ಮೈಸೂರು: ಪವರ್‍ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ, ರೈತರ ತೋಟಗಳ ಮೇಲೆ ಮತ್ತು ಭೂಮಿಯ ಮಧ್ಯೆ ಭಾಗದಲ್ಲಿಯೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗುತ್ತಿ ರುವುದರಿಂದ ರೈತರಿಗೆ ಆಗಿರುವ ನಷ್ಟ ಮತ್ತು ತೊಂದರೆಗಳಿಂದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ನೂರಾರು ರೈತರು ಜೂ.11 ರಂದು ಬೆಳಿಗ್ಗೆ 11 ಗಂಟೆಗೆ ಮೈದನಹಳ್ಳಿ ಬಳಿ ಇರುವ ಪವರ್ ಗ್ರಿಡ್ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸ ಕೋಟೆ ಬಸವರಾಜು ಇಂದಿಲ್ಲಿ ತಿಳಿಸಿದರು….
ಇಂದು, ನಾಳೆ ಮೈಸೂರಿನ ಕೆಲವೆಡೆನೀರು ಸರಬರಾಜಿನಲ್ಲಿ ವ್ಯತ್ಯಯ
June 8, 2019ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2ನೇ ಹಾಗೂ 3ನೇ ಹಂತ ಮತ್ತು ಬೆಳಗೊಳ ಯಂತ್ರಾ ಗಾರಕ್ಕೆ ಜೂ.8 ಹಾಗೂ 9ರಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಸರಬ ರಾಜು ನಿಲುಗಡೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪಂಪು ಮಾಡಲು ಸಾಧ್ಯವಾಗದೆ ಇರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಜೂನ್ 8 ಹಾಗೂ 9 ರಂದು ವಾರ್ಡ್ ನಂ. 1ರಿಂದ 6, ವಾರ್ಡ್ ನಂ.20, 23, 38, ವಾರ್ಡ್ ನಂ.42…
ಪರಿಸರಕ್ಕೆ ಪೂರಕವಾದ ಚಟುವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿದರೆ ಏನು ಪ್ರಯೋಜನ?
June 8, 2019ಮೈಸೂರು: ಭಾರತ ಸಂವಿಧಾನ ವೈಜ್ಞಾನಿಕ ಮನೋಭಾವ ಎತ್ತಿ ಹಿಡಿದಿದ್ದರೆ, ಆಡಳಿತ ವರ್ಗ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡಿಸಲು ಮುಂದಾಗಿದ್ದು, ಪರಿಸರಕ್ಕೆ ಪೂರಕ ಚಟು ವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿಸಿ ದರೆ ಏನು ಪ್ರಯೋಜನ? ಎಂದು ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ದೀನಬಂಧು ಚಾರಿಟಬಲ್ ಟ್ರಸ್ಟ್ ವತಿ ಯಿಂದ ಕೊಡಗು ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 4 ದಿನ ಗಳ ಪ್ರೇರಣಾ ಶಿಬಿರ `ಸ್ಫೂರ್ತಿ-2019’ಕ್ಕೆ…
ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡ ಉದ್ಘಾಟನೆ
June 8, 2019ಮೈಸೂರು:ಮೈಸೂರಿನ ವಿಶ್ವೇಶ್ವರ ನಗರದಲ್ಲಿ ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡವನ್ನು ಮೆಟ್ರೋಪಾಲಿಟನ್ ಆಫ್ ದಿ ಮಾರ್ ಥೋಮ ಸಿರಿಯನ್ ಚರ್ಚ್ ಹಾಗೂ ವಿದ್ಯಾಸಂಸ್ಥೆ ಪೋಷಕ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಶುಕ್ರವಾರ ಉದ್ಘಾ ಟಿಸಿದರು. ಮಾರ್ ಥೋಮ ಶಿಕ್ಷಣ ಸೊಸೈಟಿಯ ಸೆಂಟ್ ಥಾಮಸ್ ವಿದ್ಯಾಸಂಸ್ಥೆ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೀನಿಯರ್ ಸೆಕೆಂಡರಿ ಬ್ಲಾಕ್ ಕಟ್ಟಡವನ್ನು ಮಾರ್ ಥೋಮ ಶಿಕ್ಷಣ ಸೊಸೈಟಿ ಅಧ್ಯಕ್ಷ ರೆ.ಡಾ.ಮ್ಯಾಥ್ಯೂಸ್ ಮಾರ್ ಮಕರ ರಿಯೋಸ್ ಅವರ ಉಪಸ್ಥಿತಿಯಲ್ಲಿ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಅವರು…
ಮೈಸೂರಿನ ಮೂವರು ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಪ್ರಶಸ್ತಿ
June 8, 2019ಮೈಸೂರು: ಸೈನ್ಸ್ ಒಲಂಪಿಯಾಡ್ ಫೌಂಡೇಷನ್ 2018-19 ಸ್ಪರ್ಧೆಯಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನ ರಾಯಲ್ ಕಾನ್ ಕಾರ್ಡ್ ಇಂಟರ್‍ನ್ಯಾಷನಲ್ ಸ್ಕೂಲ್‍ನ 1ನೇ ತರಗತಿ ವಿದ್ಯಾರ್ಥಿ ಎಂ. ಮೊನಿಷಾ ರಾಜ್, ಅಂತಾರಾಷ್ಟ್ರೀಯ ಮ್ಯಾಥ ಮ್ಯಾಟಿಕ್ಸ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ, ವಿದ್ಯಾವಿಕಾಸ್ ಪ್ರೌಢ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಮಯಾಂಕ್ ಎಸ್.ಅಥೇರಿಯಾ ಮತ್ತು ಎಂ.ಕೆ.ಸಾಕೇತ್ ಅಂತಾರಾಷ್ಟ್ರೀಯ ಇಂಗ್ಲಿಷ್ ಒಲಂಪಿ ಯಾಡ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ ಪಡೆದು…
ಸಿಐಇಎಲ್ ಮಾನವ ಸಂಪನ್ಮೂಲ ಸೇವೆ ಶಾಖೆ ಉದ್ಘಾಟನೆ
June 8, 2019ಮೈಸೂರು: ಕಂಪನಿ ಬೆಳವಣಿಗೆ ಮತ್ತು ಯುವ ಉದ್ಯೋಗಸ್ಥರ ವೃತ್ತಿ ಜೀವನ ಗಮನದಲ್ಲಿಟ್ಟುಕೊಂಡು ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಿಐಇಎಲ್ ಹೆಚ್‍ಆರ್ ಸರ್ವೀಸ್‍ನ ನಿರ್ದೇಶಕ ಆದಿತ್ಯ ನಾರಾಯಣ್ ಮಿಶ್ರ ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ `ಎರಡನೇ ಹಂತದ ನಗರಗಳಲ್ಲಿ ನೌಕರಿ ತೊರೆಯುವ ಪ್ರವೃತ್ತಿ ಹಾಗೂ ಇದನ್ನು ತಡೆಗಟ್ಟುವ ವಿಧಾನಗಳು’ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಿಐಇಎಲ್ ಹೆಚ್‍ಆರ್ (ಮಾನವ ಸಂಪನ್ಮೂಲ) ಸರ್ವೀಸ್‍ನ ಮೈಸೂರು ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ…
ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆ ಇಂದು ಉದ್ಘಾಟನೆ
June 7, 2019ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಸಂಪರ್ಕ ಯೋಜನೆ ಯಡಿಯಲ್ಲಿ ಎರಡನೇ ವಿಮಾನ ಸೇವೆಯ ಉದ್ಘಾ ಟನಾ ಕಾರ್ಯಕ್ರಮ (ಜೂನ್ 7) ಬೆಳಿಗ್ಗೆ 11 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆಯಲಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಉದ್ಘಾ ಟನೆ ಮಾಡುವರು. ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಸಂಸದ ಪ್ರತಾಪ್‍ಸಿಂಹ ಅವರು ಉಪಸ್ಥಿತರಿರುವರು. ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಪಲತಾಜಗನ್ನಾಥ್, ಕೇಂದ್ರ ಸರ್ಕಾರದ…
ಜೂ.10ರವರೆಗೆ ರಾಜ್ಯದ ವಿವಿಧೆಡೆ ಭಾರೀ ಮಳೆ
June 7, 2019ಬೆಂಗಳೂರು: ರಾಜ್ಯದ ವಿವಿಧೆಡೆ ಜೂನ್ 10ರವರೆಗೆ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂ ಚನೆ ನೀಡಿದೆ. ಶುಕ್ರವಾರ ಮುಂಜಾನೆಯವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ 8, 9 ಹಾಗೂ 10ರಂದು ಕೂಡ ಭಾರಿ ವರ್ಷಧಾರೆ ಮುಂದುವರಿಯಲಿದ್ದು, ದಕ್ಷಿಣ ಒಳ ನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ,…
ಮಾಜಿ ಶಾಸಕ ಎಂ.ಸತ್ಯನಾರಾಯಣ್ ವಿಧಿವಶ
June 7, 2019ಮೈಸೂರು: ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಸತ್ಯನಾರಾಯಣ ಅವರು ಗುರುವಾರ ರಾತ್ರಿ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಕೆಲ ದಿನಗಳ ಹಿಂದೆ ಮೈಸೂ ರಿನ ಇಲವಾಲ ಸಮೀಪದ ನಂಜಮ್ಮ ಜವರೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೈಸೂರು ತಾಲೂಕು ಗುಂಗ್ರಾಲ್ ಛತ್ರ ಗ್ರಾಮದವರಾದ ಎಂ.ಸತ್ಯನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಇವರಿಬ್ಬರೂ ಒಂದೇ ಸಮಯದಲ್ಲಿ ತಾಲೂಕು ಬೋರ್ಡ್…
ನಿಫಾ ವೈರಸ್ ಸಂಬಂಧ ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ
June 7, 2019ಮೈಸೂರು: ಬಾವಲಿ ಜ್ವರ (ನಿಫಾ ವೈರಸ್) ಹರಡದಂತೆ ಮುಂಜಾಗ್ರತಾ ಕ್ರಮ ವಾಗಿ ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಕಾಣಿಸಿ ಕೊಂಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿಫಾ ವೈರಸ್ ಹರಡಬಹುದೆಂದು ಶಂಕಿಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೂನ್ 4ರಂದು ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಆರೋಗ್ಯಾ ಧಿಕಾರಿಗಳು…










