ಸುಪ್ರೀಮ್ ಫಾರ್ಮಾಸ್ಯುಟಿಕಲ್ಸ್‍ಗೆ ಅತ್ಯುತ್ತಮ ಭಾರತದ ಎಸ್‍ಎಂಇ 100 ಪ್ರಶಸ್ತಿ 
ಮೈಸೂರು

ಸುಪ್ರೀಮ್ ಫಾರ್ಮಾಸ್ಯುಟಿಕಲ್ಸ್‍ಗೆ ಅತ್ಯುತ್ತಮ ಭಾರತದ ಎಸ್‍ಎಂಇ 100 ಪ್ರಶಸ್ತಿ 

July 12, 2019

ಮೈಸೂರು, ಜು.11(ಪಿಎಂ)- ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದ ಸುಪ್ರೀಮ್ ಫಾರ್ಮಾಸ್ಯುಟಿಕಲ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ, ಭಾರತದ ಎಸ್‍ಎಂಇ ವೇದಿಕೆ, ಆಕ್ಸಿಸ್ ಬ್ಯಾಂಕ್ ಜಂಟಿ ಆಶ್ರಯ ದಲ್ಲಿ ಕೊಡಮಾಡುವ `ಅತ್ಯುತ್ತಮ ಭಾರತದ ಎಸ್‍ಎಂಇ 100 ಅವಾರ್ಡ್’ಗೆ ಭಾಜನ ವಾಗಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇ ಶಕ ಎಸ್.ಎನ್.ರಾವ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ದೇಶದ 100 ಉದ್ದಿಮೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ 34,011 ಕಂಪನಿಗಳು ಸ್ಪರ್ಧೆಯಲ್ಲಿದ್ದವು. ಈ ಪೈಕಿ ಕರ್ನಾಟಕದಿಂದ 14 ಕಂಪನಿಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಮೈಸೂರು ಮೂಲದಿಂದ ನಮ್ಮದೊಂದೇ ಕಂಪನಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದೆ. ಕಳೆದ ಜೂ.27ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಇನ್ನಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು ಎಂದರು. ಕಂಪನಿಯ ಗಿರೀಶ್‍ಕುಮಾರ್, ಆದಿತ್ಯ, ಅಮಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »