ತುಂಡು ಗುತ್ತಿಗೆಗಾಗಿ ಸಚಿವ ಸಾರಾಗೆ ವಿದ್ಯುತ್ ಗುತ್ತಿಗೆದಾರರ ಮನವಿ
ಮೈಸೂರು

ತುಂಡು ಗುತ್ತಿಗೆಗಾಗಿ ಸಚಿವ ಸಾರಾಗೆ ವಿದ್ಯುತ್ ಗುತ್ತಿಗೆದಾರರ ಮನವಿ

June 9, 2019

ಮೈಸೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವ ರಿಗೆ ತುಂಡು ಗುತ್ತಿಗೆ ನೀಡುವ ಸಂಬಂಧ ಸರ್ಕಾರದ ಗಮನ ಸೆಳೆಯುವಂತೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರಿಗೆ ಸಂಘದ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು.

ಮೈಸೂರಿನ ಜೆಕೆ ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವದ ಭವನ ದಲ್ಲಿ ಸಂಘದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಸ್ಥಳೀಯರಿಗೆ ಸರ್ಕಾರದ ವಿದ್ಯುತ್ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುವ ಪ್ರಮುಖ ಬೇಡಿಕೆಯೊಂದಿಗೆ ಹಲವು ಬೇಡಿಕೆಗಳ ಮನವಿಯನ್ನು ಅತಿಥಿಯಾಗಿ ಆಗಮಿಸಿದ್ದ ಸಚಿವರಿಗೆ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಸಮಾರಂಭ ಉದ್ಘಾಟಿಸಿದ ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಸಂಘದ ಮೈಸೂರು ಜಿಲ್ಲಾ ಸಮಿತಿಯಲ್ಲಿ ಮೂರೂವರೆ ಸಾವಿರ ಸದಸ್ಯರು ಇದ್ದು, ನಿಮ್ಮ (ವಿದ್ಯುತ್ ಗುತ್ತಿಗೆದಾರರು) ಸಹಕಾರದಿಂದ ನಿಗಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಸಂಬಂಧಿಸಿದಂತೆ ಪುನರ್ ವಸತಿ ಕಲ್ಪಿಸಲು ಈ ಭಾಗದ ಸಂಘದ ಸದಸ್ಯರು ನಿಗಮದೊಂದಿಗೆ ಉತ್ತಮವಾಗಿ ಕಾರ್ಯಾಚರಣೆ ನಡೆಸಿದರು. ಇದರಿಂದ ಸರ್ಕಾರಿ ಸಂಸ್ಥೆ ಗಳ ಪೈಕಿ ನಿಗಮಕ್ಕೆ ಒಳ್ಳೆಯ ಹೆಸರು ಬಂದಿತು. ನಿಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ (ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳ ವ್ಯಾಪ್ತಿ) 100ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರ ಸ್ಕಾರ ನೀಡಲಾಯಿತು. ಜೊತೆಗೆ ಮೈಸೂರು, ಶಿವಮೊಗ್ಗ, ಬಾಗಲಕೋಟೆ ಜಿಲ್ಲಾ ಸಮಿತಿಗಳಿಗೆ ನೂತನವಾಗಿ ಆಯ್ಕೆ ಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಕೆಇಐ ಇಂಡಸ್ಟ್ರೀಸ್‍ನ ಮುಖ್ಯ ವ್ಯವ ಸ್ಥಾಪಕ ಜೆ.ಕೆ.ಅನಿಲ್ ಕುಮಾರ್, ಸಂಘದ ಮೈಸೂರು ಜಿಲ್ಲಾ ಸಮಿತಿ ಸಲಹೆಗಾರ ಹಾಗೂ ರಾಜ್ಯ ಸಮಿತಿ ಮಾಜಿ ಉಪಾಧ್ಯಕ್ಷ ಸಿ.ರಮೇಶ್, ಸಂಘದ ಮೈಸೂರು ಜಿಲ್ಲಾಧ್ಯಕ್ಷ ಎಂ.ಆರ್.ಧರ್ಮವೀರ ಮತ್ತಿತರರು ಹಾಜರಿದ್ದರು.

Translate »