ಮೈಸೂರು: ಮೈಸೂ ರಿನ ಆಲನಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿನ 6 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇಂದು ಬೆಳಿಗ್ಗೆ ವಾಯುವಿಹಾರಿಗಳು ಅಂಗಡಿಗಳ ರೋಲಿಂಗ್ ಶೆಟರ್ ಮೀಟಿರು ವುದನ್ನು ಕಂಡು ಆಲನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಜರು ನಡೆಸಿದಾಗ ಕಳವಿಗೆ ಯತ್ನಿಸಿದ್ದು, ಅಲ್ಲಿ ಹಣವಾಗಲೀ, ವಸ್ತುಗಳನ್ನಾಗಲೀ ಕಳವು ಮಾಡಿಲ್ಲ ಎಂಬುದು ತಿಳಿಯಿತು. ನಗದನ್ನು ಖದೀಮರು ಶೋಧಿಸಿದ್ದು, ಅಲ್ಲಿ ಹಣ ಇರಲಿಲ್ಲ…
ಹಿರಿಯರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರಿನ ದಿಯಾ ಅರಸ್‍ಗೆ ಚಿನ್ನದ ಪದಕ
June 9, 2019ಮೈಸೂರು:ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರಿನ ಕರಾಟೆ ಪಟು ದಿಯಾ ಅರಸ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ 2019ರ ಜೂ.2ರಂದು ಆಯೋ ಜಿಸಿದ್ದ ಕರಾಟೆ ಪಂದ್ಯಾವಳಿಯಲ್ಲಿ ದಿಯಾ ಅರಸ್ ಅವರು ವೈಯಕ್ತಿಕ ಕಟಾ ವಿಭಾಗದಲ್ಲಿ 24.8 ಅಂಕ ಗಳಿಸಿ ಚಿನ್ನದ ಪದಕ ಪಡೆದುಕೊಂಡರೆ, ದಾವಣ ಗೆರೆಯ ಜಮುನಾ ಶುಕ್ಲಾ 22.6 ಅಂಕ ಗಳಿಸಿ ಬೆಳ್ಳಿ ಹಾಗೂ ದಕ್ಷಿಣ ಕನ್ನಡದ ಸವಿತಾ 20.7 ಅಂಕ ಪಡೆದು…
ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿರುವುದಕ್ಕೆ ಹಿರಿಯ ನಟ ಶ್ರೀನಾಥ್ ವಿಷಾದ
June 9, 2019ಮೈಸೂರು: ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿಗೆ ಬಂದಿರುವುದನ್ನು ಕೇಳಿದರೆ ಮನಸ್ಸಿಗೆ ಸಂಕಟವಾಗುತ್ತದೆ ಎಂದು ಹಿರಿಯ ಚಲನಚಿತ್ರ ನಟ ಶ್ರೀನಾಥ್ ವಿಷಾದಿಸಿದರು. ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ಡಾ.ರಾಜ್‍ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‍ಕುಮಾರ್ ಅವರ 90ನೇ ಜನ್ಮ ದಿನೋತ್ಸವದ ಅಂಗ ವಾಗಿ ಆಯೋಜಿಸಿದ್ದ ‘ಮೈಸೂರಲ್ಲಿ ರಾಜ ಸಂಭ್ರಮ’ ಸಂಗೀತ ರಸ ಸಂಜೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ಹಲವಾರು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿ ಗಳೇ ಇಲ್ಲವಾಗಿದ್ದಾರೆ. ಕನ್ನಡ ಭಾಷೆಯೆಂದರೆ ಸದಾ…
ಕಿರಿಯ ವಯಸ್ಸಲ್ಲೇ ಕರಾಟೆಯಲ್ಲಿ ಅಶ್ವಿನಿಯ ಹಿರಿಯ ಸಾಧನೆ
June 9, 2019ಮೈಸೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಹಿರಿಯರ ಗಾದೆ ಮಾತಿನಂತೆ, ನಾವು ಚಿಕ್ಕಂದಿನಿಂದಲೇ ಮಕ್ಕಳನ್ನು ಯಾವ ವಾತಾವರಣದಲ್ಲಿ ಬೆಳೆಸುತ್ತೇವೆ ಎಂಬು ದರ ಮೇಲೆ ಅವರ ಭವಿಷ್ಯದ ಬದುಕು ನಿಂತಿರುತ್ತದೆ. ಇದಕ್ಕೆ ಇಂಬು ನೀಡುವಂತೆ 4ನೇ ತರಗತಿ ವ್ಯಾಸಂಗ ಮಾಡುತ್ತಿರುವಾಗಲೇ ತಂದೆಯ ಆಸೆಯಂತೆ ಕರಾಟೆಯ ಅಭ್ಯಾಸ ಆರಂಭಿಸಿ ಎಸ್.ಅಶ್ವಿನಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಜ್ಯದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಶ್ರೀರಾಂಪುರ ನಿವಾಸಿ ಶ್ರೀರಂಗ ಮತ್ತು ಮಂಜುಳಾ ದಂಪತಿ ಪುತ್ರಿ ಅಶ್ವಿನಿ, ಸದ್ಯ ಹಾಸನದಲ್ಲಿ ಹೋಂ…
ರಸ್ತೆಯಲ್ಲಿ ಅಪಾಯಕಾರಿ ಹೊಂಡ
June 9, 2019ಮೈಸೂರು: ಮೈಸೂರಿನ ಬನ್ನಿಮಂಟಪ ಜೋಡಿ ತೆಂಗಿನಮರ ಸ್ಮಶಾನ ರಸ್ತೆಯಲ್ಲಿ ಆಳವಾದ ಹೊಂಡ ನಿರ್ಮಾಣವಾಗಿದೆ. ಸಿಮೆಂಟ್ ಗೋಡೌನ್ ಸಮೀಪ ಮ್ಯಾನ್‍ಹೋಲ್ ಪಕ್ಕದಲ್ಲೇ ರಸ್ತೆ ಕುಸಿದು, ಹೊಂಡ ಬಿದಿದ್ದು, ಜೀವ ಬಲಿ ಗಾಗಿ ಕಾದಿರುವಂತಿದೆ. ರೈಲ್ವೆ ಗೂಡ್ಸ್ ಶೆಡ್‍ನಿಂದ ಸರಕು ಸಾಗಿಸುವ ನೂರಾರು ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿ ಸುತ್ತವೆ. ಹೈವೇ ವೃತ್ತದ ಕಡೆಯಿಂದ ಕರಕುಶ ಲನಗರ, ಬಿ.ಎಂ.ಶ್ರೀನಗರ, ರಿಂಗ್‍ರಸ್ತೆಗೆ ಹೋಗುವ ವಾಹನಗಳೂ ಇಲ್ಲೇ ಸಾಗು ತ್ತವೆ. ನಿರಂತರವಾಗಿ ದ್ವಿಚಕ್ರ ವಾಹನ ಗಳೂ ಓಡಾಡುತ್ತಿರುತ್ತವೆ. ರಸ್ತೆ ಕುಸಿದಿರುವುದನ್ನು ದೂರದಲ್ಲೇ ಗುರುತಿಸಲಾಗುವುದಿಲ್ಲ….
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮೂವರ ಬಂಧನ, ಇಬ್ಬರು ಪರಾರಿ
June 9, 2019ಮೈಸೂರು: ಮೈಸೂರಿನ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ ವಿಭಾಗ ಹಾಗೂ ಮೇಟಗಳ್ಳಿ ಠಾಣೆ ಪೊಲೀಸರು, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ಮೈಸೂರಿನ ಬಿ.ಎಂ.ಶ್ರೀನಗರ, 2ನೇ ಮುಖ್ಯರಸ್ತೆಯಲ್ಲಿ ಮಂಜುಳ ಹಾಗೂ ಮಂಜು ನಾಥ್ ದಂಪತಿ, ವಾಸಕ್ಕೆಂದು ಬಾಡಿಗೆಗೆ ಪಡೆದಿದ್ದ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿ ದ್ದರು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಮಧ್ಯಾಹ್ನ ಮೇಟಗಳ್ಳಿ ಪೊಲೀಸರೊಂದಿಗೆ ದಾಳಿ…
ಕಾರು ಡಿಕ್ಕಿ: ಬೈಕ್ ಸವಾರ ಸಾವು
June 9, 2019ಮೈಸೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೈಸೂರಿನ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮೈಸೂರಿನ ಕೂರ್ಗಳ್ಳಿ ನಿವಾಸಿ ಸೋಮ ಶೇಖರ್(27) ಅಪಘಾತದಲ್ಲಿ ಮೃತಪಟ್ಟವರು. ಸ್ವಿಗ್ಗಿ ಫುಡ್ ಡೆಲಿವರಿ ಸರ್ವೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇವರು, ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ತಮ್ಮ ಹೀರೋ ಸ್ಪ್ಲೆಂಡರ್ ಬೈಕ್(ಕೆಎ-09, ಹೆಚ್‍ಆರ್-8219)ನಲ್ಲಿ ಕೆ.ಆರ್.ವೃತ್ತದಿಂದ ಹಾರ್ಡಿಂಜ್ ವೃತ್ತದ ಕಡೆಗೆ ಹೋಗುತ್ತಿದ್ದಾಗ ಆಲ್ಬರ್ಟ್ ವಿಕ್ಟರ್ ರಸ್ತೆ, ಡಾ.ರಾಜ್ ಕುಮಾರ್ ಉದ್ಯಾನದ ಬಳಿ ಎದುರಿನಿಂದ ವೇಗವಾಗಿ ಬಂದ…
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ:ಅರ್ಜಿ ಆಹ್ವಾನ
June 9, 2019ಮೈಸೂರು,ಜೂ.8-ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯ ಬಯಸುವವರಿಗೆÀ ಅರ್ಜಿ ಆಹ್ವಾನಿಸಿದೆ. ಸ್ವಯಂ ಉದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವ್ಯಾಸಂಗದ ಕೋರ್ಸ್‍ಗಳು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಗಂಗಾ-ಕಲ್ಯಾಣ ನೀರಾವರಿ ಯೋಜನೆಗಳು ಲಭ್ಯವಿದೆ. ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದವರಾಗಿ ರಬೇಕು, ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು…
ಮನುಷ್ಯನ ಮನೋ ಮಾಲಿನ್ಯ ಹೆಚ್ಚು ಅಪಾಯಕಾರಿ: ಬನ್ನೂರು ಕೆ.ರಾಜು
June 9, 2019ಮೈಸೂರು: ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ, ಆಹಾರ ಮಾಲಿನ್ಯ ಈ ಎಲ್ಲಾ ಮಾಲಿನ್ಯಗಳಿ ಗಿಂತಲೂ ಮನುಷ್ಯನ ಮನೋ ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದ್ದು, ಈ ಅಪಾಯಕಾರಿ ವಿಕೃತಿಯಿಂದ ಪರಿಸರ ಹಾಳಾಗುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಕಳವಳ ವ್ಯಕ್ತಪಡಿಸಿದರು. “ಹಿರಣ್ಮಯಿ ಪ್ರತಿಷ್ಠಾನ, ಕಾವೇರಿ ಬಳಗ ಹಾಗೂ ಹುಣಸೂರು ತಾಲೂಕಿನ ಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣ ದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾ ಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪರಿಸರ…
ಮಳೆಗಾಗಿ ವಿಶೇಷ ಪೂಜೆ
June 9, 2019ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಾಡಿನಲ್ಲಿ ಉತ್ತಮ ಮಳೆಯಾಗಲಿ ಎಂದು ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರ ದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ರೈತಾಪಿ ವರ್ಗ ಸಾಲ ಮಾಡಿಕೊಳ್ಳದೇ ನೆಮ್ಮದಿಯಿಂದ ಇರಬೇಕಾದರೆ ಸಕಾಲದಲ್ಲಿ ಮಳೆಯಾಗಬೇಕು. ಜೀವನದಿ ಕಾವೇರಿ ಹರಿಯುವ ಪ್ರದೇಶ ಮತ್ತು ಜಲಾಶಯಗಳು ತುಂಬಿ ಹರಿಯಬೇಕು. ಅದಕ್ಕೆ ವರುಣ ಕೃಪೆ ತೋರಬೇಕು. ಹೀಗಾಗಿ ಇಂದು ಕಾವೇರಿ…










