ಮೈಸೂರು,ಜು.11(ವೈಡಿಎಸ್)-ವೈಜ್ಞಾ ನಿಕ ಮತ್ತು ನವಶೋಧಗಳ ಸಂಶೋಧನಾ ಅಕಾಡೆಮಿ (ಎಸಿಎಸ್‍ಐಆರ್) ಕೇಂದ್ರ ಗಳಲ್ಲಿ ಶೀಘ್ರದಲ್ಲೇ ಇಂಡಸ್ಟ್ರಿ (ಕೈಗಾರಿಕೆ) ವಿಷಯದಲ್ಲಿ ಪಿಹೆಚ್.ಡಿ ಆರಂಭಿಸಲಾಗು ವುದು ಎಂದು ದೆಹಲಿಯ ಎಸಿಎಸ್ ಐಆರ್ ನಿರ್ದೇಶಕ ಪ್ರೊ.ಆರ್.ಎಸ್. ಸಾಂಗ್ವಾನ್ ತಿಳಿಸಿದರು.
ಸಿಎಫ್‍ಟಿಐಆರ್‍ನ ಚೆಲುವಾಂಬ ಸಭಾಂ ಗಣದಲ್ಲಿ ವೈಜ್ಞಾನಿಕ ಹಾಗೂ ನವಶೋಧ ಗಳ ಸಂಶೋಧನಾ ಅಕಾಡೆಮಿ (ಎಸಿಎಸ್ ಐಆರ್) ಹಾಗೂ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಸ್ಸಿ ಮತ್ತು ಐಎಸ್ ಎಂಟಿ ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾ ಡಿದ ಅವರು, ಡಾಕ್ಟರೇಟ್ ಮತ್ತು ಡಾಕ್ಟ ರೇಟ್‍ನ ನಂತರದ ಪದವಿ ಪಡೆಯಲು ಎಸಿಎಸ್‍ಐಆರ್ ಸಂಸ್ಥೆಯನ್ನು ಸ್ಥಾಪಿಸ ಲಾಗಿದ್ದು, ಸಿಎಸ್‍ಐಆರ್‍ನಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ನಿರ್ವಹಿಸುವ ಕೇಂದ್ರ ಸಂಸ್ಥೆಯಾಗಿ ರೂಪುಗೊಂಡಿದೆ. ಪ್ರಸ್ತುತ 4 ಸಾವಿರಕ್ಕೂ ಹೆಚ್ಚು ಸಂಶೋಧಕರು ಪಿಹೆಚ್.ಡಿ ಮಾಡುತ್ತಿದ್ದಾರೆ ಎಂದರು.
ಹಿಂದೆ ಆಹಾರ ವಿಭಾಗವನ್ನು ಒಂದು ತಂತ್ರ ಜ್ಞಾನವೆಂದು ಪರಿಗಣನೆಗೆ ತೆಗೆದುಕೊಂಡಿರ ಲಿಲ್ಲ. ಆದರೆ ಇಂದು ಆಹಾರ ತಂತ್ರಜ್ಞಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.
ಪದವಿ ಪ್ರದಾನ: ಎಂಎಸ್ಸಿ ಆಹಾರ ತಂತ್ರಜ್ಞಾನದ 25 ಹಾಗೂ ಐಎಸ್‍ಎಂಟಿ (ಅಂತರರಾಷ್ಟ್ರೀಯ ಗಿರಣಿ ತಂತ್ರಜ್ಞಾನ ಶಾಲೆ)ಯ 22 ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸ ಲಾಯಿತು. ಆಹಾರ ತಂತ್ರಜ್ಞಾನದ ಸಿಜಿ ಪಿಎ ವಿಭಾಗದ ವಿದ್ಯಾರ್ಥಿನಿ ನೇಹಾ ರಾವತ್‍ಗೆ 3, ವಿಶ್ವಮಿತ್ರ 1 ಚಿನ್ನದ ಪದಕ ಪಡೆದರೆ. ವರುಣ್ ಅರೋರ 1 ಬೆಳ್ಳಿ ಪದಕಗಳನ್ನು ಪಡೆದುಕೊಂಡರು. ಸಿಎಸ್‍ಐಆರ್-ಸಿಎಫ್‍ಟಿ ಆರ್‍ಐ ನಿರ್ದೇಶಕ ಡಾ. ಕೆ.ಎಸ್.ಎಂ.ಎಸ್. ರಾಘವರಾವ್, ಮಾನವ ಸಂಪನ್ಮೂಲಾ ಭಿವೃದ್ಧಿ ಮುಖ್ಯಸ್ಥ ಡಾ.ಆರ್.ಪಿ.ಸಿಂಗ್, ಡಾ. ಸುರೇಶ್ ಎಸ್.ಸಾಖರೆ ಉಪಸ್ಥಿತರಿದ್ದರು.