ಮನುಷ್ಯನ ಮನೋ ಮಾಲಿನ್ಯ ಹೆಚ್ಚು ಅಪಾಯಕಾರಿ: ಬನ್ನೂರು ಕೆ.ರಾಜು
ಮೈಸೂರು

ಮನುಷ್ಯನ ಮನೋ ಮಾಲಿನ್ಯ ಹೆಚ್ಚು ಅಪಾಯಕಾರಿ: ಬನ್ನೂರು ಕೆ.ರಾಜು

June 9, 2019

ಮೈಸೂರು: ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ, ಆಹಾರ ಮಾಲಿನ್ಯ ಈ ಎಲ್ಲಾ ಮಾಲಿನ್ಯಗಳಿ ಗಿಂತಲೂ ಮನುಷ್ಯನ ಮನೋ ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದ್ದು, ಈ ಅಪಾಯಕಾರಿ ವಿಕೃತಿಯಿಂದ ಪರಿಸರ ಹಾಳಾಗುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಕಳವಳ ವ್ಯಕ್ತಪಡಿಸಿದರು.

“ಹಿರಣ್ಮಯಿ ಪ್ರತಿಷ್ಠಾನ, ಕಾವೇರಿ ಬಳಗ ಹಾಗೂ ಹುಣಸೂರು ತಾಲೂಕಿನ ಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣ ದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾ ಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪರಿಸರ ಉಳಿಯಬೇಕಾ ದರೆ ಮನುಷ್ಯನ ಮನಸ್ಥಿತಿ ಮೊದಲು ಬದಲಾಗಬೇಕು. ಹಿಂದೆ ನಮ್ಮ ಪ್ರಾಚೀ ನರು ವಾಯುದೇವನೆಂದು ಗಾಳಿಯನ್ನು, ಮಳೆ ದೇವನೆಂದು ವರುಣನನ್ನು, ಭೂ ದೇವಿ ಎಂದು ಭೂಮಿ ತಾಯಿಯನ್ನು ಆರಾಧಿಸುತ್ತಾ ಪ್ರಕೃತಿಯನ್ನು ಪೂಜನೀ ಯವಾಗಿ ನೋಡುತ್ತಿದ್ದರು. ಆದರೆ ಇಂದು ಇಂತಹ ಭಾವನೆ ಮನುಷ್ಯರಲ್ಲಿ ಮರೆಯಾಗುತ್ತಿದೆ. ಹಾಗಾಗಿ ಪರಿಸರದ ಮೇಲೆ ತನ್ನ ಮನೋ ವಿಕೃತಿಯಿಂದ ಮನುಷ್ಯ ಹಲವಾರು ರೀತಿಯಲ್ಲಿ ದೌರ್ಜನ್ಯ ಎಸಗುತ್ತಿದ್ದಾನೆ. ಇದರ ಪ್ರತಿ ಫಲದಿಂದಲೇ ಪರಿಸರ ಹಾಳಾಗುತ್ತಿದೆ. ಪರಿಸರ ಅಳಿದರೆ ಯಾವ ಜೀವ ಸಂಕು ಲಕ್ಕೂ ಉಳಿಗಾಲವಿಲ್ಲ. ಆದ್ದರಿಂದ ಪರಿಸರದ ಮೇಲೆ ಪೂಜನೀಯ ಭಾವನೆ ಮಾನವನಲ್ಲಿ ಮರುಕಳಿಸಿದರೆ ಪರಿಸರ ಸಂರಕ್ಷಣೆ ಕಾರ್ಯ ಸುಲಭವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ ಎಂದರು.

ಖ್ಯಾತ ಚಿತ್ರಕಲಾವಿದೆ ಡಾ.ಜಮುನಾ ರಾಣಿ ಮಿರ್ಲೆ ಮಾತನಾಡಿ, ವಿದ್ಯಾರ್ಥಿ ಗಳ ಪ್ರತಿಭಾ ವಿಕಾಸಕ್ಕೆ ಬಹುಮುಖಿ ಆಯಾಮಗಳಿದ್ದು ಇದನ್ನು ಪಠ್ಯದ ಜತೆ ಜತೆಯಲ್ಲಿ ಬಳಸಿಕೊಂಡು ಸಾಧನೆ ತೋರಬೇಕು ಎಂದ ಅವರು, ಚಿತ್ರಕಲೆ ಮತ್ತು ನೃತ್ಯ ಕಲೆಯ ಬಗ್ಗೆ ವಿಶೇಷವಾಗಿ ಕಲಿಯಲು ಅನುಕೂಲವಾಗುವ ಹಾಗೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಪರಿಸರ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡ ನೆಟ್ಟು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎನ್.ಎಸ್.ಗೀತಾ ಅಧ್ಯಕ್ಷತೆ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ವಿಶ್ರಾಂತ ಇಂಜಿನಿಯರ್ ಗೋವಿಂದೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »