಿ ನೀಡಲು ಐಎಎಸ್ ಅಧಿಕಾರಿ ಬಿ.ಎಂ.ವಿಜಯಶಂಕರ್ ಮತ್ತು ನಾಗರಾಜ್ ಲಂಚ ಪಡೆದಿದ್ದರು. ಅವರಲ್ಲಿ ವಿಜಯ ಶಂಕರ್ ಐಎಂಎ ಸಂಸ್ಥೆಯಿಂ ದಲೇ 1.5 ಕೋಟಿ ಲಂಚ ಪಡೆದಿದ್ದಲ್ಲದೇ, ಮತ್ತೊಂದು ಪ್ರಕರಣದಲ್ಲಿ 1 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ಎಐಟಿ ವಿಚಾ ರಣೆಯಿಂದ ತಿಳಿದು ಬಂದಿದ್ದು ಇವರಿಂದ 2.5 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಬೆಂಗಳೂರಿನಲ್ಲಿ ಫ್ಲೈಓವರ್‍ಗಳನ್ನು ನಿರ್ಮಿಸುತ್ತಿರುವ ಅಡೋನಿ ಸಂಸ್ಥೆಯು ಐಎಂಎ ಸಂಸ್ಥೆ ಜೊತೆ ಸಹಭಾಗಿತ್ವ ಹೊಂದಿದ್ದು ಈ ಸಂಸ್ಥೆಗೆ ಐಎಂಎನಿಂದ ನೀಡಲಾಗಿದ್ದ 1.5 ಕೋಟಿ ರೂ.ಗಳನ್ನು ಕೂಡ ಎಸ್‍ಐಟಿ ಅಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ರೌಡಿ ಶೀಟರ್ ಗನ್ ಮುನೀರ್ ಮತ್ತು ಬ್ರಿಗೇಡ್ ಬಾಬು ಸೇರಿದಂತೆ ಐವರು ರೌಡಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

Translate »