Tag: Mysore

ಮಂಟೇಸ್ವಾಮಿ ನುಡಿದ ಕಾಲಜ್ಞಾನದಂತೆ ಎಲ್ಲವೂ ನಡೆಯುತ್ತಿದೆ
ಮೈಸೂರು

ಮಂಟೇಸ್ವಾಮಿ ನುಡಿದ ಕಾಲಜ್ಞಾನದಂತೆ ಎಲ್ಲವೂ ನಡೆಯುತ್ತಿದೆ

July 2, 2019

ಮೈಸೂರು,ಜು.1(ಎಸ್‍ಪಿಎನ್)-ಕಲಿ ಯುಗದಲ್ಲಿ `ಬಾವಿಯಲ್ಲಿ ನೀರು ಬತ್ತಿ ಹೋಗುತ್ತದೆ, ಬಾವಿಗಳಿದ್ದರೂ ನೀರಿರಲ್ಲ, ಗಂಡಿದ್ದರೂ ಹೆಣ್ಣು ಸಿಗಲ್ಲ, ಹಾಲಿದ್ದರೂ ಮಕ್ಕಳು ಕುಡಿಯುವಂಥ ಹಾಲು ಸಿಗಲ್ಲ. ಒಟ್ಟಿನಲ್ಲಿ ಎಲ್ಲದ್ದಕ್ಕೂ ತೆರಿಗೆ ಕಟ್ಟುವ ಬಗ್ಗೆ ಮಂಟೇಸ್ವಾಮಿ ಕಾಲಜ್ಞಾನದಲ್ಲಿ ಉಲ್ಲೇಖ ವಿತ್ತು. ಇಂದು ಅದು ಸತ್ಯವಾಗಿದೆ ಎಂದು ಜಾನಪದ ಕಲಾವಿದ ಮಳವಳ್ಳಿ ಮಹಾ ದೇವಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ಸಪ್ತಸ್ವರ ಸಿಂಚನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು. ಮಂಟೇಸ್ವಾಮಿ ಹೇಳಿದ…

ನಗರ ಪ್ರದಕ್ಷಿಣೆ ಪೂರ್ವಭಾವಿ ಸಭೆಯಲ್ಲಿ ಅಸಮರ್ಪಕ ಮಾಹಿತಿ
ಮೈಸೂರು

ನಗರ ಪ್ರದಕ್ಷಿಣೆ ಪೂರ್ವಭಾವಿ ಸಭೆಯಲ್ಲಿ ಅಸಮರ್ಪಕ ಮಾಹಿತಿ

July 2, 2019

ಮೈಸೂರು,ಜು.1(ಎಸ್‍ಬಿಡಿ)- ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಮೈಸೂರು ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಎಸ್.ಎ.ರಾಮ ದಾಸ್ ಹಾಗೂ ತನ್ವೀರ್ ಸೇಠ್ ಹರಿಹಾಯ್ದ ಪ್ರಸಂಗ ಸೋಮವಾರ ನಡೆಯಿತು. ನಗರೋತ್ಥಾನ ಅನುದಾನದಡಿ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಸಾರ್ವ ಜನಿಕ ಸಮಸ್ಯೆ ಪರಿಶೀಲನೆ ನಿಟ್ಟಿನಲ್ಲಿ ನಾಳೆ(ಜು.2) `ಮೈಸೂರು ನಗರ ಪ್ರದಕ್ಷಿಣೆ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಪಾಲಿಕೆಯ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಚಿವ ಜಿ.ಟಿ.ದೇವೇ ಗೌಡರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ…

ಕನ್ನಡ ಭಾಷೆಯೊಂದಿಗೆ ಕೃಷಿ ಜ್ಞಾನ ಅಡಗಿದೆ
ಮೈಸೂರು

ಕನ್ನಡ ಭಾಷೆಯೊಂದಿಗೆ ಕೃಷಿ ಜ್ಞಾನ ಅಡಗಿದೆ

July 2, 2019

ಮೈಸೂರು, ಜು.1(ಎಂಟಿವೈ)- ಕನ್ನಡ ಭಾಷೆಯೊಳಗೆ ಜಾನಪದ ಭಾಷೆ ಸೇರಿ ರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆಯೊಳಗೆ ಕೃಷಿ ಜ್ಞಾನ ಅಡಗಿದೆ ಎಂದು ಬೆಂಗ ಳೂರು ವಿವಿ ಪ್ರಾಧ್ಯಾಪಕ ಪೆÇ್ರ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಸೋಮ ವಾರ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯ ಯನ ಕೇಂದ್ರ ಹಾಗೂ ಭಾರತೀಯ ಭಾಷಾ ಸಂಸ್ಥಾನದ ಸಂಯುಕ್ತಾಶ್ರಯದಲ್ಲಿ ಪದವಿ ಪೂರ್ವ ಉಪನ್ಯಾಸಕರಿಗಾಗಿ ಆಯೋಜಿ ಸಿದ್ದ `ಕನ್ನಡ ಪಠ್ಯ ಬೋಧನೆ ಮತ್ತು ತರ ಬೇತಿ’ ಕುರಿತ ಐದು ದಿನಗಳ…

ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆರ್.ಅಶೋಕ್ ಹುಟ್ಟುಹಬ್ಬ ಆಚರಣೆ
ಮೈಸೂರು

ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆರ್.ಅಶೋಕ್ ಹುಟ್ಟುಹಬ್ಬ ಆಚರಣೆ

July 2, 2019

ಮೈಸೂರು,ಜು.1(ಎಂಟಿವೈ)- ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಮ್ಮ ಹುಟ್ಟುಹಬ್ಬವನ್ನು ಮೈಸೂರಿನ ಜ್ಯೋತಿ ನಗರದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ಅನ್ನ ಸಂತರ್ಪಣೆ ಏರ್ಪಡಿಸುವ ಮೂಲಕ ಆಚರಿಸಿಕೊಂಡರು. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊ ಳ್ಳಲು ಭಾನುವಾರ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಶಾಸಕ ಆರ್.ಅಶೋಕ್ ಇಂದು ಬೆಳಿಗ್ಗೆ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಕಾಲ ಭೈರವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಮುಖಂಡ ರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬೆಟ್ಟದಿಂದ ಮೈಸೂರಿಗೆ…

ವಿದ್ಯಾರ್ಥಿಗಳು ಕೌಶಲಾಭಿವೃದ್ಧಿಯತ್ತ ಆಸಕ್ತಿ ವಹಿಸುವುದು ಅನಿವಾರ್ಯ
ಮೈಸೂರು

ವಿದ್ಯಾರ್ಥಿಗಳು ಕೌಶಲಾಭಿವೃದ್ಧಿಯತ್ತ ಆಸಕ್ತಿ ವಹಿಸುವುದು ಅನಿವಾರ್ಯ

July 2, 2019

ಮೈಸೂರು,ಜು.1- ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿಯತ್ತ ಹೆಚ್ಚು ಆಸಕ್ತಿ ವಹಿಸುವುದು ಉದ್ಯೋಗದ ದೃಷ್ಟಿಯಿಂದ ಬಹಳ ಅನಿ ವಾರ್ಯ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು. ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಹ ಯೋಗದಲ್ಲಿ ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆ ಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ದಲ್ಲಿ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಪ್ರತಿಭೆ ಎನ್ನುವುದು ಪ್ರತಿಯೊಬ್ಬ ರಲ್ಲೂ ಹುಟ್ಟಿದೊಡನೆ ಸ್ವಾಭಾವಿಕವಾಗಿ ಬಂದಿರುತ್ತದೆ. ಅದನ್ನು ವಿಕಸನಗೊಳಿಸಿಕೊಂಡು ಅರಿವಿನ ಬೆಳಕನ್ನು ತುಂಬಿಕೊಳ್ಳುವುದೇ ಶಿಕ್ಷಣ ಎಂದರು….

ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲ್ವೆ ನೂತನ ವೇಳಾಪಟ್ಟಿ ಬಿಡುಗಡೆ
ಮೈಸೂರು

ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲ್ವೆ ನೂತನ ವೇಳಾಪಟ್ಟಿ ಬಿಡುಗಡೆ

July 2, 2019

ಮೈಸೂರು, ಜು.1(ಎಂಕೆ)- 2019-20ರ ದಕ್ಷಿಣ ಪ್ರಾದೇಶಿಕ ರೈಲ್ವೆ ನೂತನ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿದರು. ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳೊಂದಿಗೆ ಆಯೋಜಿ ಸಿದ್ದ ವೀಡಿಯೊ ಕಾನ್ಫರೆನ್ಸ್‍ನಲ್ಲಿ ಮಾತನಾ ಡಿದ ಅವರು, ಕಳೆದ ವರ್ಷ ಹೊಸದಾಗಿ 20 ರೈಲುಗಳನ್ನು ನಿಯೋಜಿಸಲಾಗಿತ್ತು. ಇದರಲ್ಲಿ ವಾರದಲ್ಲಿ ಎರಡು ಬಾರಿ ಸಂಚ ರಿಸಿತ್ತಿದ್ದ ಜನಶತಾಬ್ದಿ ರೈಲನ್ನು 6 ದಿನಗಳಿಗೆ, 3 ಭಾರಿ ಇದ್ದ ಉದಯ ಎಕ್ಸ್‍ಪ್ರೆಸ್ (ಡಬಲ್ ಡೆಕ್ಕರ್) ರೈಲುಗಾಡಿಯನ್ನು…

ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿಗೆ ತಡೆ ನೀಡಲು ಸುಪ್ರೀಂ ನಕಾರ
ಮೈಸೂರು

ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿಗೆ ತಡೆ ನೀಡಲು ಸುಪ್ರೀಂ ನಕಾರ

July 2, 2019

ನವದೆಹಲಿ, ಜು. 1- ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಮೇಲ್ವರ್ಗದವರಿಗೆ ಮೀಸಲಾತಿಗೆ ತಡೆ ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‍ಎ ಬೊಬ್ಡೆ ಹಾಗೂ ಬಿಆರ್ ಗವಾಯಿ ಅವರು, ಈ ಕುರಿತು ಸುದೀರ್ಘ ವಿಚಾರಣೆಯ ಅಗತ್ಯ ಇದೆ ಎಂದು ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ…

ನ್ಯಾಯಾಲಯ ಆವರಣದಲ್ಲಿ ಹೃದಯಾಘಾತದಿಂದ ಕಕ್ಷಿದಾರ ಸಾವು
ಮೈಸೂರು

ನ್ಯಾಯಾಲಯ ಆವರಣದಲ್ಲಿ ಹೃದಯಾಘಾತದಿಂದ ಕಕ್ಷಿದಾರ ಸಾವು

July 2, 2019

ಮೈಸೂರು, ಜು.1(ಎಸ್‍ಬಿಡಿ)- ಮೈಸೂರು ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರ ನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೈಸೂರು ತಾಲೂಕು, ಮಂಡಕಳ್ಳಿ ನಿವಾಸಿ ಶಿವನಂಜಯ್ಯ ಅವರ ಪುತ್ರ ಎಸ್.ನಂದೀಶ(36) ಮೃತಪಟ್ಟ ಕಕ್ಷಿದಾರ. ಪ್ರಕರಣವೊಂದರ ವಿಚಾರಣೆಗೆಂದು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಬಂದಿದ್ದ ಸಂದರ್ಭದಲ್ಲಿ ಹೃದಯಾಘಾತ ವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರೆಂದು ತಿಳಿದುಬಂದಿದೆ. ಆರೋಗ್ಯ ಕೇಂದ್ರಕ್ಕೆ ಆಗ್ರಹ: ನ್ಯಾಯಾಲಯದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕೆಂಬ ದಶಕದ ಬೇಡಿಕೆಯನ್ನು ನಿರ್ಲಕ್ಷಿಸಿರುವ ಪರಿಣಾಮ ಇಂದು ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹೃದಯಾಘಾತವಾದಾಗ ಕೂಡಲೇ ಪ್ರಾಥಮಿಕ ಚಿಕಿತ್ಸೆ…

ಮೈಸೂರಿನ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನೆನೆಗುದಿಗೆ
ಮೈಸೂರು

ಮೈಸೂರಿನ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ನೆನೆಗುದಿಗೆ

July 1, 2019

ಮೈಸೂರು, ಜೂ. 30- 2030ರ ವೇಳೆಗೆ ಮೈಸೂರು ನಗರದ ಜನಸಂಖ್ಯೆ 25 ಲಕ್ಷಕ್ಕೇರಬಹುದು ಎಂಬುದನ್ನು ಗುರಿಯಾಗಿರಿಸಿಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರವು ಕೆ.ಆರ್.ಮೋಹನ್‍ಕುಮಾರ್ ಅವರು ಅಧ್ಯಕ್ಷ ರಾಗಿದ್ದಾಗ ಮೈಸೂರು ನಗರದಲ್ಲಿ ಮತ್ತೊಂದು ಪೆರಿ ಫೆರಲ್ ರಿಂಗ್ ರಸ್ತೆ ನಿರ್ಮಿಸುವ 750 ಕೋಟಿ ರೂ. ಅಂದಾಜು ವೆಚ್ಚದ ಮಹತ್ವದ ಯೋಜನೆಗೆ 2016ರಲ್ಲಿ ಮುಂದಾಗಿತ್ತು. ಆದರೆ ಈ ಯೋಜನೆಗೆ ಸಮೀಕ್ಷೆಯೇ ನಡೆಯದೇ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಇರುವ ಹೊರ ವರ್ತುಲ ರಸ್ತೆಯಿಂದ 5 ರಿಂದ 8 ಕಿ.ಮೀ. ದೂರದಲ್ಲಿ ಪೆರಿಫೆರಲ್…

ರನ್‍ವೇ ಬಿಟ್ಟು ಹೊರ ಬಂದ ವಿಮಾನ
ಮೈಸೂರು

ರನ್‍ವೇ ಬಿಟ್ಟು ಹೊರ ಬಂದ ವಿಮಾನ

July 1, 2019

ಮಂಗಳೂರು, ಜೂ.30-ಇಲ್ಲಿನ ಬಜ್ಜೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ರನ್ ವೇಯಿಂದ ಹೊರ ಬಂದಿದ್ದು, ಪೈಲಟ್‍ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, 183 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್-380 ವಿಮಾನವು ಸಂಜೆ 5.40ಕ್ಕೆ ಲ್ಯಾಂಡ್ ಆಗಬೇಕಾಗಿತ್ತು. ವಿಮಾನವು ಲ್ಯಾಂಡ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿ ರನ್ ವೇಯಿಂದ ಹೊರ ಬಂದು ಟ್ಯಾಕ್ಸ್ ಮಾರ್ಗಕ್ಕೆ ನುಗ್ಗಿದೆ. ಅಪಾಯದ ಸೂಚನೆ ಅರಿತ ಪೈಲಟ್ ಹರಸಾಹಸ ಪಟ್ಟು ವಿಮಾನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ….

1 249 250 251 252 253 330
Translate »