ಮಳೆಗಾಗಿ ವಿಶೇಷ ಪೂಜೆ
Uncategorized, ಮೈಸೂರು

ಮಳೆಗಾಗಿ ವಿಶೇಷ ಪೂಜೆ

June 9, 2019

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಾಡಿನಲ್ಲಿ ಉತ್ತಮ ಮಳೆಯಾಗಲಿ ಎಂದು ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರ ದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ವೇಳೆ ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ರೈತಾಪಿ ವರ್ಗ ಸಾಲ ಮಾಡಿಕೊಳ್ಳದೇ ನೆಮ್ಮದಿಯಿಂದ ಇರಬೇಕಾದರೆ ಸಕಾಲದಲ್ಲಿ ಮಳೆಯಾಗಬೇಕು. ಜೀವನದಿ ಕಾವೇರಿ ಹರಿಯುವ ಪ್ರದೇಶ ಮತ್ತು ಜಲಾಶಯಗಳು ತುಂಬಿ ಹರಿಯಬೇಕು. ಅದಕ್ಕೆ ವರುಣ ಕೃಪೆ ತೋರಬೇಕು. ಹೀಗಾಗಿ ಇಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗುತ್ತಿದೆ ಎಂದು ಹೇಳಿದರು.

ಮುಜರಾಯಿ ಇಲಾಖೆಯ ತಹಸೀಲ್ದಾರ್ ಯತಿರಾಜ್ ಮಾತನಾಡಿ, ನೂರಾರು ವರ್ಷಗಳ ಹಿಂದೆ ಕೆರೆ-ಕಟ್ಟೆಯಿಂದ ನೀರನ್ನು ತರುತ್ತಿದ್ದೆವು. ಆದರೆ ಇಂದು ಮನೆಯಲ್ಲಿ ಕೊಳಾಯಿ ತಿರುಗಿಸಿದರೇ ಕಾವೇರಿ ನೀರು ಬರುವಂತಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಮತ್ತು ದಿವಾನ್ ಸರ್ ಎಂ.ವಿಶ್ವೇಶ್ವರಯ್ಯರ ಕಾರ್ಯತಂತ್ರದಿಂದ ಕಾವೇರಿ ಜಲಾಶಯ ನಿರ್ಮಾಣವಾಯಿತು. ಇದರಿಂದ ಕೋಟ್ಯಾಂತರ ಜನರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಘದ ಅಪೂರ್ವ ಸುರೇಶ್, ಬಾಲಕೃಷ್ಣ, ಹರೀಶ್, ವಿಕ್ರಂ ಅಯ್ಯಂಗಾರ್, ಮುಳ್ಳೂರು ಗುರುಪ್ರಸಾದ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಕೃಷ್ಣ, ಕಡಕೊಳ ಜಗದೀಶ್, ವಿಜಯಕುಮಾರ್, ಪ್ರಶಾಂತ್, ಪೆÇೀಟೊ ಗಣೇಶ್, ಮಂಜುನಾಥ್, ಶ್ರೀಕಾಂತ್ ಕಶ್ಯಪ್, ಸುಮಂತ್ ಶಾಸ್ತ್ರಿ ಮತ್ತಿತರರು ಹಾಜರಿದ್ದರು.

Translate »